ಜಿಪ್ಸೋಫೈನ್

ನೈಸರ್ಗಿಕವಾದ ಕ್ಯಾಲ್ಸೈನ್‌ ಮಾಡಿದ ಜಿಪ್ಸಮ್‌ ಪ್ಲಾಸ್ಟರ್

Loading

ಜಿಪ್ಸೋಫೈನ್

ನೈಸರ್ಗಿಕವಾದ ಕ್ಯಾಲ್ಸೈನ್‌ ಮಾಡಿದ ಜಿಪ್ಸಮ್‌ ಪ್ಲಾಸ್ಟರ್
ಅವಲೋಕನ
ಅತ್ಯಂತ ಶುದ್ಧವಾದ ನೈಸರ್ಗಿಕ ಜಿಪ್ಸಂನಿಂದ ತಯಾರಿಸಲಾಗಿರಿವ ಬಿರ್ಲಾ ವೈಟ್ ಜಿಪ್ಸೋಫೈನ್ ಒಂದು ಜಿಪ್ಸಂ ಹೈಡ್ರೇಟ್ ಆಗಿದೆ. ಇದು ಒಳಭಾಗದ ತೆಳುವಾದ ಪ್ಲಾಸ್ಟರಿಂಗ್ ಹಾಗೂ ಅಲಂಕಾರಿಕ ಲೇಪನಗಳಿಗೆ ಸೂಕ್ತವಾಗಿರುತ್ತದೆ. ಇದರ ಬಾಳಿಕೆ ಬರುವ ಹಾಗೂ ಸುಲಭವಾಗಿ ಹೊಂದಿಕೆಯಾಗುವ ಗುಣದಿಂದಾಗಿ, ಎಲ್ಲಾ ರೀತಿಯ ಅಲಂಕಾರಿಕ ವಿನ್ಯಾಸ ಹಾಗೂ ಇನ್‌-ಸಿಟುಫಾಲ್ಸ್‌ ಸಿಲಿಂಗ್‌ಗಳಿಗೆ ಸೂಕ್ತವಾಗಿರುತ್ತದೆ. ಉತ್ಪನ್ನದಲ್ಲಿನ ವಿಶೇಷವಾದ ಸಂಯೋಜಕಗಳು ಹಾಗೂ ಸದೃಢವಾದ ಗುಣಮಟ್ಟದ ನಿಯಂತ್ರಣದಿಂದಾಗಿ, ಹೆಚ್ಚು ಹರಡುವಿಕೆಯ ಜೊತೆಗೆ ಸಾಮಾನ್ಯ ಪ್ಲಾಸ್ಟರಿಂಗ್‌ ಸಾಧ್ಯವಾಗದೇ ಇರುವಂತಹ ಉಬ್ಬುತಗ್ಗುಗಳನ್ನು ಸರಿಪಡಿಸುತ್ತದೆ. ಈ ಉತ್ಪನ್ನವು ಬಿರ್ಲಾ ವೈಟ್‌ನ ಸಂಶೋಧನೆ ಮತ್ತು ಅಭಿವೃದ್ಧಿಯ ವ್ಯಾಪಕವಾದ ಸಂಶೋಧನೆಯ ಪ್ರತಿಫಲವಾಗಿದೆ ಮತ್ತು ಇದು ನಿಮ್ಮ ಕೋಣೆಗೆ ಒಂದು ಸಮೃದ್ಧತೆಯ ನೋಟವನ್ನು ಒದಗಿಸುತ್ತದೆ.
ಗ್ಯಾಲರಿ
ಉತ್ಪನ್ನ ಮುಖ್ಯಾಂಶಗಳು
No Water Curing
Shrinkage Crack Resistant
Easy to Appply
Economical & Value for Money
ಲಕ್ಷಣಗಳು
  • 72% ನಷ್ಟು ಅತ್ಯುನ್ನತ ಬಿಳುಪು
  • ಪ್ರಮಾಣಿತಗೊಂಡ ಹಸಿರು ಉತ್ಪನ್ನ
  • ಕುಗ್ಗುವಿಕೆ ಹಾಗೂ ಬಿರುಕು ನಿರೋಧಕ
  • ದೀರ್ಘಬಾಳಿಕೆಯ ಫಿನಿಶ್
  • ಹಾಗೂ ಹೆಚ್ಚಿನ ಕವರೇಜ್
ಲಾಭಗಳು
  • ಹೆಚ್ಚಿನ ಕವರೇಜ್ ಒದಗಿಸುತ್ತದೆ
  • ಕ್ಯೂರಿಂಗ್ ಅಗತ್ಯವಿರುವುದಿಲ್ಲ
  • ಸುಲಭವಾಗಿ ಲೇಪಿಸಬಹುದು
  • ಕೇವಲ 5% ಗಿಂತ ಕಡಿಮೆ ಉಳಿಕೆಯನ್ನು ಬಿಡುತ್ತದೆ
  • ಹೆಚ್ಚಿನ ಕಾರ್ಯಸಾಧ್ಯತೆ
  • ವೆಚ್ಚಕ್ಕೆ ತಕ್ಕ ಮೌಲ್ಯ
ಅಪ್ಲಿಕೇಶನ್‌ಗಳು
  • ಒಳಗಿನ ಗೋಡೆ

The technology used to manufacture this product is ‘Patent Pending’.

ಅಪ್ಲಿಕೇಶನ್
Surface Preparation
ಮೇಲ್ಮೈ ತಯಾರಿಕೆ
  • ಗೋಡೆಯ ಮೇಲ್ಮೈಗೆ ಸಡಿಲವಾಗಿ ಅಂಟಿರುವ ಗಲೀಜು, ಧೂಳು, ಗ್ರೀಸ್‌ನಂತಹ ವಸ್ತುಗಳನ್ನು ಸ್ಯಾಂಡ್‌ ಪೇಪರ್ ಪುಟ್ಟಿ ಬ್ಲೇಡ್‌ ಅಥವಾ ವೈರ್‌ ಬ್ರಷ್ ಸಹಾಯದಿಂದ ತೆಗೆಯಿರಿ.
  • ಗೋಡೆಯನ್ನು ಸಾಕಷ್ಟು ಸ್ವಚ್ಚ ನೀರಿನಿಂದ ತೇವಗೊಳಿಸಿ.
  • ಮೇಲ್ಮೈಯನ್ನು ಮೊದಲೇ ತೇವಗೊಳಿಸಿ. ಇದರಿಂದಾಗಿ ನಿಮಗೆ ಹೆಚ್ಚಿನ ಕವರೇಜ್‌, ಮೇಲ್ಮೈಯೊಂದಿಗೆ ಅತ್ಯುತ್ತಮ ಬಾಂಡಿಂಗ್‌ ಸಾಮರ್ಥ್ಯ , ಮತ್ತು ಸುಲಭವಾಗಿ ಕಾರ್ಯಸಾಧ್ಯತೆಯನ್ನು ಒದಗಿಸುತ್ತದೆ..
ಮಿಶ್ರಣಗೊಳಿಕೆ
ಗಂಟು ರಹಿತ ಬಿರ್ಲಾ ವೈಟ್‌ ಜಿಪ್ಸೋಫೈನ್ ಪೇಸ್ಟ್‌ ತಯಾರಿಸಲು 55-60% ಸ್ವಚ್ಚ ನೀರನ್ನು ನಿಧಾನವಾಗಿ ಸೇರಿಸಿ. ಒಂದೇ ಹದದ ಪೇಸ್ಟ್‌ ಆಗುವರೆಗೂ 2-3 ನಿಮಿಷ ಮಿಶ್ರಣಗೊಳಿಸುವುದನ್ನ ಮುಂದುವರೆಸಿ. ಬಿರ್ಲಾ ವೈಟ್‌ ಜಿಪ್ಸೋಫೈನ್ ಅನ್ನು ಚೆನ್ನಾಗಿ ಮಿಶ್ರಣ ಮಾಡುವುದು ತುಂಬಾ ಮುಖ್ಯವಾಗಿರುತ್ತದೆ. ಇದು ಬಳಕೆಗೆ ಸುಲಭವಾಗಿರುತ್ತದೆ ಹಾಗೂ ಹೆಚ್ಚು ಕವರೇಜ್ ಅನ್ನು ನೀಡುತ್ತದೆ. ಜೊತೆಗೆ, ನೀರಿನ ಮಿಶ್ರಣ ಮಾಡಿದ ಕೇವಲ 15 ನಿಮಿಷದ ಒಳಗೆ ಉಪಯೋಗಿಸಬಹುದಾದಷ್ಟು ಪ್ರಮಾಣವನ್ನು ಮಾತ್ರ ಸಿದ್ದಪಡಿಸಿಕೊಳ್ಳಿ.
Mixing
Application
ಬಳಕೆ
  • ಪುಟ್ಟಿ ಬ್ಲೇಡಿನ ಸಹಾಯದಿಂದ ಮೊದಲನೇ ಕೋಟ್‌ನ್ನು ಗೋಡೆಯ ಮೇಲ್ಮೈಗೆ ಕೆಳಭಾಗದಿಂದ ಮೇಲ್ಮುಖವಾಗಿ ಏಕರೂಪದಲ್ಲಿ ಲೇಪಿಸಿ.
  • ಪುಟ್ಟಿ ಬ್ಲೇಡಿನ ಸಹಾಯದಿಂದ ಗೋಡೆಯ ಮೇಲ್ಮೈ ಅನ್ನು ಹೆಚ್ಚಾದ ಪೇಸ್ಟನ್ನು ತೆಗೆದು ಸಮತಟ್ಟಗೊಳಿಸಿ.
  • ಅಗತ್ಯವೆನಿಸದರೆ, ಅದರ ಮೇಲೆ ಇನ್ನೊಂದು ಕೋಟ್ ಬಿರ್ಲಾ ವೈಟ್ ಜಿಪ್ಸೋಫೈನ್ ಅನ್ನು ಲೇಪಿಸಿ.
  • ಸರ್ಫೇಸ್ ಅನ್ನು ಒಣಗಲು ಬಿಡಿ
ತಾಂತ್ರಿಕ ವಿಶೇಷಣಗಳು
ಟೆಕ್ನಿಕಲ್ ಪ್ಯಾರಾಮೀಟರ್ ಬಿರ್ಲಾ ವೈಟ್ ಜಿಪ್ಸೋಫೈನ್
ಸೆಟ್ಟಿಂಗ್ ಸಮಯ (ನಿಮಿಷ) 15-25
ಡೆನ್ಸಿಟಿ kg/m3 720-800
ಕುಗ್ಗಿಸುವ ಸಾಮರ್ಥ್ಯ N/m2 1-3
ಕವರೇಜ್ ಚದರಮೀಟರ್ಗಳಲ್ಲಿ/25 ಕೆಜಿ ಬ್ಯಾಗ್(0.001-0.003 ಮೀಟರ್) 23.2258 ಚದರ ಮೀಟರ್
ಬಿಳುಪು (%) 72+
ರೆಸಿಡ್ಯೂ (%) <5

ಕವರೇಜ್ ಸೂಕ್ತ ಕಾರ್ಯ ನಿರ್ವಹಣಾ ಪರಿಸ್ಥಿತಿಗಳಡಿ 0.001-0.003 ಮೀಟರ್ ದಪ್ಪ ಆಧರಿಸಿದೆ.

ದಾಸ್ತಾನು: ಒಣಸ್ಥಳದಲ್ಲಿ ಎತ್ತರದ ವೇದಿಕೆ ಮೇಲೆ ದಾಸ್ತಾನುಮಾಡಿ

ಪ್ಯಾಕಿಂಗ್: 20 ಕೆಜಿ, 25 ಕೆಜಿ ಮತ್ತು 40 ಕೆಜಿ ಎಸ್ಕೆಯುಗಳಲ್ಲಿ ಲಭ್ಯವಿದೆ

ಶೆಲ್ಫ್ಬಾಳಿಕೆ: 3 ತಿಂಗಳುಗಳು

ಲಭ್ಯವಿರುವ ಪ್ಯಾಕ್ ಸೈಜ್ ಗಳು
ಪದೇ ಪದೇ ಕೇಳಲಾದ ಪ್ರಶ್ನೆಗಳು
Show All

ಬಿರ್ಲಾ ವೈಟ್‌ ಜಿಪ್ಸೋಫೈನ್ ಜಿಪ್ಸಂ ಸೆಮಿ ಹೈಡ್ರೇಟ್ ಆಗಿದ್ದು ಇದನ್ನು ಅತ್ಯಂತ ಶುದ್ಧ ನೈಸರ್ಗಿಕವಾದ ಜಿಪ್ಸಂನಿಂದ ಕ್ಯಾಲ್ಸಿನೇಶನ್‌ ವಿಧಾನದ ಮೂಲಕ ತಯಾರಿಸಲಾಗಿದೆ. ಇದು ಒಳಗಿನ ಇಟ್ಟಿಗೆ ಗೋಡೆಗಳ ಪ್ಲಾಸ್ಟರಿಂಗ್‌ ಮತ್ತು ಪನ್ನಿಂಗ್‌ಗಾಗಿ ಮತ್ತು ಇನ್‌-ಸಿಟು ಫಾಲ್ಸ್‌ ಸೀಲಿಂಗ್‌ ಹಾಗೂ ವಿನ್ಯಾಸದ ಕೆಲಸಗಳಿಗೆ ಸೂಕ್ತವಾಗಿದೆ.

ಬಿರ್ಲಾ ವೈಟ್‌ ಜಿಪ್ಸೋಫೈನ್ ಅನ್ನು ಅತ್ಯಂತ ಶುದ್ಧವಾದ ನೈಸರ್ಗಿಕ ಕ್ಯಾಲ್ಸೈನಡ್ ಜಿಪ್ಸಂ ಪುಡಿಯಿಂದ ತಯಾರಿಸಲಾಗುತ್ತದೆ.

ಒಳಗಿನ ಗೋಡೆಗಳ ಮೇಲೆ ಪ್ಲಾಸ್ಟರಿಂಗ್ ಮಾಡುವುದರ ಜೊತೆಗೆ ಬಿರ್ಲಾ ವೈಟ್‌ ಜಿಪ್ಸೋಫೈನ್‌ ಅನ್ನು ಕಾರ್ನೈಸ್‌ಗಳನ್ನು, ರೋಸ್‌ಗಳನ್ನು, ಮೌಲ್ಢಿಂಗ್‌ಗಳನ್ನು, ಕಮಾನುಗಳನ್ನು ಹಾಗೂ ಇನ್‌-ಸಿಟು ಫಾಲ್ಸ್‌ ಸೀಲಿಂಗ್‌ಗಳನ್ನು ವಿನ್ಯಾಸಗೊಳಿಸಲೂ ಸಹ ಉಪಯೋಗಿಸಬಹುದು

ಬಿರ್ಲಾ ವೈಟ್‌ಜಿಪ್ಸೋಫೈನ್‌ ಅನ್ನು ಎಎಸಿ ಬ್ಲಾಕ್‌ಗಳು, ಕೆತ್ತಿದ ಆರ್ಸಿಸಿ ಮೇಲ್ಮೈ ಗೋಡೆಗಳು ಮತ್ತು ಪ್ಲಾಸ್ಟರ್‌ ಮಾಡಿದ ಗೋಡೆಗಳ ಮೇಲೆ ಬಳಸಬಹುದು.

ಬಿರ್ಲಾ ವೈಟ್‌ಜಿಪ್ಸೋಫೈನ್‌ ಕೋಟಿನ ಸೂಕ್ತವಾದ ದಪ್ಪವು 0.003-0.005 ಮೀಟರ್‌ನ ಒಳಗೆ ಇರುತ್ತದೆ.

ಇಲ್ಲಾ, ಬಿರ್ಲಾ ವೈಟ್‌ಜಿಪ್ಸೋಫೈನ್‌ ಅನ್ನು ಬಳಸಿದ ನಂತರ ನೀರಿನಿಂದ ಕ್ಯೂರಿಂಗ್ ಮಾಡುವ ಅಗತ್ಯವಿರುವುದಿಲ್ಲ.

ಬಿರ್ಲಾ ವೈಟ್‌ಜಿಪ್ಸೋಫೈನ್‌ನ ಮೇಲೆ ಪುಟ್ಟಿಯ ಲೇಪನದ ನಂತರ ಎಲ್ಲಾ ರೀತಿಯ ಬಣ್ಣಗಳನ್ನು ಲೇಪಿಸಬಹುದು.

ಇಲ್ಲಾ, ಬಿರ್ಲಾ ವೈಟ್‌ಜಿಪ್ಸೋಫೈನ್‌ನ್ನುಯಾವುದೇ ಪಿಓಪಿ ಅಪ್ಲಿಕೇಟರ್‌ನಿಂದ ಲೇಪಿಸಬಹುದು

ಬಿರ್ಲಾ ವೈಟ್‌ಜಿಪ್ಸೋಫೈನ್‌ ಅನ್ನು 3 ತಿಂಗಳು ಸಂಗ್ರಹಿಸಿ ಇಡಬಹುದು.

ಜಿಪ್‌ಕೋಟ್‌ ಫ್ರೀ-ಫ್ಲೋ ಆಗುವ ಬಿಳಿಯ ಪೌಡರ್‌ ಆಗಿದ್ದು, ಇದು 20ಕೆಜಿ, 25ಕೆಜಿ ಮತ್ತು 40ಕೆಜಿಯ ಚೀಲದಲ್ಲಿ ಲಭ್ಯವಿದೆ.

ಬಿರ್ಲಾ ವೈಟ್‌ಜಿಪ್ಸೋಫೈನ್‌ನ್ನು ತೇವಾಂಶ ರಹಿತವಾದ ಎತ್ತರವಾದ ಸ್ಥಳದಲ್ಲಿ ಸಂಗ್ರಹಿಸಿ ಇರಿಸಬೇಕು.

ನೀವು ಬಿರ್ಲಾ ವೈಟ್‌ಜಿಪ್ಸೋಫೈನ್‌ನ್ನು ಮಿಶ್ರಣ ಮಾಡಲು ಸ್ವಚ್ಛವಾದ ಬಕೆಟ್‌ ಬಳಸುವುದು ಮುಖ್ಯವಾಗುತ್ತದೆ. ಇನ್ನೊಂದು ಮಿಶ್ರಣವನ್ನು ಮಾಡುವ ಮೊದಲು ಬಾಕಿ ಉಳಿದಿರುವ ಹಿಂದಿನ ಯಾವುದೇ ಮಿಶ್ರಣವನ್ನು ತೆಗೆದು ಹಾಕಿ. ಎಂದಿಗೂ ಗಟ್ಟಿಯಾದ ಪೇಸ್ಟ್‌ ಅನ್ನು ಮರುಮಿಶ್ರಣ ಮಾಡದಿರಿ. ಸಾಮರ್ಥ್ಯವು ಮೇಲ್ಮೈಯು ನಿರಂತರವಾಗಿ ತೇವಾಂಶಕ್ಕೆ ಒಡ್ಡದಿರುವ ಹಾಗೆ ಕಾಪಾಡಬೇಕು ಮತ್ತು ಲೇಪಿಸುವಾಗ ನೀರಿನ ಅಂಶ ಬೇಗನೆ ಕಡಿಮೆಯಾಗುವ ಹಾಗೆ ನೋಡಿಕೊಳ್ಳಬೇಕು ಇಲ್ಲವಾದಲ್ಲಿ ಬಲವು ಕುಂದುವುದು.

ಹೌದು, ಬಿರ್ಲಾ ವೈಟ್‌ ಜಿಪ್ಸೋಫೈನ್‌ನ್ನು ಗ್ರೀನ್ ಪ್ರೊ ಅವರ ಶಿಷ್ಟತೆಗೆ ಅನುಗುಣವಾಗಿದೆ ಹಾಗೂ ಗ್ರೀನ್‌ಪ್ರೊ ಸರ್ಟಿಫಿಕೇಶನ್ ಹೊಂದಿದೆ.

ಬಿರ್ಲಾ ವೈಟ್‌ ಭಾರತದಾದ್ಯಂತ ಸಿಎಎಸ್‌ಸಿ (ಕಸ್ಟಮರ್ ಅಪ್ಲಿಕೇಶನ್ ಸಪೋರ್ಟ್‌ ಸೆಲ್‌) ಬೆಂಬಲಕ್ಕಾಗಿ ತರಬೇತಿ ಪಡೆದ ಮತ್ತು ಬದ್ಧ ಸಿವಿಲ್ ಇಂಜಿನಿಯರುಗಳ ತಂಡವನ್ನು ಹೊಂದಿದೆ. ಈ ಸಿವಿಲ್ ಇಂಜಿನಿಯರುಗಳು ಆನ್‌ ಸೈಟ್ ತಾಂತ್ರಿಕ ಬೆಂಬಲವನ್ನು ಒದಗಿಸುತ್ತಾರೆ ಮತ್ತು ಆನ್‌ ಸೈಟ್ ಸ್ಯಾಂಪ್ಲಿಂಗ್ ಒದಗಿಸುತ್ತಾರೆ. ವಿಶೇಷ ತರಬೇತಿ ಮತ್ತು ಆಧುನಿಕ ಪರಿಕರಗಳನ್ನು ಬಳಸಿ ಮೇಲ್ಮೈ ಫಿನಿಶಿಂಗ್‌ ಅಪ್ಲಿಕೇಟರ್‌ಗಳಿಗೆ ತರಬೇತಿಯನ್ನೂ ಸಹ ನೀಡುತ್ತಾರೆ. ಅವರಿಗೆ ಇದು ಪರಿಣಿತಿ ಒದಗಿಸಲು ಮತ್ತು ವಿಶೇಷ ಬಿರ್ಲಾ ವೈಟ್ ಅಪ್ಲಿಕೇಟರ್‌ಗಳಾಗಲು ನೆರವಾಗುತ್ತದೆ.

ಸದ್ಯಕ್ಕೆ ಆನ್‌ಲೈನ್ ಪಾವತಿಯ ಆಯ್ಕೆ ಇಲ್ಲ. ಹಾಗೂ, ನಾವು ನಮ್ಮ ಯಾವುದೇ ಉತ್ಪನ್ನಗಳನ್ನು ಸದ್ಯಕ್ಕೆ ಮನೆಗೆ ನೇರವಾಗಿ ತಲುಪಿಸುವುದಿಲ್ಲ. ಅವುಗಳನ್ನು ಕೇವಲ ನಮ್ಮ ಸ್ಟಾಕಿಸ್ಟ್ ನೆಟ್‌ವರ್ಕ್ ಮೂಲಕ ಮಾತ್ರ ಮಾರಾಟ ಮಾಡಲಾಗುತ್ತದೆ. ಆದರೆ, ಬಿರ್ಲಾ ವೈಟ್‌ಜಿಪ್ಸೋಫೈನ್‌ ಅನ್ನು ಲೇಪನಕ್ಕೆ ತರಬೇತಿ ಹೊಂದಿದ ಗುತ್ತಿಗೆದಾರರು ಅಗತ್ಯವಿರುತ್ತದೆ. ಹೀಗಾಗಿ ನಾವು ನಮ್ಮ ಅಧಿಕೃತ ರಿಟೇಲರ್/ಸ್ಟಾಕಿಸ್ಟ್ ಮೂಲಕ ಖರೀದಿ ಮಾಡುವಂತೆ ಶಿಫಾರಸು ಮಾಡುತ್ತೇವೆ. ಅವರು ತರಬೇತಿ ಹೊಂದಿರುವ ಕುಶಲ ಗುತ್ತಿಗೆದಾರರೊಂದಿಗೆ ಸಂಪರ್ಕ ಸಾಧಿಸಲು ನಿಮಗೆ ಸಹಾಯ ಮಾಡುತ್ತಾರೆ.