ಜಿಪ್‌ಕೋಟ್‌

ನಿಮ್ಮ ಕೋಣೆಯ ಗೋಡೆಗಳನ್ನು ನಯವಾಗಿಸಲು ಮತ್ತು ಪರಿಪೂರ್ಣವಾದ ಮೂಲೆಗಳನ್ನು ಪಡೆಯಲು ಒಂದು ಅತ್ಯುತ್ತಮ ಪರಿಹಾರ.

Loading

ಜಿಪ್‌ಕೋಟ್‌

ನಿಮ್ಮ ಕೋಣೆಯ ಗೋಡೆಗಳನ್ನು ನಯವಾಗಿಸಲು ಮತ್ತು ಪರಿಪೂರ್ಣವಾದ ಮೂಲೆಗಳನ್ನು ಪಡೆಯಲು ಒಂದು ಅತ್ಯುತ್ತಮ ಪರಿಹಾರ.
ಅವಲೋಕನ
ಬಿರ್ಲಾ ವೈಟ್‌ ಜಿಪ್‌ಕೋಟ್‌ ಅನ್ನು ಒಳಗಿನ ಪ್ಲಾಸ್ಟರಿಂಗ್‌ಗಾಗಿ ವಿಶೇಷವಾಗಿ ಜಿಪ್ಸಮ್‌ ಪ್ಲಾಸ್ಟರ್‌ನಿಂದ ತಯಾರಿಸಲಾಗಿದೆ. ಇದನ್ನು ಮಾಮೂಲಿ ಸಿಮೆಂಟ್‌ ಮರಳಿನ ಪ್ಲಾಸ್ಟರ್‌ ಬದಲು ನೇರವಾಗಿ ಒಳಗಿನ ಕಲ್ಲಿನ ಇಟ್ಟಿಗೆ AAC ಬ್ಲಾಕ್ಸ್‌ ಮೇಲೆ ಬಳಸಬಹುದು. ಇದನ್ನು ಪ್ಲಾಸ್ಟರ್‌ ಮಾಡಿದ ಗೋಡೆಗಳ ಮೇಲೆ ಲೆವೆಲಿಂಗ್‌ ಮಾಡುವ ವಸ್ತುವಾಗಿ ಸಮತಟ್ಟವಾದ ಹಾಗೂ ನಯವಾದ ಫಿನಿಷ್‌ ಬರುವಂತೆ ಸಹ ಬಳಸಬಹುದು. ಪರಿಪೂರ್ಣವಾದ ಲೈನ್‌ ಹಾಗೂ ಸಮತಟ್ಟವಾದ ಫಿನಿಷ್‌ ಮತ್ತು ಮೂಲೆಗಳನ್ನು ಪಡೆಯಲುಇದು ಅತ್ಯುತ್ತಮವಾಗಿದೆ. ಜಿಪ್‌ಕೋಟ್‌ ಹಗುರತೂಕವನ್ನು ಹೊಂದಿದ್ದರೂ ಸಹ, ವಿಶೇಷವಾದ ಪ್ರೊಪ್ರೈಟರಿ ಸಂಯೋಜಕಗಳಿಂದಾಗಿ ಇದಕ್ಕೆ ಅದ್ಭುತವಾದ ಕಂಪ್ರೆಸ್ಸೀವ್‌ ಶಕ್ತಿಯನ್ನು ಹೊಂದಿದೆ. ಇದರಿಂದಾಗಿ, ಸಾಂಪ್ರದಾಯಿಕ ಸಿಮೆಂಟ್‌ ಮತ್ತು ಮರಳಿನ ಪ್ಲಾಸ್ಟರ್ ಹೋಲಿಕೆಯಲ್ಲಿ ಡೆಡ್‌ ಲೋಡ್‌ನ್ನು ಕಡಿಮೆಗೊಳಿಸುತ್ತದೆ. ಅಷ್ಟೆ ಅಲ್ಲದೆ , ಇದನ್ನು ಕ್ಯೂರಿಂಗ್‌ ಮಾಡಲು ನೀರಿನ ಅವಶ್ಯಕತೆ ಇರುವುದಿಲ್ಲವಾದ್ದರಿಂದ ಸಮಯದ ಉಳಿತಾಯವಾಗುತ್ತದೆ ಮತ್ತು 72 ಗಂಟೆಗಳಲ್ಲಿ ಪೈಟಿಂಗ್‌ ಮಾಡಲು ಸಿದ್ಧಗೊಂಡಿರುತ್ತದೆ..
ಗ್ಯಾಲರಿ
ಉತ್ಪನ್ನ ಮುಖ್ಯಾಂಶಗಳು
No Water Curing
Shrinkage Crack Resistant
Easy to Apply
Economical Value for Money
ಲಕ್ಷಣಗಳು
 • ಹಸಿರು ಕಟ್ಟಡ ಉತ್ಪನ್ನ
 • ಹೆಚ್ಚಿನ ಕವರೇಜ್ ಹಾಗೂ ಕಡಿಮೆ ವೆಚ್ಚ.
 • 0.008-0.01 ಮೀಟರ್‌ನಷ್ಟು ದಪ್ಪನೆಯ ಕೋಟಿಂಗ್‌ನಲ್ಲಿ ಲೇಪಿಸಬಹುದು.
 • ಕ್ಯೂರಿಂಗ್‌ ಅಗತ್ಯವಿರುವುದಿಲ್ಲ
 • ಕುಗ್ಗುವಿಕೆಯಿಂದ ಬಿರುಕು ಉಂಟಾಗದಂತೆ ತಡೆಯುತ್ತದೆ
ಲಾಭಗಳು
 • ಕೇವಲ ನೀರನ್ನು ಬೆರೆಸಿ ಸುಲಭವಾಗಿ ಲೇಪಿಸಬಹುದು.
 • ಕಡಿಮೆ ಶ್ರಮದೊಂದಿಗೆ ನಿಮ್ಮ ಗೋಡೆಗಳಲ್ಲಿ ಉತ್ತಮ ಮೂಲೆಗಳು ಹಾಗೂ ಸಮತಟ್ಟವಾದ ಫಿನಿಷ್‌ ಅನ್ನು ಪಡೆಯಿರಿ.
 • ಸಿಮೆಂಟ್‌ ಮತ್ತು ಮರಳಿನ ಪ್ಲಾಸ್ಟರ್‌ಗಿಂತ ಉತ್ತಮ ಶಬ್ಧ ಹಾಗೂ ಉಷ್ಣತೆ ನಿರೋಧಕ ಗುಣ ಹೊಂದಿದೆ
 • ಕ್ಯೂರಿಂಗ್‌ ಅಗತ್ಯವಿರುವುದಿಲ್ಲ ಮತ್ತು 72 ಘಂಟೆಗಳ ಒಳಗೆ ಪೈಟಿಂಗ್‌ ಮಾಡಲು ಸಿದ್ಧಗೊಂಡಿರುತ್ತದೆ

The technology used to manufacture this product is ‘Patent Pending’.

ಅಪ್ಲಿಕೇಶನ್
Surface Preparation
ಮೇಲ್ಮೈ ಸಿದ್ಧಪಡಿಸುವಿಕೆ
 • “ಬಿರ್ಲಾ ವೈಟ್‌ ಜಿಪ್‌ಕೋಟ್‌” ಲೇಪಿಸುವ ಮೊದಲು ಗೋಡೆಯ ಮೇಲ್ಮೈ ಮೇಲೆ ಸಡಿಲವಾಗಿ ಅಂಟಿ ಕೊಂಡಿರುವ ಎಲ್ಲಾ ವಸ್ತುಗಳನ್ನು ಸ್ಯಾಂಡ್‌ ಪೇಪರ್, ಪುಟ್ಟಿ ಬ್ಲೇಡ್‌ ಅಥವಾ ವೈರ್‌ ಬ್ರೆಷ್ ಸಹಾಯದಿಂದ ತೆಗೆಯಿರಿ. ಮೇಲ್ಮೈ ಸ್ವಚ್ಚವಾಗಿರಬೇಕು,‌ ಧೂಳು, ಗ್ರೀಸ್, ಸಡಿಲ ವಸ್ತುಗಳಿಂದ ಮುಕ್ತವಾಗಿರಬೇಕು ಗೋಡೆಯನ್ನು ಸಾಕಷ್ಟು ಸ್ವಚ್ಚ ನೀರಿನಿಂದ ತೇವಗೊಳಿಸಿ.
 • ಮೇಲ್ಮೈ ಪೂರ್ವ ತೇವಗೊಳಿಸುವಿಕೆ - ಲೇಪಿಸುವ ಮೊದಲು ಸರ್ಫೆಸ್‌‌ ತೇವಗೊಂಡಿರಬೇಕು. ಇದರಿಂದಾಗಿ ಕೆಲಸವು ಸುಲಭವಾಗುತ್ತದೆ ಮತ್ತು ಹೆಚ್ಚಿನ ಕವರೇಜ್‌ ದೊರೆಯುತ್ತದೆ ಹಾಗೂ ಮೇಲ್ಮೈಯೊಂದಿಗೆ ಉತ್ತಮ ಅಂಟಿಕೊಳ್ಳುತ್ತದೆ.
 • ಮಿಶ್ರಣಗೊಳಿಸುವ ವಿಧಾನ: - ಬಿರ್ಲಾ ವೈಟ್‌ ಜಿಪ್‌ಕೋಟ್‌ನ ಗಂಟು ರಹಿತ ಪೇಸ್ಟ್‌ ತಯಾರಿಸಲು 60-65% ಸ್ವಚ್ಚ ನೀರನ್ನು ನಿಧಾನವಾಗಿ ಸೇರಿಸಿ. ಹದವಾದ ಪೇಸ್ಟ್‌ ಆಗುವರೆಗೂ 2-3 ನಿಮಿಷ ಮಿಶ್ರಣಗೊಳಿಸುವುದನ್ನು ಮುಂದುವರೆಸಿ. “ಬಿರ್ಲಾ ವೈಟ್‌ ಜಿಪ್‌ಕೋಟ್‌” ಚೆನ್ನಾಗಿ ಮಿಶ್ರಣ ಮಾಡುವುದು ತುಂಬಾ ಮುಖ್ಯವಾಗಿರುತ್ತದೆ. ಇದರಿಂದ ಹಚ್ಚುವಿಕೆ ಸುಲಭವಾಗುತ್ತದೆ ಹಾಗೂ ಹೆಚ್ಚಿನ ಹರಡುವಿಕೆಯನ್ನು ನೀಡುತ್ತದೆ. ನೀರಿನೊಂದಿಗೆ ಮಿಶ್ರಣ ಮಾಡಿ ಕೇವಲ 15 ನಿಮಿಷದ ಒಳಗೆ ಉಪಯೋಗಿಸಬಹುದಾದಷ್ಟು ಪ್ರಮಾಣವನ್ನು ಮಾತ್ರ ಸಿದ್ದಪಡಿಸಿಕೊಳ್ಳಿ.
 • ಲೈನ್‌ ಮತ್ತು ಸಮತಟ್ಟವಾದ ಫಿನಿಷ್‌ಗಾಗಿ ಲೆವೆಲಿಂಗ್‌ ಪಟ್ಟಿಯನ್ನು ಉಂಟುಮಾಡುತ್ತದೆ.
  • ಲಂಬವಾದ ಉಬ್ಬು ತಗ್ಗುಗಳನ್ನು ಗುರುತಿಸಲು ವಾಟರ್‌ ಲೆವೆಲ್‌ ಪೈಪ್‌ ಅನ್ನು ಮತ್ತು ಪ್ಲಂಬ್‌ ಅನ್ನು ಉಪಯೋಗಿಸಿ.
  • ಪ್ರತಿ 1.2192 ಮೀಟರ್‌ಗೆ ಜಿಪ್‌ಕೋಟ್‌ ಪೇಸ್ಟ್‌ನಿಂದ ಬುಲ್‌ ಗುರುತು ಮಾಡಿ.
  • ಬುಲ್‌ ಮಾರ್ಕ್‌ ಮೇಲೆ ಅಲ್ಯೂಮಿನಿಯಮ್‌ ಪಟ್ಟಿ ಬಳಸಿ ಲಂಬವಾದ ಲೆವೆಲಿಂಗ್ ಪಟ್ಟಿಗಳನ್ನು ರಚಿಸಿ ಮತ್ತು ಗಾರೆ ಮಾಡಿದ ಜಾಗ ಹಾಗೂ ಅಲ್ಯೂಮಿನಿಯಮ್‌ ಪಟ್ಟಿಯ ಮಧ್ಯದ ಅಂತರವನ್ನು ಬಿರ್ಲಾ ವೈಟ್‌ ಜಿಪ್‌ಕೋಟ್‌ ಪೇಸ್ಟ್‌ನಿಂದ ತುಂಬಿಸಿ ಒಣಗಲು ಬಿಡಿ.
  • ನಿಧಾನವಾಗಿ ಅಲ್ಯೂಮಿನಿಯಮ್‌ ಪಟ್ಟಿಯನ್ನು ತೆಗೆಯಿರಿ ಮತ್ತು ಜಿಪ್‌ಕೋಟ್‌ನಿಂದ ಲೆವೆಲಿಂಗ್‌ ಸ್ಟ್ರಿಪ್ಸ್‌ನ್ನು ಪೂರ್ಣಗೊಳಿಸಿ
  Creating Levelling strips for Line and Level finish
  Application
  ಹಚ್ಚುವಿಕೆ
  • ಸಂಪೂರ್ಣವಾಗಿ “ಬಿರ್ಲಾ ವೈಟ್‌ ಜಿಪ್‌ಕೋಟ್‌” ಮಿಶ್ರಣ ಮಾಡಿದ ನಂತರ ಕರಣೆಯ (ಟ್ರಾವೆಲ್) ಸಹಾಯದಿಂದ ಮೊದಲನೇ ಕೋಟ್‌ ಅನ್ನು ಲೆವೆಲಿಂಗ್‌ ಪಟ್ಟಿಗಳ ನಡುವೆ ಕೆಳಭಾಗದಿಂದ ಮೇಲ್ಮುಖವಾಗಿ ಏಕರೂಪದಲ್ಲಿ ಹಚ್ಚಿ.
  • ಅಗತ್ಯಬಿದ್ದರೆ, ಮತ್ತೊಂದು ಕೋಟ್‌ನ್ನು ಉಬ್ಬುತಗ್ಗುಗಳು ಸಮತಟ್ಟವಾಗುವವರೆಗೆ ಲೇಪಿಸಿ
  • ಮಿಶ್ರಣ ಗಟ್ಟಿಯಾಗುವ ಮುನ್ನ ಅಲ್ಯೂಮಿನಿಯಮ್‌ ಫ್ಲೋಟ್‌ ಬಳಸಿಕೊಂಡು ಮೇಲ್ಮೈ ಅನ್ನು ಲೆವೆಲ್‌ ಮಾಡಿ.
  • ಮೇಲ್ಮೈ ಅನ್ನು ಒಣಗಲು ಬಿಡಿ. ‌
  • ನುಣುಪಾದಮೇಲ್ಮೈಯನ್ನು ಪಡೆಯಲು ಜಿಪ್‌ಕೋಟ್‌ ಸ್ಲರಿಯಿಂದ ಫಿನಿಶ್‌ ಮಾಡಿ
  • . ಪ್ಲಾಸ್ಟರ್‌ನ ದಪ್ಪವು 0.008-0.10 ಮೀಟರ್‌ ಮೀರದಂತೆ ನೋಡಿಕೊಳ್ಳಿ.
  ಮುನ್ನೆಚ್ಚರಿಕೆ
  • ಬಿರ್ಲಾ ವೈಟ್‌ ಜಿಪ್‌ಕೋಟ್‌ ಮಿಶ್ರಣ ಮಾಡಲು ಶುದ್ಧವಾದ ಬಕೆಟ್‌ ಬಳಸಿ. ಪುನಃ ಮಿಶ್ರಣ ಮಾಡುವ ಮೊದಲು ಬಾಕಿ ಉಳಿದ ಹಿಂದಿನ ಮಿಶ್ರಣವನ್ನು ತೆಗೆದು ಹಾಕಿ
  • ಗಟ್ಟಿಯಾದ ಪೇಸ್ಟ್‌ ಅನ್ನು ಪುನಃ ಮಿಶ್ರಣ ಮಾಡಬೇಡಿ.
  • ಮೇಲ್ಮೈಯು ತೇವಾಂಶಕ್ಕೆ ನಿರಂತರವಾಗಿ ಒಡ್ಡದಿರುವ ಹಾಗೆ ಕಾಪಾಡಬೇಕು
  • ಲೇಪಿಸುವಾಗ ನೀರಿನ ಅಂಶವು ಬೇಗನೆ ಕಡಿಮೆಯಾಗುವ ಹಾಗೆ ನೋಡಿಕೊಳ್ಳಬೇಕು; ಇಲ್ಲವಾದಲ್ಲಿ ಅದರ ದೃಢತೆಯು ಕಡಿಮೆಯಾಗುತ್ತದೆ.
  ತಾಂತ್ರಿಕ ವಿಶೇಷಣಗಳು
  ಒಣ ಭಾರೀ ಡೆನ್ಸಿಟಿ kg/m3 645-770
  ಆರಂಭಿಕ ಸೆಟ್ಟಿಂಗ್ ಸಮಯ ನಿಮಿಷಗಳಲ್ಲಿ 15-25
  ಅಂತಿಮ ಸೆಟ್ಟಿಂಗ್ ಸಮಯ ನಿಮಿಷಗಳಲ್ಲಿ 20-30
  ಅಂದಾಜು ಕವರೇಜ್* ಚದರಮೀಟರ್ಗಳಲ್ಲಿ ≥ 80
  ಕರಗುವ MgOWt% ಐಎಸ್ ಕೋಡ್ 2547 ಭಾಗ II ಅನುಸಾರ
  ಕರಗುವ Na2O wt% ಐಎಸ್ ಕೋಡ್ 2547 ಭಾಗ II ಅನುಸಾರ
  ಲಭ್ಯವಿರುವ ಪ್ಯಾಕ್ ಸೈಜ್ ಗಳು
  ಪದೇ ಪದೇ ಕೇಳಲಾದ ಪ್ರಶ್ನೆಗಳು
  Show All
  ಜಿಪ್‌ಕೋಟ್‌ ಎಂದರೆ ಒಳಗಿನ ಗೋಡೆಗಳಿಗಾಗಿ ಸಿದ್ಧಪಡಿಸಲಾದ ಅತ್ಯುನ್ನತವಾದ ಪ್ಲಾಸ್ಟರಿಂಗ್‌ ಪರಿಹಾರವಾಗಿದೆ. ಇದು ಪರಿಪೂರ್ಣವಾದ ಲೈನ್‌ ಮತ್ತು ಲೆವೆಲ್‌ ಫಿನಿಷಿಂಗ್‌ ನೀಡುತ್ತದೆ.
  ಜಿಪ್‌ಕೋಟ್‌ ಫ್ರೀ-ಫ್ಲೋ ಆಗುವ ಬಿಳಿಯ ಪೌಡರ್‌ ಆಗಿದ್ದು, ಇದು 20ಕೆಜಿ, 25ಕೆಜಿ ಮತ್ತು 40ಕೆಜಿಯ ಚೀಲದಲ್ಲಿ ಲಭ್ಯವಿದೆ.
  ಜಿಪ್‌ಕೋಟ್‌ ಅತ್ಯುತ್ತಮ ಶುದ್ಧತೆಯ ಕ್ಯಾಲ್ಸೈನ್ಡ್ ಜಿಪ್ಸಮ್‌ ಮತ್ತು ವಿಶೇಷ ಸಂಯೋಜಕಗಳನ್ನು ಹೊಂದಿರುತ್ತದೆ. ಮತ್ತು ಇದು ಐಯಸ್‌ ಕೋಡ್‌ 2547 ಭಾಗ II ಕ್ಕೆ ಅನುಗುಣವಾಗಿದೆ.
  ಜಿಪ್‌ಕೋಟ್‌ ಅನ್ನು ನೇರವಾಗಿ ಪ್ಲಾಸ್ಟರ್ ಹಾಗೆ ಯಾವುದೇ ರೀತಿಯ ಗಾರೆ ಕೆಲಸ ಮಾಡಿದ ಮೇಲ್ಮೈಗೆ (ಇಟ್ಟಿಗೆ, ಬ್ಲಾಕ್) ಲೇಪಿಸಬಹುದು. ಅಲ್ಲದೇ ಇದನ್ನು ಹ್ಯಾಕ್ಡ್ ಕಾಂಕ್ರೀಟ್ ಮೇಲ್ಮೈಯ ಮೇಲೆ ಉಪಯೋಗಿಸಬಹುದು (ಬಾಂಡಿಂಗ್ ಏಜೆಂಟ್ ಬಳಸುವಂತೆ ಶಿಫಾರಸ್ಸು ಮಾಡಲಾಗುತ್ತದೆ)
  ಜಿಪ್‌ಕೋಟ್‌ನ್ನು 0.008-0.10 ಮೀಟರ್ ದಪ್ಪವನ್ನು ಹೊಂದಿರುವಂತೆ ಲೇಪಿಸಬಹುದು. ಉಬ್ಬು ತಗ್ಗುಗಳು 0.008-0.10 ಮೀಟರ್ ಗಿಂತ ಜಾಸ್ತಿ ಇದ್ದಲ್ಲಿ ಸಿಮೆಂಟ್ ಮತ್ತು ಮರಳಿನ ಬ್ಯಾಕ್ ಕೋಟ್ ಮಾಡುವಂತೆ ಸಲಹೆ ಮಾಡಲಾಗುತ್ತದೆ‌
  ಇಲ್ಲಾ, ಜಿಪ್‌ಕೋಟ್‌ ಒಂದು ಹೇಮಿಹೈಡ್ರೇಟ್‌ ಸಂಯುಕ್ತವಾಗಿದೆ, ಆದ್ದರಿಂದ ಯಾವುದೇ ಹೆಚ್ಚುವರಿ ನೀರಿನ ಅಗತ್ಯವಿರುವುದಿಲ್ಲ.
  ಜಿಪ್‌ಕೋಟ್‌ನ ಮೇಲೆ ಪುಟ್ಟಿ ಬಳಸಿದನಂತರ ಎಲ್ಲಾ ರೀತಿಯ ಬಣ್ಣಗಳನ್ನು ಲೇಪಿಸಬಹುದು.
  ಹೌದು, ಜಿಪ್‌ಕೋಟನ್ನುಯಾವುದೇ ಪಿಓಪಿ ಹಾಕುವವರಿಂದ ಲೇಪಿಸಬಹುದು