ಎಕ್ಸೆಲ್ ಪುಟ್ಟಿ

ನಿಮ್ಮ ಗೋಡೆ ಸರ್ಫೇಸ್‌ಗಳಿಗೆ ಮಾರ್ಬಲ್‌ ರೀತಿಯ ಫಿನಿಶ್‌ ಬೇಕಿದೆಯೇ? ಬಿರ್ಲಾ ವೈಟ್‌ ಎಕ್ಸೆಲ್‌‌ ಪುಟ್ಟಿಯು ನೀವು ಹುಡುಕುತ್ತಿರುವಂತೆಯೇ ಇದೆ!

Loading

ಎಕ್ಸೆಲ್ ಪುಟ್ಟಿ

ನಿಮ್ಮ ಗೋಡೆ ಸರ್ಫೇಸ್‌ಗಳಿಗೆ ಮಾರ್ಬಲ್‌ ರೀತಿಯ ಫಿನಿಶ್‌ ಬೇಕಿದೆಯೇ? ಬಿರ್ಲಾ ವೈಟ್‌ ಎಕ್ಸೆಲ್‌‌ ಪುಟ್ಟಿಯು ನೀವು ಹುಡುಕುತ್ತಿರುವಂತೆಯೇ ಇದೆ!
ಅವಲೋಕನ
ಬಿರ್ಲಾ ವೈಟ್‌ ಎಕ್ಸೆಲ್‌‌ ಪುಟ್ಟಿಯು ವೈಟ್‌ ಸಿಮೆಂಟ್ ಆಧರಿತ ಪುಟ್ಟಿಯಾಗಿದ್ದು, ಹಂಟರ್ ವೈಟ್‌ನೆಸ್‌ ಸ್ಕೇಲ್‌ನಲ್ಲಿ 94.5% ಸ್ಕೋರ್ ಹೊಂದಿದೆ. ಸಂಪೂರ್ಣ ವೈಟ್‌ನೆಸ್‌ ಮತ್ತು ಪ್ರೀಮಿಯಂ ಮಾರ್ಬಲ್‌ ರೀತಿಯ ಫಿನಿಶ್ ಅನ್ನು ನಿಮ್ಮ ವಾಲ್‌ಗಳಿಗೆ ನೀಡುತ್ತದೆ.
ಗ್ಯಾಲರಿ
ಉತ್ಪನ್ನ ಮುಖ್ಯಾಂಶಗಳು
ಪರಿಪೂರ್ಣ ವೈಟ್ನೆಸ್
ಮಾರ್ಬಲ್ ರೀತಿಯ ಫಿನಿಶಿಂಗ್
ಪ್ರಿ-ವೆಟ್ಟಿಂಗ್ಮುಕ್ತ
ಲಕ್ಷಣಗಳು
 • ಸಂಪೂರ್ಣ ವೈಟ್‌ನೆಸ್ (ಹಂಟರ್‌ ವೈಟ್‌ನೆಸ್ ಸ್ಕೇಲ್‌ನಲ್ಲಿ +94.5%)
 • ವಾಟರ್ ರೆಸಿಸ್ಟೆಂಟ್‌
 • ಆಂಟಿ ಕಾರ್ಬನೇಶನ್ ಪ್ರಾಪರ್ಟಿಯನ್ನು ಹೊಂದಿದೆ
 • ಪ್ರಮಾಣೀಕರಿಸಿದ ಪರಿಸರ ಸ್ನೇಹಿ ಉತ್ಪನ್ನ
 • ಶೂನ್ಯ ವಿಒಸಿಗಳು
 • ದುರ್ಗಂಧ ರಹಿತ
ಲಾಭಗಳು
 • ಪ್ರೀಮಿಯಂ, ಮಾರ್ಬಲ್‌ ರೀತಿಯ ಫಿನಿಶ್ ನೀಡುತ್ತದೆ
 • ಬಣ್ಣದ ನಿಜವಾದ ಟೋನ್ ಒದಗಿಸುತ್ತದೆ
 • ಅಧಿಕ ಕವರೇಜ್‌
 • ಮೊದಲೇ ಒದ್ದೆ ಮಾಡಬೇಕಾದ ಅಗತ್ಯವಿಲ್ಲ
 • ಕ್ಯೂರಿಂಗ್ ಅಗತ್ಯವಿಲ್ಲ
 • ಇದರ ಮೇಲೆ ಯಾವುದೇ ರೀತಿಯ ಪೇಂಟ್ ಅಪ್ಲಿಕೇಶನ್‌ ಅನ್ನು ಒಪ್ಪಿಕೊಳ್ಳುತ್ತದೆ
 • ಸವಕಳಿಯನ್ನು ತಡೆಯುತ್ತದೆ
ಅಪ್ಲಿಕೇಶನ್‌ಗಳು
 • ಒಳ ಗೋಡೆಗಳು
 • ಹೊರ ಗೋಡೆಗಳು

The technology used to manufacture this product is ‘Patent Pending’.

ತಾಂತ್ರಿಕ ವಿಶೇಷಣಗಳು
Sr.No ಟೆಕ್ನಿಕಲ್ ಪ್ಯಾರಾಮೀಟರ್ ವಿಶೇಷಣಗಳು ವಿಶಿಷ್ಟ‌ ಶ್ರೇಣಿ
1 *ಕವರೇಜ್ (ಚದರಮೀಟರ್/ ಕೆಜಿ/ ಎರಡುಕೋಟ್) 1.67-1.95 ಇನ್ ಹೌಸ್
2 ಪಾಟ್ ಬಾಳಿಕೆ (ಗಂಟೆಗಳು) 3.0-3.5 ಇನ್ ಹೌಸ್
3 ಟೆನ್ಸೈಲ್ ಅಂಟಿಕೊಳ್ಳುವಿಕೆ ಸಾಮರ್ಥ್ಯ (N/m2) ≥ 1.1 EN 1348
4 ನೀರಿನ ಕ್ಯಾಪಿಲರಿ ಹೀರಿಕೊಳ್ಳುವಿಕೆ (ಮಿಲೀ), 30 ನಿಮಿಷ @ 28 ದಿನಗಳು < 0.60 ಕರ್ಸ್ಟೆನ್ ಟ್ಯೂಬ್
5 ಕುಗ್ಗಿಸುವ ಸಾಮರ್ಥ್ಯ @ 28 ದಿನಗಳು (N/m2) 3.5-7.5 EN 1015-11
6 ಭಾರೀ ಡೆನ್ಸಿಟಿ (g/cm3) 0.8-1.0 ಇನ್ ಹೌಸ್
* ಈ ಮೌಲ್ಯ ನಯವಾದ ಮೇಲ್ಮೈಗೆ ಸಂಬಂಧಿಸಿದೆ; ಅದಾಗ್ಯೂ ಮೇಲ್ಮೈ ವಿನ್ಯಾಸ ಆಧರಿಸಿ ಇದು ಬದಲಾಗಬಹುದು.
ಪದೇ ಪದೇ ಕೇಳಲಾದ ಪ್ರಶ್ನೆಗಳು
Show All
ಬಿರ್ಲಾ ವೈಟ್‌ ಎಕ್ಸೆಲ್‌‌ ಪುಟ್ಟಿ ಪ್ರೀಮಿಯಂ ಗುಣಮಟ್ಟದ ಬೇಸ್ ಕೋಟ್ ಆಗಿದ್ದು, ಅತ್ಯಂತ ಹೀರಿಕೊಳ್ಳುವ ಸಿಮೆಂಟ್ ಸಬ್‌ಸ್ಟ್ರೇಟ್‌ಗಳ ಪೊರೋಸಿಟಿಯನ್ನು ಕವರ್ ಮಾಡಲು ಸಹಾಯ ಮಾಡುತ್ತದೆ. ಟಾಪ್‌ಕೋಟ್‌ ಎಮಲ್ಷನ್‌ಗಳ ಕಾರ್ಯನಿರ್ವಹಣೆಯನ್ನು ವೃದ್ಧಿಸಲು ನಿಮ್ಮ ಗೋಡೆಗಳಿಗೆ ಅತ್ಯಂತ ಹೆಚ್ಚಿನ ವೈಟ್‌ನೆಸ್ ಅನ್ನು ನೀಡುತ್ತದೆ ಮತ್ತು ನಿಮ್ಮ ಗೋಡೆಗಳಿಗೆ ಮಾರ್ಬಲ್‌ ರೀತಿಯ ಫಿನಿಶ್ ನೀಡುತ್ತದೆ.
ಸಾಮಾನ್ಯ ಪುಟ್ಟಿಯು ಬೇಸ್ ಕೋಟ್ ಅನ್ನು ನೀಡುತ್ತದೆಯಾದರೂ, ಬಿರ್ಲಾ ವೈಟ್‌ ಎಕ್ಸೆಲ್‌‌ ಪುಟ್ಟಿಯು ಹೆಚ್ಚಿನ ಕವರೇಜ್‌, ಹೆಚ್ಚಿನ ವೈಟ್‌ನೆಸ್‌ ಮತ್ತು ಪ್ರೀಮಿಯಂ ಫಿನಿಶ್ ಅನ್ನು ನೀಡುತ್ತದೆ. ಇದರ ಜೊತೆಗೆ, ಪ್ರೀ ವೆಟ್ಟಿಂಗ್‌ ಫ್ರೀ ಪ್ರಾಪರ್ಟಿಯಾಗಿದ್ದು, ವೈಟ್ ಸಿಮೆಂಟ್ ಆಧರಿತ ಪುಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಈ ವಿಧಾನವನ್ನು ಅಳವಡಿಸಿಕೊಂಡಿದೆ.
ಎರಡೂ ಉತ್ಪನ್ನಗಳಿಗೆ ಅಪ್ಲೈ ಮಾಡುವ ಪ್ರಕ್ರಿಯೆ ಒಂದೇ ಆಗಿದ್ದರೂ, ಸಾಮಾನ್ಯ ಪುಟ್ಟಿಗೆ ಪ್ರೀ ವೆಟ್ಟಿಂಗ್‌ ಅಗತ್ಯವಿದೆ. ಆದರೆ ಬಿರ್ಲಾ ವೈಟ್‌ ಎಕ್ಸೆಲ್‌‌ ಪುಟ್ಟಿಗೆ ಹಾಗೆ ಮಾಡಬೇಕಿಲ್ಲ. ಪೇಂಟ್ ಮಾಡುವುದಕ್ಕೂ ಮೊದಲು ಪ್ರೈಮರ್‌ ಅನ್ನು ಅಪ್ಲೈ ಮಾಡುವುದು ಎಕ್ಸೆಲ್‌ ಪುಟ್ಟಿಯ ವಿಚಾರದಲ್ಲಿ ಅಗತ್ಯವಿಲ್ಲ.
ಬಿರ್ಲಾ ವೈಟ್‌ ಎಕ್ಸೆಲ್‌‌ ಪುಟ್ಟಿಯ ವೈಟ್‌ನೆಸ್‌ ಅನ್ನು (ಐಎಸ್ 8042) ಹಂಟರ್ ವೈಟ್‌ನೆಸ್‌ ಸ್ಕೇಲ್ (ಎಚ್‌ಡಬ್ಲ್ಯೂ) ನಲ್ಲಿ ಅಳೆಯಲಾಗಿದ್ದು, ಪ್ರಮಾಣಿತ ರೆಫರೆನ್ಸ್‌ ಸಾಮಗ್ರಿಯೊಂದಿಗೆ ಪ್ರತಿಫಲನದೊಂದಿಗೆ ಹೋಲಿಸಲಾಗುತ್ತದೆ. ಎಚ್‌ಡಬ್ಲ್ಯೂದಲ್ಲಿ ಸಾಮಾನ್ಯ ಪುಟ್ಟಿಯ +93%ಗೆ ಹೋಲಿಸಿದರೆ ಬಿರ್ಲಾ ವೈಟ್‌ ಎಕ್ಸೆಲ್‌‌ ಪುಟ್ಟಿಯ ಸ್ಕೋರ್ +94.5% ಆಗಿದೆ.
ಇಲ್ಲ. ಬಿರ್ಲಾ ವೈಟ್‌ ಎಕ್ಸೆಲ್‌‌ ಪುಟ್ಟಿಗೆ ಪ್ರೀ ವೆಟ್ಟಿಂಗ್‌ ಆಗಲೀ ಕ್ಯೂರಿಂಗ್ ಆಗಲಿ ಅಗತ್ಯವಿಲ್ಲ. ಅಷ್ಟಕ್ಕೂ, ಇದರ ವಿಶಿಷ್ಟ ಫಾರ್ಮ್ಯುಲೇಶನ್‌ನಿಮದಾಗಿ, ಇದು ನೀರನ್ನು ಉಳಿಸುವಲ್ಲೂ ಸಹಾಯ ಮಾಡುತ್ತದೆ.
ಬಿರ್ಲಾ ವೈಟ್ ಎಕ್ಸೆಲ್ ಪುಟ್ಟಿಯು ಪ್ರೀಮಿಯಂ ಕ್ವಾಲಿಟಿ ಬೇಸ್ ಕೋಟ್ ಆಗಿದ್ದು, ಅಗತ್ಯ ಶೇಡ್‌ಗಳಿಗೆ ಟಿಂಟ್ ಮಾಡಲು ಸಾಧ್ಯವಿಲ್ಲ. ಆದರೆ, ಈ ಬೇಸ್ ಕೋಟ್‌ ಮೇಲೆ ಬಳಸುವ ಟಾಪ್‌ಕೋಟ್ ಅನ್ನು ಶೇಡ್‌ಗೆ ತಕ್ಕಂತೆ ಟಿಂಟ್‌ ಮಾಡಬಹುದು.
ಇದು 1.86-2.04 ಚದರ ಮೀಟರ್ ಪ್ರತಿ ಕಿಲೋಗೆ ಒಂದು ಕೋಟ್‌ನಲ್ಲಿ ಕವರ್ ಮಾಡುತ್ತದೆ. ಬದಲಿಗೆ, ಸಾಮಾನ್ಯ ಪುಟ್ಟಿಯು ಒಂದು ಕೋಟ್‌ನಲ್ಲಿ 1.67 ಚದರ ಮೀಟರ್‌ ಪ್ರತಿ ಕಿಲೋಗೆ ಕವರ್ ಮಾಡುತ್ತದೆ.
ಬಿರ್ಲಾ ವೈಟ್ ಎಕ್ಸೆಲ್ ಪುಟ್ಟಿಯನ್ನು ಅಂತಿಮ ಫಿನಿಶ್‌ಗೆ ಬಳಸಬಹುದು. ಟಾಪ್‌ಕೋಟ್ ಆಗಿ 2-3 ಕೋಟ್ ಉತ್ತಮ ಗುಣಮಟ್ಟದ ಎಮಲ್ಷನ್‌ ಪೇಂಟ್ ಅನ್ನು ಬಳಸುವಂತೆ ನಾವು ಶಿಫಾರಸು ಮಾಡುತ್ತೇವೆ.
ಸದ್ಯ, ಬಿರ್ಲಾ ವೈಟ್‌ ಎಕ್ಸೆಲ್‌‌ ಪುಟ್ಟಿಯು 1 ಕಿಲೋ, 5 ಕಿಲೋ, 20 ಕಿಲೋ ಮತ್ತು 40 ಕಿಲೋ ಪ್ಯಾಕ್‌ ಗಾತ್ರದಲ್ಲಿ ಲಭ್ಯವಿದೆ.
ಯಾವುದೇ ರೀತಿಯ ಎಕ್ಸ್‌ಪೈರಿ ದಿನಾಂಕ ಇಲ್ಲ. ಆದರೆ ಉತ್ಪಾದನೆಯಾದ ದಿನಾಂಕದಿಂದ 9 ತಿಂಗಳುಗಳೊಳಗೆ ಬಿರ್ಲಾ ವೈಟ್‌ ಎಕ್ಸೆಲ್‌‌ ಪುಟ್ಟಿಯನ್ನು ಬಳಸುವಂತೆ ನಾವು ಶಿಫಾರಸು ಮಾಡುತ್ತೇವೆ.
ಬಿರ್ಲಾ ವೈಟ್‌ ಎಕ್ಸೆಲ್‌‌ ಪುಟ್ಟಿಯು ಒಣಗಲು ಸಮಯ ತೆಗೆದುಕೊಳ್ಳುತ್ತದೆ. ಇದರಿ ಮಳೆಗಾಲದಲ್ಲಿ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಇದು ನಿಮ್ಮ ಪ್ರಕ್ರಿಯೆಯ ಮೇಲೆ ಪರಿಣಾಮ ಉಂಟು ಮಾಡಬಹುದು ಮತ್ತು ನೀವು ನಿರೀಕ್ಷಿಸಿದ ಫಲಿತಾಂಶವನ್ನು ನೀಡದೇ ಇರಬಹುದು. ಹೀಗಾಗಿ, ಈ ಉತ್ಪನ್ನವನ್ನು ಒಳಗೆ ಅಥವಾ ಹೊರಗಿನ ಗೋಡೆಗಳ ಮೇಲೆ ಮಳೆಗಾಲದಲ್ಲಿ ಅಪ್ಲೈ ಮಾಡುವುದನ್ನು ನಾವು ಶಿಫಾರಸು ಮಾಡುವುದಿಲ್ಲ.
ಬಿರ್ಲಾ ವೈಟ್‌ ಎಕ್ಸೆಲ್‌‌ ಪುಟ್ಟಿಯನ್ನು ಅಪ್ಲೈ ಮಾಡುವಾಗ, ಗೋಡೆಯ ಮೇಲ್ಮೈ ಮೇಲೆ ಸಡಿಲವಾದ ಭಾಗಗಳು ಮತ್ತು ಕೊಳೆ ಇಲ್ಲ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು. ಬಳಸುವುದಕ್ಕೂ ಮೊದಲು ನೀವು ಚೆನ್ನಾಗಿ ತಿರುಗಿಸಬೇಕು ಮತ್ತು ಸುರಕ್ಷತಾ ಕನ್ನಡಕಗಳನ್ನು ಧರಿಸಬೇಕು ಮತ್ತು ಧೂಳು ಉಸಿರೆಳೆದುಕೊಳ್ಳುವುದರಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಮಾಸ್ಕ್‌ಗಳನ್ನು ಧರಿಸಬೇಕು. ಕಣ್ಣಿಗೆ ಸೋಕಿದರೆ, ತಕ್ಷಣವೇ ತೊಳೆದುಕೊಳ್ಳಿ ಮತ್ತು ವೈದ್ಯಕೀಯ ನೆರವನ್ನು ಪಡೆದುಕೊಳ್ಳಿ. ಅಂತಿಮವಾಗಿ, ಈ ಉತ್ಪನ್ನವನ್ನು ತಂಪಾದ, ಒಣ ಸ್ಥಳದಲ್ಲಿ ಸಂಗ್ರಹಿಸಿಡಬೇಕು ಮತ್ತು ಮಕ್ಕಳ ಕೈಗೆ ಸಿಗದಂತೆ ದೂರದಲ್ಲಿಡಬೇಕು.
ಹೌದು, ಬಿರ್ಲಾ ವೈಟ್‌ ಎಕ್ಸೆಲ್‌ ಪುಟ್ಟಿಯು ಗ್ರೀನ್‌ಪ್ರೋ ಮಾನದಂಡಗಳನ್ನು ಪೂರೈಸುತ್ತದೆ ಮತ್ತು ಗ್ರೀನ್‌ಪ್ರೋ ಪ್ರಮಾಣೀಕರಣಕ್ಕೆ ಅರ್ಹವಾಗಿದೆ.
ತರಬೇತಿ ಹೊಂದಿರುವ ಮತ್ತು ಬದ್ಧ ಸಿವಿಲ್ ಇಂಜಿನಿಯರುಗಳ ತಂಡವನ್ನು ಭಾರತದಾದ್ಯಂತ ಸಿಎಎಸ್‌ಸಿ ಬೆಂಬಲಕ್ಕೆ (ಗ್ರಾಹಕ ಅಪ್ಲಿಕೇಶನ್ ಬೆಂಬಲ ಕೋಶ) ಬಿರ್ಲಾ ವೈಟ್‌ ಹೊಂದಿದೆ. ಈ ಸಿವಿಲ್ ಇಂಜಿನಿಯರುಗಳು ಆನ್‌ ಸೈಟ್ ತಾಂತ್ರಿಕ ಬೆಂಬಲವನ್ನು ಒದಗಿಸುತ್ತಾರೆ ಮತ್ತು ಆನ್‌ ಸೈಟ್ ಸ್ಯಾಂಪ್ಲಿಂಗ್ ಒದಗಿಸುತ್ತಾರೆ. ವಿಶೇಷ ತರಬೇತಿ ಮತ್ತು ಆಧುನಿಕ ಪರಿಕರಗಳನ್ನು ಬಳಸಿ ಮೇಲ್ಮೈ ಫಿನಿಶಿಂಗ್‌ ಅಪ್ಲಿಕೇಟರ್‌ಗಳಿಗೆ ತರಬೇತಿ ನೀಡುತ್ತಾರೆ. ಅವರಿಗೆ ಇದು ಪರಿಣಿತಿ ಒದಗಿಸಲು ಮತ್ತು ವಿಶೇಷ ಬಿರ್ಲಾ ವೈಟ್ ಅಪ್ಲಿಕೇಟರ್‌ಗಳಾಗಲು ನೆರವಾಗುತ್ತದೆ.
ಪ್ರಸ್ತುತ ಆನ್‌ಲೈನ್ ಪಾವತಿಯ ಆಯ್ಕೆ ಇಲ್ಲ. ಹಾಗೂ, ನಾವು ನಮ್ಮ ಯಾವುದೇ ಉತ್ಪನ್ನಗಳನ್ನು ಸದ್ಯಕ್ಕೆ ಮನೆಗೆ ನೇರವಾಗಿ ತಲುಪಿಸುವುದಿಲ್ಲ. ಅವುಗಳನ್ನು ನಮ್ಮ ಸ್ಟಾಕಿಸ್ಟ್ ನೆಟ್‌ವರ್ಕ್ ಮೂಲಕ ಮಾರಾಟ ಮಾಡಲಾಗುತ್ತದೆ. ಆದರೆ, ಬಿರ್ಲಾ ವೈಟ್‌ ಎಕ್ಸೆಲ್‌ ಪುಟ್ಟಿ ಅಪ್ಲೈ ಮಾಡಲು ತರಬೇತಿ ಹೊಂದಿದ ಕಾಂಟ್ರಾಕ್ಟರ್ ಬೇಕಾಗುತ್ತದೆ. ಹೀಗಾಗಿ ನಾವು ನಮ್ಮ ಅಧಿಕೃತ ರಿಟೇಲರ್/ಸ್ಟಾಕಿಸ್ಟ್ ಮೂಲಕ ಖರೀದಿ ಮಾಡುವಂತೆ ಶಿಫಾರಸು ಮಾಡುತ್ತೇವೆ. ಅವರು ತರಬೇತಿ ಹೊಂದಿರುವ ಕುಶಲ ಗುತ್ತಿಗೆದಾರರೊಂದಿಗೆ ಸಂಪರ್ಕ ಸಾಧಿಸಲು ನಿಮಗೆ ಸಹಾಯ ಮಾಡುತ್ತಾರೆ. ಇಂಡಿಯಾ ಮಾರ್ಟ್‌ನಲ್ಲಿ ನಮ್ಮ ಉತ್ಪನ್ನ ಕ್ಯಾಟಲಾಗ್ ಅನ್ನು ನೀವು ನೋಡಬಹುದು.
ಲಭ್ಯವಿರುವ ಪ್ಯಾಕ್ ಸೈಜ್ ಗಳು