ಎಕ್ಸ್‌ಟೋಕೇರ್ ಪ್ರೈಮರ್
ಬಿರ್ಲಾ ವೈಟ್‌ಎಕ್ಸ್‌ಟೋಕೇರ್ ಪ್ರೈಮರ್ 7 ಪಟ್ಟು* ಹೆಚ್ಚು ಅಧೆಶನ್ ಅನ್ನು ಒದಗಿಸುವುದರಿಂದ ಗೋಡೆಗಳಿಂದ ಪೇಂಟ್‌ ಹರಿದು ಬೀಳುವುದಿಲ್ಲ!
ಎಕ್ಸ್‌ಟೋಕೇರ್ ಪ್ರೈಮರ್
ಬಿರ್ಲಾ ವೈಟ್‌ಎಕ್ಸ್‌ಟೋಕೇರ್ ಪ್ರೈಮರ್ 7 ಪಟ್ಟು* ಹೆಚ್ಚು ಅಧೆಶನ್ ಅನ್ನು ಒದಗಿಸುವುದರಿಂದ ಗೋಡೆಗಳಿಂದ ಪೇಂಟ್‌ ಹರಿದು ಬೀಳುವುದಿಲ್ಲ!
ಮುನ್ನೋಟ
ಬಿರ್ಲಾ ವೈಟ್‌ ಎಕ್ಸ್‌ಟೋಕೇರ್ ಎಂಬುದು ವೈಟ್‌ ಸಿಮೆಂಟ್ ಆಧರಿತ, ಪಾಲಿಮರ್ ಮಾಡಿಫೈಡ್‌, ಹೊರ ಗೋಡೆಯ ಪ್ರೈಮರ್ ಆಗಿದ್ದು, ಮಾರ್ಕೆಟ್‌ನಲ್ಲಿ ಲಭ್ಯವಿರುವ ಯಾವುದೇ ಅಕ್ರಿಲಿಕ್ ವಾಲ್ ಪ್ರೈಮರ್‌ಗಿಂತ 7 ಪಟ್ಟು ಹೆಚ್ಚು* ಅಧೆಶನ್ ಅನ್ನು ಒದಗಿಸುತ್ತದೆ. ಇದು ನಿಮ್ಮ ಗೋಡೆಯ ಟಾಪ್‌ಕೋಟ್‌ ಹರಿಯುವುದನ್ನು ತಡೆಯುತ್ತದೆ ಮತ್ತು ಹಲವು ವರ್ಷಗಲವರೆಗೆ ನಿಮ್ಮ ಗೋಡೆಗಳನ್ನು ರಕ್ಷಿಸುತ್ತದೆ. ರಕ್ಷಣೆಯ ಹೆಚ್ಚುವರಿ ಪದರವನ್ನು ಸೇರಿಸುವುದರ ಜೊತೆಗೆ, ವಾಲ್‌ ಟಾಪ್‌ಕೋಟ್‌ನ ನಿಜವಾದ ಟೋನ್‌ಗಲನ್ನು ಒದಗಿಸಲು ಅಗತ್ಯವಿರುವ ಉತ್ತಮ ಒಪಾಸಿಟಿಯನ್ನು ಮತ್ತು ವೈಟ್‌ನೆಸ್ ಅನ್ನು ಈ ಉತ್ಪನ್ನವು ಒದಗಿಸುತ್ತದೆ.
ಗ್ಯಾಲರಿ
ಉತ್ಪನ್ನ ಮುಖ್ಯಾಂಶಗಳು
ಟಾಪ್ ಕೋಟ್ಗೆ ಅತ್ಯುತ್ತಮ ಅಂಟಿಕೊಳ್ಳುವಿಕೆ
ಟಾಪ್ಕೋಟ್ ಕಳಚಿ ಬೀಳುವುದನ್ನು ತಡೆಗಟ್ಟುತ್ತದೆ
ಅತ್ಯುತ್ತಮ ಅಪಾರ ದರ್ಶಕತೆ ಮತ್ತು ವೈಟ್ನೆಸ್
ಆರ್ಸಿಸಿ ರಚನೆಗೆ ತುಕ್ಕು ಹಿಡಿಯದಂತೆ ರಕ್ಷಿಸುತ್ತದೆ
ವೈಶಿಷ್ಟ್ಯಗಳು
 • ಒಪಾಸಿಟಿ ಮತ್ತು ವೈಟ್‌ನಲ್ಲಿ ಶ್ರೇಣಿಯಲ್ಲೇ ಉತ್ತಮ
 • ಆಂಟಿ ಕಾರ್ಬೊನೇಶನ್‌ ಪ್ರಾಪರ್ಟಿಯನ್ನು ಒಳಗೊಂಡಿದೆ
 • 7 ಪಟ್ಟು ಹೆಚ್ಚು* ಅಧೆಶನ್‌ ಅನ್ನು ಇತರ ಪ್ರೈಮರ್‌ಗಳಿಗಿಂತ ಟಾಪ್‌ಕೋಟ್‌ನಲ್ಲಿ ಒದಗಿಸುತ್ತದೆ
 • ವಿಒಸಿ ಇಲ್ಲ (ವೊಲಟೈಲ್ ಆರ್ಗ್ಯಾನಿಕ್ ಕಾಂಪೌಂಡ್ಸ್)
 • ಆಂಟಿ ಅಲ್ಕಲಿ
 • ಪರಿಸರ ಸ್ನೇಹಿ
 • ಅಧಿಕ ಬಾಳಿಕೆ ಬರಬಲ್ಲ
ಪ್ರಯೋಜನಗಳು
 • ಸವಕಳಿಯಾಗದಂತೆ ಆರ್‌ಸಿಸಿ ರಚನೆಯನ್ನು ರಕ್ಷಿಸುತ್ತದೆ
 • ಟಾಪ್‌ಕೋಟ್ ಹರಿಯದಂತೆ ತಡೆಯುತ್ತದೆ
 • ಅಪ್ಲೈ ಮಾಡಲು ಸುಲಭ
 • ಎತ್ತರದ ಕಟ್ಟಡಕ್ಕೆ ಅಪ್ಲೈ ಮಾಡಲು ಅನುಕೂಲ
 • ಒದ್ದೆ/ತೇವಾಂಶ ಇರುವ ಮೇಲ್ಮೈ ಮೇಲೆ ಅಪ್ಲೈ ಮಾಡಬಹುದು
 • ಅತಿನೇರಳೆ ಕಿರಣಗಳು ಮತ್ತು ಹವಾಮಾನ ಬದಲಾವಣೆಯ ಪರಿಣಾಮವನ್ನು ತಡೆಯುತ್ತದೆ
ಅಪ್ಲಿಕೇಶನ್‌ಗಳು
 • ಹೊರ ಗೋಡೆಗಳು
 • ಆರ್‌ಸಿಸಿ ಸ್ಟ್ರಕ್ಚರ್‌ಗಳು/ಪ್ಲಾಸ್ಟರ್‌ ಸರ್ಫೇಸ್‌ಗಳು
ತಾಂತ್ರಿಕ ವಿವರಗಳು
Sr.No ತಾಂತ್ರಿಕ ಮಾನದಂಡ ವಿಶೇಷ ವಿವರಗಳು ವಿಶಿಷ್ಟ‌ ಶ್ರೇಣಿ
1 *Coverage (square metre / kg/ Coat) [On Ideal smooth surface] 7.90-9.75 In House
2 Pot life (Hours) 3.0-3.5 In House
3 Drying time @ 25±2 ºC
-Touch Dry
-Hard Dry
Max 1 hrs.
Min. 6 hrs.
In House
In House
4 VOC (g/kg) Nil ASTM 6886
5 Bulk Density (g/cm3) 0.80-0.90 In House
* This value is on smooth surface; however this may change according to surface texture.
ಪದೇ ಪದೇ ಕೇಳಲಾದ ಪ್ರಶ್ನೆಗಳು
ನಿಮ್ಮ ಗೋಡೆಗಳಿಗೆ ಪೇಂಟ್ ಮಾಡುವುದಕ್ಕೂ ಮೊದಲು, ಅವುಗಳನ್ನು ಸಿದ್ಧಪಡಿಸುವುದು ಅತ್ಯಂತ ಪ್ರಮುಖವಾಗಿರುತ್ತದೆ. ಇದರಿಂದಾಗಿ ನಿಮ್ಮ ಪೇಂಟ್‌ ತುಂಬಾ ಕಾಲ ಉಳಿಯುತ್ತದೆ. ಪೇಂಟ್ ಮತ್ತು ಸರ್ಫೇಸ್‌ ಮಧ್ಯೆ ಅಧೆಶನ್‌ ಮಾಡಲು ವಾಲ್‌ ಪ್ರೈಮರ್ ಸಹಾಯ ಮಾಡುತ್ತದೆ ಮತ್ತು ಪೇಂಟ್‌ನ ಬಾಳಿಕೆಯನ್ನು ಹೆಚ್ಚಿಸುತ್ತದೆ ಮತ್ತು ಪೇಂಟ್ ಮಾಡಿದ ನಂತರವೂ ಮೇಲ್ಮೈ ಅನ್ನು ರಕ್ಷಿಸುತ್ತದೆ. ಗೋಡೆಯ ಮೇಲ್ಭಾಗದಲ್ಲಿರುವ ಕುಳಿಗಳು ಮತ್ತು ಬಿರುಕುಗಳನ್ನು ವಾಲ್ ಪ್ರೈಮರ್‌ ಕವರ್ ಮಾಡುತ್ತದೆ ಮತ್ತು ಫ್ಲೇಕಿಂಗ್, ಹಳದಿಯಾಗುವುದು, ಹರಿದು ಬೀಳುವುದು ಮತ್ತು ಹೊಪ್ಪಳಿಕೆಗಳಿಂದ ಮೇಲ್ಮೈಯನ್ನು ರಕ್ಷಿಸುತ್ತದೆ.
ಬಿರ್ಲಾ ವೈಟ್‌ ಎಕ್ಸ್‌ಟೋಕೇರ್ ಎಂಬುದು ವೈಟ್‌ ಸಿಮೆಂಟ್ ಆಧರಿತ, ಪಾಲಿಮರ್ ಮಾಡಿಫೈಡ್‌, ನೀರಿನಿಂದ ತೆಳ್ಳಗಾಗಿಸಬಹುದಾದ ಅಂಡರ್‌ಕೋಟ್‌ ವಾಲ್‌ ಪ್ರೈಮರ್‌ ಆಗಿದ್ದು, ಇದನ್ನು ಪೇಂಟ್ ಮಾಡುವುದಕ್ಕೂ ಮೊದಲು ಹೊರ ಗೋಡೆಗಳ ಮೇಲೆ ಬಳಸಬಹುದಾಗಿದೆ.
ನೀರಿನಿಂದ ತೆಳ್ಳಗಾಗಿಸಬಹುದಾದ ಉತ್ಪನ್ನವಾಗಿರುವ ಬಿರ್ಲಾ ವೈಟ್‌ಎಕ್ಸ್‌ಟೋಕೇರ್ ಪ್ರೈಮರ್ ಅನ್ನು ಒದ್ದೆ/ತೇವಾಂಶ ಇರುವ ಮೇಲ್ಮೈಗೆ ಅಪ್ಲೈ ಮಾಡಬಹುದಾಗಿದೆ. ಮಾರ್ಕೆಟ್‌ನಲ್ಲಿ ಇರುವ ಇತರ ವಾಲ್‌ ಪ್ರೈಮರ್‌ಗಳಿಗೆ ಹೋಲಿಸಿದರೆ ಇದನ್ನು ಅಪ್ಲೈ ಮಾಡುವುದು ಸುಲಭವಾಗಿದೆ. ಸಿಮೆಂಟ್‌ ಪ್ಲಾಸ್ಟರ್‌ ಮಾಡಿದ/ಆರ್‌ಸಿಸಿ ಮೇಲ್ಮೈಗಳ ಮೇಲೆ ನೇರವಾಗಿ ಬಳಸಲು ಇದು ಸೂಕ್ತವಾಗಿದೆ. ಅದಕ್ಕಿಂತ ಹೆಚ್ಚಾಗಿ, ಇತರ ಪ್ರೈಮರ್‌ಗಳಿಗೆ ಹೋಲಿಸಿದರೆ ಇದು ಹೆಚ್ಚು ಕೈಗೆಟಕುವಂತದ್ದೂ ಆಗಿದೆ. ಇದು ನಿಮ್ಮ ಗೋಡೆಗೆ 7 ಪಟ್ಟು ಹೆಚ್ಚು* ಅಧೆಶನ್ ಅನ್ನು ನೀಡುತ್ತದೆ ಮತ್ತು ಪೇಂಟ್‌ ಹರಿದು ಬೀಳುವುದನ್ನು ಕಡಿಮೆ ಮಾಡುತ್ತದೆ.
ಅಕ್ರಿಲಿಕ್ ಪ್ರೈಮರ್‌ಗೆ ವಿರುದ್ಧವಾಗಿ, ಬಿರ್ಲಾ ವೈಟ್‌ಎಕ್ಸ್‌ಟೋಕೇರ್ ಪ್ರೈಮರ್‌ಗೆ ಅಪ್ಲಿಕೇಶನ್‌ ನಂತರ ಯಾವುದೇ ಕ್ಯೂರಿಂಗ್ ಅಗತ್ಯವಿರುವುದಿಲ್ಲ ಮತ್ತು ಅಪ್ಲೈ ಮಾಡುವುದು ಸುಲಭವಾಗಿದೆ. ಇದು ಎತ್ತರದ ಗೋಡೆಗಳಿಗೆ ಚೆನ್ನಾಗಿರುತ್ತದೆ ಮತ್ತು ಶ್ರೇಣಿಯಲ್ಲೇ ಉತ್ತಮ ವೈಟ್‌ನೆಸ್ ಹಾಗೂ ಅಧಿಕ ಒಪಾಸಿಟಿಯನ್ನು ನೀಡುತ್ತದೆ. ಪ್ರೈಮರ್ 7 ಪಟ್ಟು ಹೆಚ್ಚು* ಅಧೆಶನ್‌ ಅನ್ನು ಟಾಪ್‌ಕೋಟ್‌ಗೆ ಮಾರ್ಕೆಟ್‌ನಲ್ಲಿರುವ ಯಾವುದೇ ಇತರ ಪ್ರೈಮರ್‌ಗಿಂತ ನೀಡುತ್ತದೆ. ಈ ಮೂಲಕ ಟಾಪ್‌ಕೋಟ್ ಹರಿಯುವುದನ್ನು ತಡೆಯುತ್ತದೆ. ಕೊನೆಯದಾಗಿ, ಇದು ಆರ್‌ಸಿಸಿ ಸ್ಟ್ರಕ್ಚರ್ ಸವಕಳಿಯಾಗುವುದನ್ನು ರಕ್ಷಿಸುತ್ತದೆ ಮತ್ತು ಇದರ ಉನ್ನತ ಗುಣಲಕ್ಷಣಗಳಿಗಾಗಿ ಪ್ರಮುಖ ರಾಷ್ಟ್ರೀಯ ಲ್ಯಾಬೊರೇಟರಿಗಳಿಂದ ಪ್ರಮಾಣೀಕರಿಸಲ್ಪಟ್ಟಿದೆ.
ಬಿರ್ಲಾ ವೈಟ್ ಎಕ್ಸ್‌ಟೋಕೇರ್ ಅನ್ನು ಅಪ್ಲೈ ಮಾಡುವುದಕ್ಕೂ ಮೊದಲು ಗೋಡೆಯನ್ನು ಸಿದ್ಧಪಡಿಸಲು, ಎಲ್ಲ ಸಡಿಲ ಸಾಮಗ್ರಿಗಳು, ಧೂಳು, ಕೊಳೆ, ತೈಲ ಇತ್ಯಾದಿಯನ್ನು ಮೇಲ್ಮೈಯಿಂದ ತೆಗೆದುಹಾಕಬೇಕಿದೆ. ಇದಕ್ಕಾಗಿ, ನೀವು ಸ್ಯಾಂಡ್‌ಪೇಪರ್, ಬ್ಲೇಡ್ ಅಥವಾ ವೈರ್ ಬ್ರಶ್‌ ಅನ್ನು ಬಳಸಬಹುದು. ಪುನಃ ಪೇಂಟ್ ಮಾಡುವುದಕ್ಕೂ ಮೊದಲು, ಮೇಲ್ಮೈ ಅನ್ನು 180 ಅಥವಾ 220 ಎಮೆರಿ ಪೇಪರ್‌ನಿಂದ ಉಜ್ಜಬೇಕು. ಇದರಿಂದಾಗಿ ಮೇಲ್ಮೈ ಮೃದುವಾಗುತ್ತದೆ.
ಬಿರ್ಲಾ ವೈಟ್ ಎಕ್ಸ್‌ಟೋಕೇರ್‌ಗೆ ಶಿಫಾರಸು ಮಾಡಿದ ಮಿಶ್ರಣ ಅನುಪಾತ 1 ಕಿಲೋ ಉತ್ಪನ್ನಕ್ಕೆ 1100 ಮಿ.ಲೀ ನೀರು ಆಗಿದೆ.
ಸ್ಲರಿ ಮಾಡಲು, 5 ನಿಮಿಷಗಳವರೆಗೆ ಮೆಕಾನಿಕಲ್ ಸ್ಟಿರರ್‌ನಿಂದ ಮಿಕ್ಸಿಂಗ್ ಮಾಡಬೇಕು. ಮ್ಯಾನ್ಯುಅಲ್ ಆಗಿ ಮಾಡಿದರೆ, 10-12 ನಿಮಿಷಗಳವರೆಗೆ ಮಿಕ್ಸ್‌ ಮಾಡಬೇಕು. ಅಂತಿಮ ಫಲಿತಾಂಶವು ಕ್ರೀಮಿ ಕನ್ಸಿಸ್ಟನ್ಸಿಗೆ ಸ್ಲರಿ ಬರಬೇಕು. ನೀವು ಸ್ಲರಿಯನ್ನು ಸಿದ್ಧಪಡಿಸಿದ ನಂತರ, ಉತ್ತಮ ಪಾಲಿಮರ್ ಹರಡುವಿಕೆಯನ್ನು ಪಡೆಯಲು 5 ನಿಮಿಷಗಳವರೆಗೆ ಬಿಡಿ. 3-3.5 ಗಂಟೆಗಳೊಳಗೆ ಇದನ್ನು ಬಳಸುತ್ತೀರಿ ಎಂಬುದನ್ನು ಖಚಿತಪಡಿಸಿ.
ಸ್ಲರಿಯನ್ನು ಸಮಗ್ರವಾಗಿ ಮಿಶ್ರ ಮಾಡಿದ ನಂತರ, ಮೇಲ್ಮೈಗೆ ಸಮಾನವಾಗಿ ಬಿರ್ಲಾ ವೈಟ್ ಎಕ್ಸ್‌ಟೋಕೇರ್ ಕೋಟ್ ಅಪ್ಲೈ ಮಾಡಿ. ಪೇಂಟಿಂಗ್ ಬ್ರಶ್ (0.1016 ಅಥವಾ 0.127 ಮೀಟರ್) ಅಥವಾ ರೋಲರ್‌ ಸಹಾಯದಿಂದ ಇದನ್ನು ನೀವು ಮಾಡಬಹುದು. ಟಾಪ್‌ಕೋಟ್ ಮಾಡುವುದಕ್ಕೂ ಮೊದಲು ಬಿರ್ಲಾ ವೈಟ್ ಎಕ್ಸ್‌ಟೋಕೇರ್‌ನ ಮೊದಲ ಕೋಟ್‌ ಒಣಗಲು ಕನಿಷ್ಠ 2-3 ಗಂಟೆಗಳವರೆಗೆ ಬಿಡಿ.
ಬಿರ್ಲಾ ವೈಟ್‌ಎಕ್ಸ್‌ಟೋಕೇರ್ ಪ್ರೈಮರ್ ಅನ್ನು ಅಪ್ಲೈ ಮಾಡುವಾಗ, ವಾಲ್ ಸರ್ಫೇಸ್ ಅನ್ನು ಪ್ರೀ ವೆಟ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಸ್ಲರಿಯನ್ನು ಮಿಕ್ಸಿಂಗ್ ಅನುಪಾತಕ್ಕೆ ಅನುಗುಣವಾಗಿ ಸಿದ್ಧಪಡಿಸಬೇಕು ಮತ್ತು ಸಿದ್ಧಪಡಿಸಿದ 3-3.5 ಗಂಟೆಗಳವರೆಗೆ ಬಳಸಬೇಕು. ಸಬ್‌ಸ್ಟ್ರೇಟ್‌ ಅಪ್ಲಿಕೇಶನ್‌ ವೇಳೆ ತೇವಾಂಶಯುತವಾಗಿರಬೇಕು ಮತ್ತು ದೀರ್ಘ ಅವಧಿಯವರೆಗೆ ಟಾಪ್‌ಕೋಟ್ ಅಪ್ಲೈ ಮಾಡದೇ ಇಡಬಾರದು. ನಿಮ್ಮ ರಕ್ಷಣೆಗೆ ಸುರಕ್ಷತೆ ಕನ್ನಡಗಳು ಮತ್ತು ಸೂಕ್ತ ನೋಸ್ ಮಾಸ್ಕ್‌ಗಳ ಬಳಕೆಯನ್ನು ಖಚಿತಪಡಿಸಿಕೊಳ್ಳಿ. ಅಂತಿಮವಾಗಿ, ಈ ಉತ್ಪನ್ನವನ್ನು ತಂಪಾದ, ಒಣ ಸ್ಥಳದಲ್ಲಿ ಸಂಗ್ರಹಿಸಿಡಬೇಕು ಮತ್ತು ಮಕ್ಕಳ ಕೈಗೆ ಸಿಗದಂತೆ ದೂರದಲ್ಲಿಡಬೇಕು.
ಇಲ್ಲ, ಮೊದಲು ಗೋಡೆಯ ತೇವಾಂಶವನ್ನು ಕ್ಯೂರ್ ಮಾಡುವುದು ಅತ್ಯಂತ ಪ್ರಮುಖವಾಗಿದೆ. ನಿಮ್ಮ ಗೋಡೆಗಳಿಗೆ ಪುನಃ ಪೇಂಟ್ ಮಾಡುವುದಕ್ಕೂ ಮೊದಲು ಡ್ಯಾಂಪ್‌ ಪ್ರೂಫ್‌ ಕೆಮಿಕಲ್‌ ಕೆಲಸಗಳನ್ನು ಮಾಡುವ ವೃತ್ತಿಪರರ ಸಹಾಯವನ್ನು ಪಡೆಯುವಂತೆ ನಾವು ಶಿಫಾರಸು ಮಾಡುತ್ತೇವೆ. ಈ ಮೂಲಕ, ನೀವು ಸಮಸ್ಯೆ ಉಂಟಾಗದಂತೆ ಖಚಿತಪಡಿಸಿಕೊಳ್ಳಬಹುದು.
ಬಿರ್ಲಾ ವೈಟ್‌ ಎಕ್ಸ್‌ಟೋಕೇರ್‌ 10 ಕಿಲೋ ಬಕೆಟ್ ಪ್ಯಾಕ್ ಮತ್ತು 1 ಕಿಲೋ ಹಾಗೂ 5 ಕಿಲೋ ಸೆಕೆಂಡರಿ ಪ್ಯಾಕ್‌ನಲ್ಲಿದೆ.
ಹೌದು, ಬಿರ್ಲಾ ವೈಟ್‌ ಎಕ್ಸ್‌ಟೋಕೇರ್ ಗ್ರೀನ್‌ಪ್ರೋ ಮಾನದಂಡಗಳನ್ನು ಪೂರೈಸುತ್ತದೆ ಮತ್ತು ಗ್ರೀನ್‌ಪ್ರೋ ಪ್ರಮಾಣೀಕರಣಕ್ಕೆ ಅರ್ಹವಾಗಿದೆ.
ವಿಒಸಿಗಳು (ವೊಲಟೈಲ್ ಆರ್ಗ್ಯಾನಿಕ್ ಕಂಟೆಂಟ್‌) ಅನ್ನು ಅಸ್ಥಿರ, ಕಾರ್ಬನ್‌ ಒಳಗೊಂಡಿರುವ ಕಾಂಪೌಂಡ್‌ ಆಗಿದ್ದು, ಇದು ವಾಯು ಮಾಲಿನ್ಯಕ್ಕೆ ಕಾರಣವಾಗುತ್ತದೆ ಮತ್ತು ಇತರ ಆರೋಗ್ಯ ಸಮಸ್ಯೆಗಳಾದ ಉಸಿರಾಟ ಸಮಸ್ಯೆ, ತಲೆನೋವು, ಚರ್ಮವನ್ನು ಸುಡುವುದು, ಕಣ್ಣಲ್ಲಿ ನೀರು ತುಂಬಿಕೊಳ್ಳುವುದು ಮತ್ತು ವಾಕರಿಕೆಗೆ ಕಾರಣವಾಗುತ್ತದೆ. ಕೆಲವು ವಿಒಸಿಗಳು ಕ್ಯಾನ್ಸರ್, ಕಿಡ್ನಿ ಸಮಸ್ಯೆಗಳು ಮತ್ತು ಲಿವರ್ ಹಾನಿಗೂ ಕಾರಣವಾಗುತ್ತವೆ. ಹೀಗಾಗಿ, ಅಂತಹ ಕನ್‌ಸ್ಟ್ರಕ್ಷನ್ ಸಾಮಗ್ರಿಗಳು ವಿಒಸಿಗಳನ್ನು ಹೊಂದಿರುವುದಿಲ್ಲ.
ಪ್ರಸ್ತುತ ಆನ್‌ಲೈನ್ ಪಾವತಿಯ ಆಯ್ಕೆ ಇಲ್ಲ. ಹಾಗೂ, ನಾವು ನಮ್ಮ ಯಾವುದೇ ಉತ್ಪನ್ನಗಳನ್ನು ಸದ್ಯಕ್ಕೆ ಮನೆಗೆ ನೇರವಾಗಿ ತಲುಪಿಸುವುದಿಲ್ಲ. ಅವುಗಳನ್ನು ನಮ್ಮ ಸ್ಟಾಕಿಸ್ಟ್ ನೆಟ್‌ವರ್ಕ್ ಮೂಲಕ ಮಾರಾಟ ಮಾಡಲಾಗುತ್ತದೆ. ಆದರೆ, ಬಿರ್ಲಾ ವೈಟ್‌ ಎಕ್ಸ್‌ಟೋಕೇರ್‌ ಅಪ್ಲೈ ಮಾಡಲು ತರಬೇತಿ ಹೊಂದಿದ ಕಾಂಟ್ರಾಕ್ಟರ್ ಬೇಕಾಗುತ್ತದೆ. ಹೀಗಾಗಿ ನಾವು ನಮ್ಮ ಅಧಿಕೃತ ರಿಟೇಲರ್/ಸ್ಟಾಕಿಸ್ಟ್ ಮೂಲಕ ಖರೀದಿ ಮಾಡುವಂತೆ ಶಿಫಾರಸು ಮಾಡುತ್ತೇವೆ. ಅವರು ತರಬೇತಿ ಹೊಂದಿರುವ ಕುಶಲ ಗುತ್ತಿಗೆದಾರರೊಂದಿಗೆ ಸಂಪರ್ಕ ಸಾಧಿಸಲು ನಿಮಗೆ ಸಹಾಯ ಮಾಡುತ್ತಾರೆ. ಇಂಡಿಯಾ ಮಾರ್ಟ್‌ನಲ್ಲಿ ನಮ್ಮ ಉತ್ಪನ್ನ ಕ್ಯಾಟಲಾಗ್ ಅನ್ನು ನೀವು ನೋಡಬಹುದು.
ತರಬೇತಿ ಹೊಂದಿರುವ ಮತ್ತು ಬದ್ಧ ಸಿವಿಲ್ ಇಂಜಿನಿಯರುಗಳ ತಂಡವನ್ನು ಭಾರತದಾದ್ಯಂತ ಸಿಎಎಸ್‌ಸಿ ಬೆಂಬಲಕ್ಕೆ (ಗ್ರಾಹಕ ಅಪ್ಲಿಕೇಶನ್ ಬೆಂಬಲ ಕೋಶ) ಬಿರ್ಲಾ ವೈಟ್‌ ಹೊಂದಿದೆ. ಈ ಸಿವಿಲ್ ಇಂಜಿನಿಯರುಗಳು ಆನ್‌ ಸೈಟ್ ತಾಂತ್ರಿಕ ಬೆಂಬಲವನ್ನು ಒದಗಿಸುತ್ತಾರೆ ಮತ್ತು ಆನ್‌ ಸೈಟ್ ಸ್ಯಾಂಪ್ಲಿಂಗ್ ಒದಗಿಸುತ್ತಾರೆ. ವಿಶೇಷ ತರಬೇತಿ ಮತ್ತು ಆಧುನಿಕ ಪರಿಕರಗಳನ್ನು ಬಳಸಿ ಮೇಲ್ಮೈ ಫಿನಿಶಿಂಗ್‌ ಅಪ್ಲಿಕೇಟರ್‌ಗಳಿಗೆ ತರಬೇತಿ ನೀಡುತ್ತಾರೆ. ಅವರಿಗೆ ಇದು ಪರಿಣಿತಿ ಒದಗಿಸಲು ಮತ್ತು ವಿಶೇಷ ಬಿರ್ಲಾ ವೈಟ್ ಅಪ್ಲಿಕೇಟರ್‌ಗಳಾಗಲು ನೆರವಾಗುತ್ತದೆ.
ಲಭ್ಯ ಪ್ಯಾಕ್ ಸೈಜ್‌ಗಳು
ಟೆಸ್ಟಿಮೋನಿಯಲ್‌ಗಳು