ವಾಲ್‌ಸೀಲ್ ವಾಟರ್ ಪ್ರೂಫ್ ಪುಟ್ಟಿ
ಎಲ್ಲಕ್ಕಿಂತಲೂ ಮಿಗಿಲಾದ ಬಿಳಿಯಾದ ಗೋಡೆ ಮತ್ತು ತಡೆಯುವುದು ನೀರಿನ ಸೋರಿಕೆ.
ವಾಲ್‌ಸೀಲ್ ವಾಟರ್ ಪ್ರೂಫ್ ಪುಟ್ಟಿ
ಎಲ್ಲಕ್ಕಿಂತಲೂ ಮಿಗಿಲಾದ ಬಿಳಿಯಾದ ಗೋಡೆ ಮತ್ತು ತಡೆಯುವುದು ನೀರಿನ ಸೋರಿಕೆ.
ಮುನ್ನೋಟ
ಬಿರ್ಲಾ ವೈಟ್ ವಾಲ್‌ಸೀಲ್ ವಾಟರ್ ಪ್ರೂಫ್ ಪುಟ್ಟಿಯು ವೈಟ್ ಸಿಮೆಂಟ್ ಆಧರಿತವಾಗಿದ್ದು 2X ಜಲನಿರೋಧಕತೆ ಒದಗಿಸುತ್ತದೆ ಹಾಗೂ ಆಕ್ಟಿವ್ ಜರ್ಮನ್ ಸಿಲಿಕೋನ್‌ ಪಾಲಿಮರ್ ಹೊಂದಿದೆ. ಆದ್ದರಿಂದ ಇದನ್ನು ಕಾಂಕ್ರೀಟ್/ ಪ್ಲಾಸ್ಟರ್ ಮತ್ತು ಗಾರೆ ಗೋಡೆಯ ಮೇಲೆ ಟಾಪ್ ಕೋಟ್ ಬಣ್ಣ ಅಥವಾ ಡಿಸ್ಟಂಪರ್ ಅನ್ನು ಹಾಕುವ ಮುನ್ನ ಬಳಸಿದಲ್ಲಿ, ಒಂದು ಶಕ್ತಿಯುತವಾದ ಬೇಸ್ ಒದಗಿಸುವುದರ ಜೊತೆಗೆ ನಿಮ್ಮ ಗೋಡೆಯನ್ನು ತೇವಾಂಶದಿಂದ ರಕ್ಷಿಸುತ್ತದೆ.
ಗ್ಯಾಲರಿ
ಉತ್ಪನ್ನ ಮುಖ್ಯಾಂಶಗಳು
2x Water Resistance
Active German Silicone Polymer
More Whiteness
ವೈಶಿಷ್ಟ್ಯಗಳು
 • ಆಕ್ಟಿವ್ ಜರ್ಮನ್ ಸಿಲಿಕೋನ್‌ ಪಾಲಿಮರ್ ಹೊಂದಿದೆ
 • ಉತ್ತಮ ಬಿಳಿಯ ಬಣ್ಣ
 • ಪರಿಸರಸ್ನೇಹಿ
 • ದೀರ್ಘ ಬಾಳಿಕೆ ಮತ್ತು ಹೇರ್‌ ಲೈನ್‌ ಬಿರುಕು ಉಂಟಾಗದಂತೆ ತಡೆಯುತ್ತದೆ
 • ಕ್ಯೂರಿಂಗ್ ಮುಕ್ತ
ಪ್ರಯೋಜನಗಳು
 • 2X ಜಲನಿರೋಧಕ
 • ಮೇಲ್ಮೈಗೆ ನಯವಾದ ಮತ್ತು ಹೊಳೆಯುವ ಫಿನಿಷ್‌ ಅನ್ನು ನೀಡುತ್ತದೆ
 • ಟಾಪ್ ಕೋಟಿನ ನಿಜವಾದ ಟೋನ್‌ ಅನ್ನು ನೀಡುತ್ತದೆ
 • ಉತ್ತಮ ಕಾರ್ಯಸಾಧ್ಯತೆ
ಅಪ್ಲಿಕೇಶನ್‌ಗಳು
 • ಒಳಗಿನ ಗೋಡೆಗಳು
 • ಹೊರಗಿನ ಗೋಡೆಗಳು
ತಾಂತ್ರಿಕ ವಿವರಗಳು
Sr.No ತಾಂತ್ರಿಕ ಮಾನದಂಡ ವಿಶೇಷ ವಿವರಗಳು ಪರೀಕ್ಷಿಸುವ ವಿಧಾನ
1 *Coverage (Square meter/kg) [On Ideal smooth surface] 1.48645 - 1.76516 In House
2 Pot life (Hours) 3.0 - 3.5 In House
3 Tensile Adhesion strength @28 days (N/m2) ≥ 1.0 EN 1348
4 Water Capillary Absorption (ml), 30 min @28days ≤ 0.3 Karsten Tube
5 Compressive strength @28 days (N/m2) 3.5 - 7.5 EN 1015-11
6 Bulk Density (g/cm3) 0.90 - 1.10 In House
*This value is on a smooth surface; however, this may change according to surface texture
ಮುನ್ನೆಚ್ಚರಿಕೆ:
 • ಇದನ್ನು ಹಚ್ಚುವ ಮೊದಲು ಮೇಲ್ಮೈ‌ ಒದ್ದೆ/ತೇವಗೊಂಡಿದೆ ಖಾತ್ರಿ ಮಾಡಿಕೊಳ್ಳಿ.
 • ಪುಟ್ಟಿಯನ್ನು ಮಿಶ್ರಣ ಮಾಡುವುದು ತುಂಬಾ ಮುಖ್ಯವಾಗಿರುತ್ತದೆ ಆದ್ದರಿಂದ ಉತ್ತಮ ಫಲಿತಾಂಶ ಪಡೆಯಲು ಕೈಯಿಂದ ಅಥವಾ ಮೆಕಾನಿಕಲ್ ಸ್ಟಿರರ್‌ನಿಂದ ಸರಿಯಾಗಿ ಮಿಶ್ರಣ ಮಾಡಿ. ಹದವಾದ ಪೇಸ್ಟ್‌ ಆಗುವರೆಗೂ ಮಿಶ್ರಣಗೊಳಿಸುವುದನ್ನ ಮುಂದುವರೆಸಿ.
 • ಕೇವಲ ಮೂರು ಅಥವಾ ನಾಲ್ಕು ಗಂಟೆಯ ಒಳಗೆ ಉಪಯೋಗಿಸುವಂತೆ ನಿಮಗೆ ಬೇಕಾದಷ್ಟೇ ಪ್ರಮಾಣದ ಮಿಶ್ರಣವನ್ನು ಮಾತ್ರ ತಯಾರು ಮಾಡಿಕೊಳ್ಳಿ.
 • ಪುಟ್ಟಿ ಪೇಸ್ಟ್ ಅನ್ನು ಸೇವಿಸದರೆ ತುಂಬಾ ಅಪಾಯಕಾರಿಯಾಗಿರುತ್ತದೆ ಒಂದು ವೇಳೆ ನುಂಗಿದರೆ ತಕ್ಷಣವೇ ಚಿಕಿತ್ಸೆಯನ್ನು ಪಡೆಯಿರಿ.
 • ಒಂದು ವೇಳೆ ಬಿರ್ಲಾ ವೈಟ್ ವಾಲ್ ಸೀಲ್ ವಾಟರ್ ಪ್ರೂಫ್ ಪುಟ್ಟಿಯನ್ನು ಬಳಸುವಾಗ ನಿಮ್ಮ ಚರ್ಮದಲ್ಲಿ ಕಿರಿಕಿರಿ ಉಂಟಾದಲ್ಲಿ ತಕ್ಷಣವೇ ಸಾಕಷ್ಟು ನೀರಿನಿಂದ ತೊಳೆಯಿರಿ ಮತ್ತು ತಕ್ಷಣವೇ ಚಿಕಿತ್ಸೆಯನ್ನು ಪಡೆಯಿರಿ.
ಪದೇ ಪದೇ ಕೇಳಲಾದ ಪ್ರಶ್ನೆಗಳು
ಬಿರ್ಲಾ ವೈಟ್ ವಾಲ್‌ಸೀಲ್ ವಾಟರ್ ಪ್ರೂಫ್ ಪುಟ್ಟಿಯು ವೈಟ್ ಸಿಮೆಂಟ್ ಆಧರಿತವಾಗಿದ್ದು 2X ಜಲನಿರೋಧಕತೆ ಒದಗಿಸುತ್ತದೆ ಹಾಗೂ ಆಕ್ಟಿವ್ ಜರ್ಮನ್ ಸಿಲಿಕೋನ್‌ ಪಾಲಿಮರ್ ಹೊಂದಿದೆ. ಆದ್ದರಿಂದ ಇದನ್ನು ಪ್ಲಾಸ್ಟರ್/ ಕಾಂಕ್ರೀಟ್ ಮತ್ತು ಗಾರೆ ಗೋಡೆಯ ಮೇಲೆ ಟಾಪ್ ಕೋಟ್ ಬಣ್ಣ ಅಥವಾ ಡಿಸ್ಟಂಪರ್ ಅನ್ನು ಹಾಕುವ ಮುನ್ನ ಬಳಸಿದಲ್ಲಿ, ಒಂದು ಶಕ್ತಿಯುತವಾದ ಬೇಸ್ ಒದಗಿಸುವುದರ ಜೊತೆಗೆ ನಿಮ್ಮ ಗೋಡೆಯನ್ನು ತೇವಾಂಶದಿಂದ ರಕ್ಷಿಸುತ್ತದೆ.ಸಿಲಿಕೋನ್‌
ಬಿರ್ಲಾ ವೈಟ್ ವಾಲ್ ಸೀಲ್ ವಾಟರ್ ಪ್ರೂಫ್ ಪುಟ್ಟಿಯು ವೈಟ್‌ ಸಿಮೆಂಟ್‌,ಹೈಡ್ರೋಪೊಬಿಕ್‌ ಆರ್‌ ಡಿ ಪಾಲಿಮರ್‌, ಜರ್ಮನ್ ಆಕ್ಟಿವ್ ಸಿಲಿಕೋನ್‌ ಪಾಲಿಮರ್‌ ಮತ್ತು ಗ್ರೇಡೇಡ್‌ ಫಿಲ್ಲರ್‌ಗಳನ್ನು ಹೊಂದಿದೆ.
ಬಿರ್ಲಾ ವೈಟ್ ವಾಲ್ ಸೀಲ್ ವಾಟರ್ ಪ್ರೂಫ್ ಪುಟ್ಟಿಯು ಈ ಕೆಳಗಿನ ವೈಶಿಷ್ಟ್ಯಗಳನ್ನು ಹೊಂದಿದೆ
 • ಆಕ್ಟಿವ್ ಜರ್ಮನ್ ಸಿಲಿಕೋನ್‌ ಪಾಲಿಮಾರ್‌ ಹೊಂದಿದೆ
 • ಉತ್ತಮ ಬಿಳಿಯ ಬಣ್ಣ
 • ಪರಿಸರಸ್ನೇಹಿ
 • ದೀರ್ಘ ಬಾಳಿಕೆ ಮತ್ತು ಹೆರ್‌ಲೈನ್‌ ಬಿರುಕು ನಿರೋಧಕ
 • ಕ್ಯೂರಿಂಗ್ ಮುಕ್ತ
ಹೌದು, ಪುಟ್ಟಿಯನ್ನು ಲೇಪಿಸುವ ಮೊದಲು ಗೋಡೆಯನ್ನು/ಮೇಲ್ಮೈಯನ್ನು ತೇವಾಂಶಗೊಳಿಸಬೇಕು.
ಬಿರ್ಲಾ ವೈಟ್ ವಾಲ್ ಸೀಲ್ ವಾಟರ್ ಪ್ರೂಫ್ ಪುಟ್ಟಿಯ‌ ಕವರೇಜ್ (ಚದರ ಮೀಟರ್)‌ 1.49 – 1.76 ಚದರ ಮೀಟರ್/ಕೆಜಿ ಆಗಿರುತ್ತದೆ.
ಬಿರ್ಲಾ ವೈಟ್ ವಾಲ್ ಸೀಲ್ ವಾಟರ್ ಪ್ರೂಫ್ ಪುಟ್ಟಿಯು 30 ಕೆಜಿ ಪ್ಯಾಕ್ ನಲ್ಲಿ ಲಭ್ಯವಿದೆ
ಬಿರ್ಲಾ ವೈಟ್ ವಾಲ್ ಸೀಲ್ ವಾಟರ್ ಪ್ರೂಫ್ ಪುಟ್ಟಿಯಬಳಸುವ ವಿಧಾನ ಈ ಕೆಳಗಿನಂತಿದೆ
ಪೂರ್ವ ಲೇಪನ-
 • ಗೋಡೆಯ ಮೇಲ್ಮೈಗೆ ಸಡಿಲವಾಗಿ ಅಂಟಿರುವ ಗಲೀಜು, ಧೂಳು, ಗ್ರೀಸಿನಂತಹ ವಸ್ತುಗಳನ್ನು ಸಾಲ್ಟ್‌ ಪೇಪರ್, ಪುಟ್ಟಿ ಬ್ಲೇಡ್‌ ಅಥವಾ ವೈರ್‌ ಬ್ರಷ್ ಸಹಾಯದಿಂದ ತೆಗೆದು ಹಾಕಿ.
 • ಹೋಸ್ ಪೈಪ್‌, ಸ್ಪ್ರೇ ಅಥವಾ ಬ್ರಷ್‌ನ ಸಹಾಯದಿಂದ ಅಥವಾ ಮಗ್/ಕ್ಯಾನ್ ಬಳಸಿ ನೀರನ್ನು ಹಾಕುವ ಮೂಲಕ ಮೇಲ್ಮೈಯನ್ನು ಮೊದಲು ತೇವಾಂಶಗೊಳಿಸಿ. ಲೇಪನ ಮಾಡುವಾಗ ಮೇಲ್ಮೈಯನ್ನು ತೇವಾಂಶಗೊಳಿಸುವುದು ಅತಿ ಮುಖ್ಯವಾಗಿದೆ
"ವಾಟರ್ ಪ್ರೂಫ್ ಪುಟ್ಟಿಯ"
ಪುಟ್ಟಿಯ ಮಿಶ್ರಣದ ಮಿಶ್ರಣ ಅನುಪಾತ: 36-38% ಸ್ವಚ್ಛವಾದ ನೀರಿಗೆ 1 ಕೆಜಿ ವಾಟರ್ ಪ್ರೂಫ್ ಪುಟ್ಟಿಯನ್ನು (1ಕೆಜಿ ಪುಟ್ಟಿ+360-380 ಮಿಲೀ ನೀರು) ನಿಧಾನವಾಗಿ ಪೇಸ್ಟ್‌ ಆಗುವಂತೆ ಸೇರಿಸಿ.. ಮಿಶ್ರಣದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಮೆಕಾನಿಕಲ್ ಸ್ಟಿರರ್‌ನಿಂದ (3-5 ನಿಮಿಷಗಳು ) ಮಿಶ್ರಣ ಮಾಡುವುದು ಒಳ್ಳೆಯದು. ಉತ್ತಮವಾದ ಫಲಿತಾಂಶವನ್ನು ಪಡೆಯಲು ಪೇಸ್ಟನ್ನು ಮಿಶ್ರಣ ಮಾಡಿದ ನಂತರ ಸುಮಾರು ಐದು ನಿಮಿಷಗಳ ಕಾಲ ಹಾಗೆಯೇ ಬಿಡಿ. ತಯಾರಿಸಿದ ಪೇಸ್ಟ್ 3.00 ರಿಂದ 3.30 ಘಂಟೆಯ ಒಳಗೆ ಉಪಯೋಗಿಸಿ.
ಮೇಲ್ಮೈಗೆ ಹಚ್ಚುವ ವಿಧಾನಗಳು
 • ಸರಿಯಾದ ಮಿಶ್ರಣ ಮಾಡಿದ ನಂತರ ಮೊದಲ ಬಿರ್ಲಾ ವೈಟ್ ವಾಲ್ ಸೀಲ್ ವಾಟರ್ ಪ್ರೂಫ್ ಪುಟ್ಟಿಯ ಕೋಟ್ ಪುಟ್ಟಿಯನ್ನು ತೇವಾಂಶವಿರುವ ಗೋಡೆ ಅಥವಾ ಸರ್ಫೇಸ್ ಮೇಲೆ ಪುಟ್ಟಿಯ ಬ್ಲೇಡ್ ಸಹಾಯದಿಂದ‌ ಒಂದೇ ಹದದಲ್ಲಿ ಲೇಪಿಸಿ. ಲೇಪನ ಮಾಡುವಾಗ ಸರ್ಫೇಸ್‌ನ ತಾಪಮಾನ 40 ಡಿಗ್ರಿ ಸೆಂಟಿಗ್ರೇಡ್‌ಗಿಂತಲೂ ಜಾಸ್ತಿಯಾಗದ ಹಾಗೆ ಖಾತ್ರಿ ಮಾಡಿಕೊಳ್ಳಿ
 • ಮೊದಲ ಕೋಟ್ ಪುಟ್ಟಿ ಒಣಗಿದ ನಂತರ ಸಡಿಲವಾದ ಕಣಗಳನ್ನು ತೆಗೆಯಲು ಸರ್ಫೇಸ್‌ನ್ನು ನಿಧಾನವಾಗಿ ಒಂದು ಒದ್ದೆಯಾದ ಸ್ಪಂಜಿನ ಅಥವಾ ಪುಟ್ಟಿಬ್ಲೇಡ್ ಸಹಾಯದಿಂದ ಹಗುರವಾಗಿ ತಿಕ್ಕಿ.
 • ಮೇಲ್ಮೈಯನ್ನು3-4 ಗಂಟೆಗಳ ಕಾಲ ಒಣಗಲು ಬಿಡಿ ಮತ್ತು ನಂತರ ಎರಡನೇ ಬಿರ್ಲಾ ವೈಟ್ ವಾಲ್ ಸೀಲ್ ವಾಟರ್ ಪ್ರೂಫ್ ಪುಟ್ಟಿಯ ಕೋಟ್ ಲೇಪಿಸಿ. ಮೇಲ್ಮೈಯನ್ನು ಸಂಪೂರ್ಣವಾಗಿ ಒಣಗಲು ಬಿಡಿ.
 • ಟಾಪ್‌ ಕೋಟ್‌ ಪೇಂಟ್/ಡಿಸ್ಟೆಂಪರ್‌ ಹಚ್ಚುವ ಮೊದಲುಮೇಲ್ಮೈ ಅನ್ನು. 24 ಗಂಟೆಗಳ ಕಾಲ ಒಣಗಲು ಬಿಡಬೇಕು (ಮೇಲ್ಮೈ ಸಂಪೂರ್ಣವಾಗಿ ಒಣಗಿದೆ ಎಂದು ಖಾತ್ರಿಪಡಿಸಿಕೊಳ್ಳಿ ಹವಾಮಾನದ ಪರಿಸ್ಥಿತಿಯ ಮೇಲೆ ನಿರ್ಧರಿತವಾಗಿದೆ)
 • ಅಂತಿಮವಾದ ಪುಟ್ಟಿ ಲೇಪನದ ಸರ್ಫೇಸ್ ಮೇಲೆ ಒರಟಾಗಿ ಎಮರಿ ಕಾಗದದಿಂದ ಉಜ್ಜುವುದಕ್ಕೆ ಶಿಫಾರಸು ಮಾಡುವುದಿಲ್ಲ. ಇದು ಬಿರ್ಲಾ ವೈಟ್ ವಾಲ್ ಸೀಲ್ ವಾಟರ್ ಪ್ರೂಫ್ ಪುಟ್ಟಿಯ ಜಲ ನಿರೋಧಕ ಗುಣವನ್ನು ಹಾಳುಮಾಡುತ್ತದೆ. ಒಂದು ವೇಳೆ ಬಣ್ಣಅಥವಾ ಡಿಸ್ಟಂಪರ್ ಹೊಡೆಯುವ ಮುಂಚೆ ಉಬ್ಬುತಗ್ಗುಗಳನ್ನು ಸರಿಪಡಿಸುವ ಅವಶ್ಯಕತೆ ಇದ್ದರೆ ಅತಿ ಸೂಕ್ಷ್ಮವಾದ 500 ನಂಬರ್ ಗಿಂತ ಕಡಿಮೆ ಇರುವ ಜಲ ನಿರೋಧಕ ಉಪ್ಪು ಕಾಗದ ಕಾಗದದಿಂದ ನಿಧಾನವಾಗಿ ತಿಕ್ಕಿ ಸಮತಟ್ಟು ಮಾಡಿ ಹೊಳಪು ಪಡೆಯಬಹುದು.
 • ಎರಡೂ ಕೋಟ್‌ಗಳ ಒಟ್ಟಾರೆ ದಪ್ಪವು 1.5 ಮಿಮಿಗಿಂತ ಜಾಸ್ತಿ ಇರಬಾರದು.
ಇಲ್ಲ, ಬಿರ್ಲಾ ವೈಟ್ ವಾಲ್ ಸೀಲ್ ವಾಟರ್ ಪ್ರೂಫ್ ಪುಟ್ಟಿ ಬಳಸಿ ಪೈಂಟ್‌ ಮಾಡುವ ಮುನ್ನ ಪ್ರೈಮರ್ ನ ಅವಶ್ಯಕತೆ ಇರುವುದಿಲ್ಲ.
ಈ ಉತ್ಪನ್ನವನ್ನು ಮುಖ್ಯವಾಗಿ ಒಳಗಿನ ಹಾಗೂ ಹೊರಗಿನ ಗೋಡೆ, ಸಿಮೆಂಟ್‌ನಿಂದ ಮಾಡಿರುವ ಪ್ಲಾಸ್ಟರ್/ಕಾಂಕ್ರೀಟ್/ಇಟ್ಟಿಗೆಯ ಗೋಡೆಗಳ ಮೇಲೆ, ಮಳೆಯಿಂದ ಅಥವಾ ತೇವಾಂಶದಿಂದ ಬಾಧಿತವಾಗುವ ಜಾಗವಾಗಿದ್ದಲ್ಲಿ ಬಳಸಬಹುದು.
ಬಿರ್ಲಾ ವೈಟ್ ವಾಲ್ ಸೀಲ್ ವಾಟರ್ ಪ್ರೂಫ್ ಪುಟ್ಟಿಯು ಜಲನಿರೋಧಕವಾಗಿದೆ. ಇದು ಇತರೆ ಸಾಮಾನ್ಯ ಸಿಮೆಂಟ್ ಆಧರಿತವಾದ ಪುಟ್ಟಿಗಿಂತ ಎರಡು ಪಟ್ಟು ಜಲನಿರೋಧಕವಾಗಿದೆ ಹಾಗೂ ಇದು ಗೋಡೆಯಿಂದ ನೀರು ಸೋರುವುದರಿಂದ ಉತ್ತಮವಾದ ರಕ್ಷಣೆ ನೀಡುತ್ತದೆ.
ಮೇಲ್ಮೈಗೆ ಪೈಂಟ್ ಮಾಡುವ ಮೊದಲು ಬಿರ್ಲಾ ವೈಟ್ ವಾಲ್ ಸೀಲ್ ವಾಟರ್ ಪ್ರೂಫ್ ಪುಟ್ಟಿಯ 2 ಕೋಟ್‌ ಅನ್ನು ಮೇಲೆ ಲೇಪಿಸಬೇಕು.
ಬಿರ್ಲಾ ವೈಟ್ ವಾಲ್ ಸೀಲ್ ವಾಟರ್ ಪ್ರೂಫ್ ಪುಟ್ಟಿಯು ವೈಟ್‌ ಸಿಮೆಂಟ್‌ ಆಧರಿತವಾದ ವಾಟರ್ ಪ್ರೂಫ್ ಪುಟ್ಟಿ ಆಗಿರುವುದರಿಂದ ಕ್ಯೂರಿಂಗ್ ಮಾಡುವ ಅಗತ್ಯವಿರುವುದಿಲ್ಲ.
ಬಿರ್ಲಾ ವೈಟ್ ವಾಲ್ ಸೀಲ್ ವಾಟರ್ ಪ್ರೂಫ್ ಪುಟ್ಟಿಯ ಸೂಕ್ತವಾದ ಕವರೇಜ್‌ 1.48645 - 1.76516 ಚದರ ಮೀಟರ್/ಕೆಜಿ ಆಗಿರುತ್ತದೆ.
ಬಿರ್ಲಾ ವೈಟ್ ವಾಲ್ ಸೀಲ್ ವಾಟರ್ ಪ್ರೂಫ್ ಪುಟ್ಟಿಯನ್ನು ಮಕ್ಕಳಿಗೆ ಸಿಗದ ತಂಪಾದ ಹಾಗೂ ತೇವರಹಿತ ಜಾಗದಲ್ಲಿ ಸಂಗ್ರಹಿಸಿ ಇರಿಸಬೇಕು.
ಹೌದು, ಬಿರ್ಲಾ ವೈಟ್ ವಾಲ್ ಸೀಲ್ ವಾಟರ್ ಪ್ರೂಫ್ ಪುಟ್ಟಿಗೆ 6 ತಿಂಗಳ ನಂತರ ಎಕ್ಸ್ಪೈರಿ ದಿನಾಂಕವಿರುತ್ತದೆ.
ಹೌದು, ಬಿರ್ಲಾ ವೈಟ್ ವಾಲ್ ಸೀಲ್ ವಾಟರ್ ಪ್ರೂಫ್ ಪುಟ್ಟಿಯು ಗ್ರೀನ್‌ಪ್ರೊ ಅವರ ಶಿಷ್ಟತೆಗೆ ಅನುಗುಣವಾಗಿದೆ ಹಾಗೂ ಗ್ರೀನ್ಪ್ರೊ ಸರ್ಟಿಫಿಕೇಶನ್ ಹೊಂದಿದೆ.
ಹೌದು, ಕಾರ್ವೆ ಸಂಶೋಧನೆಯ ಪ್ರಕಾರವಾಗಿ ಹೇಳುವಂತೆ ಬಿರ್ಲಾ ವೈಟ್ ವಾಲ್ ಸೀಲ್ ವಾಟರ್ ಪ್ರೂಫ್ ಪುಟ್ಟಿ ಅತ್ಯುತ್ತಮ ವಾಟರ್‌ಪ್ರೂಫಿಂಗ್ ಗುಣಗಳನ್ನು ಹೊಂದಿದೆ.
ಬಿರ್ಲಾ ವೈಟ್ ವಾಲ್ ಸೀಲ್ ವಾಟರ್ ಪ್ರೂಫ್ ಪುಟ್ಟಿಯು ಆಕ್ಟಿವ್ ಜರ್ಮನ್ ಸಿಲಿಕೋನ್‌ ಪಾಲಿಮಾರ್‌ ಹೊಂದಿದೆ. ಇದು ಉತ್ತಮ ಜಲನಿರೋಧಕವಾಗಿದ್ದು, ಇದು ಮಾರುಕಟ್ಟೆಯಲ್ಲಿ ಸಿಗುವ ಸಾಧಾರಣ ವಾಟರ್ ಪ್ರೂಫ್ ಪುಟ್ಟಿಯ ಹೋಲಿಕೆಯಲ್ಲಿಗೋಡೆಗಳಿಂದ ನೀರು ಸೋರುವಿಕೆಯನ್ನು ಉತ್ತಮ ರೀತಿಯಲ್ಲಿ ತಡೆಗಟ್ಟುತ್ತದೆ.
ಲಭ್ಯ ಪ್ಯಾಕ್ ಸೈಜ್‌ಗಳು