Loading

ಹಕ್ಕುಹೇಳಿಕೆ

ಬಿರ್ಲಾ ವೈಟ್ ವೆಬ್‌ಸೈಟ್‌ ಕರಾರು

birlawhite.com ವೆಬ್‌ಸೈಟ್ ("ಸೈಟ್‌") ಎಂಬುದು ಬಿರ್ಲಾ ವೈಟ್ ("birlawhite.com") ಒದಗಿಸಿದ ಆನ್‌ಲೈನ್‌ ಮಾಹಿತಿ ಸೇವೆಯಾಗಿದ್ದು, ಈ ಕೆಳಗೆ ನಿಗದಿಇಸದ ನಿಯಮ ಮತ್ತು ಷರತ್ತುಗಳಿಗೆ ನಿಮ್ಮ ಬದ್ಧತೆಗೆ ಒಳಪಟ್ಟಿರುತ್ತದೆ.

ಸೈಟ್ ಅನ್ನು ಪ್ರವೇಶಿಸುವುದು ಅಥವಾ ಬಳಸುವುದಕ್ಕೂ ಮುನ್ನ ದಯವಿಟ್ಟು ಈ ಪಠ್ಯವನ್ನು ಗಮನವಿಟ್ಟು ಓದಿ. ಈ ಸೈಟ್ ಅನ್ನು ಪ್ರವೇಶಿಸುವ ಅಥವಾ ಬಳಸುವ ಮೂಲಕ, ಈ ಕೆಳಗೆ ನಮೂದಿಸಿದ ನಿಯಮ ಮತ್ತು ಷರತ್ತುಗಳಿಗೆ ನೀವು ಸಮ್ಮತಿಸುತ್ತೀರಿ. ಈ ನಿಯಮ ಮತ್ತು ಷರತ್ತುಗಳಿಗೆ ಬದ್ಧವಾಗಲು ಬಯಸದಿದ್ದರೆ, ಈ ಸೈಟ್ ಅನ್ನು ನೀವು ಪ್ರವೇಶಿಸದಿರಬಹುದು ಅಥವಾ ಬಳಸದಿರಬಹುದು. ಈ ಕರಾರನ್ನು ಯಾವುದೇ ಸಮಯದಲ್ಲಿ birlawhite.com ತಿದ್ದುಪಡಿ ಮಾಡಬಹುದು ಮತ್ತು ಇಂತಹ ಬದಲಾವಣೆಗಳು ಸೈಟ್‌ನಲ್ಲಿ ತಿದ್ದುಪಡಿ ಮಾಡಿದ ಕರಾರನ್ನು ಪೋಸ್ಟ್ ಮಾಡಿದ ತಕ್ಷಣದಿಂದಲೇ ಜಾರಿಗೆ ಬರುತ್ತದೆ. ಇಂತಹ ತಿದ್ದುಪಡಿಗಳ ಬಗ್ಗೆ ನೀವು ತಿಳಿದುಕೊಂಡಿರುವುದಕ್ಕಾಗಿ ಕಾಲಕಾಲಕ್ಕೆ ಕರಾರನ್ನು ಮರುಪರಿಶೀಲಿಸಲು ಸಮ್ಮತಿಸುತ್ತೀರಿ ಮತ್ತು ಸೈಟ್‌ ಅನ್ನು ನೀವು ನಿರಂತರವಾಗಿ ಪ್ರವೇಶಿಸುವುದು ಅಥವಾ ಬಳಸುವುದನ್ನು ತಿದ್ದುಪಡಿ ಮಾಡಿದ ಕರಾರಿನ ಸಮಗ್ರ ಸಮ್ಮತಿ ಎಂಬುದಾಗಿ ಭಾವಿಸಲಾಗುತ್ತದೆ.

1. ಹಕ್ಕುಸ್ವಾಮ್ಯ, ಲೈಸೆನ್ಸ್‌ಗಳು ಮತ್ತು ಕಲ್ಪನೆಯ ಸಲ್ಲಿಕೆಗಳು

ಸೈಟ್‌ನ ಕಂಟೆಂಟ್‌ಗಳನ್ನು ಅಂತಾರಾಷ್ಟ್ರೀಯ ಹಕ್ಕುಸ್ವಾಮ್ಯ ಮತ್ತು ಟ್ರೇಡ್‌ಮಾರ್ಕ್‌ ಕಾನೂನುಗಳಿಂದ ರಕ್ಷಿಸಲ್ಪಟ್ಟಿದೆ. ಹಕ್ಕುಸ್ವಾಮ್ಯಗಳು ಮತ್ತು ಟ್ರೇಡ್‌ಮಾರ್ಕ್‌ಗಳ ಮಾಲೀಕರುbirlawhite.com, ಅದರ ಅಂಗಸಂಸ್ಥೆಗಳು ಮತ್ತು/ಅಥವಾ ಇತರ ತೃತೀಯ ಪಕ್ಷದ ಲೈಸೆನ್ಸರುಗಳಾಗಿದ್ದಾರೆ. ಪಠ್ಯ, ಗ್ರಾಫಿಕ್ಸ್, ಕೋಡ್‌ ಮತ್ತು/ಅಥವಾ ಸಾಫ್ಟ್‌ವೇರ್‌ ಸೇರಿದಂತೆ ಸೈಟ್‌ನಲ್ಲಿ ಇರುವ ಸಾಮಗ್ರಿಯನ್ನು ಯಾವುದೇ ರೀತಿಯಲ್ಲಿ ನೀವು ತಿದ್ದುಪಡಿ, ನಕಲು, ಮರು ಉತ್ಪನ್ನ, ಮರು ಪ್ರಕಟ, ಅಪ್‌ಲೋಡ್‌, ಪೋಸ್ಟ್, ವರ್ಗಾವಣೆ ಅಥವಾ ವಿತರಣೆಯನ್ನು ಮಾಡಬಾರದು . ಸಾಮಗ್ರಿಗಳಯಾವುದೇ ಹಕ್ಕುಸ್ವಾಮ್ಯ ಅಥವಾ ಸ್ವತ್ತು ನೋಟಿಸ್‌ಗಳನ್ನು ಬದಲಿಸುವುದಿಲ್ಲ ಅಥವಾ ಅಳಿಸುವುದಿಲ್ಲ ಎಂಬುದಕ್ಕೆ ಒಪ್ಪಿದಲ್ಲಿ ನಿಮ್ಮ ವಾಣಿಜ್ಯೇತರ ಬಳಕೆಗಾಗಿ ಮಾತ್ರ ಸೈಟ್‌ ವಿವಿಧ ಕಡೆಗಳಿಂದ ಸಾಮಗ್ರಿಯ ಭಾಗವನ್ನು ನೀವು ಪ್ರಿಂಟ್‌ ಮತ್ತು ಡೌನ್‌ಲೋಡ್‌ ಮಾಡಬಹುದು. ನೀವು ಸೈಟ್‌ನ (ಬುಲೆಟಿನ್ ಬೋರ್ಡ್‌ಗಳು, ಫೋರಮ್‌ಗಳು ಮತ್ತು ಸುದ್ದಿ ಗ್ರೂಪ್‌ಗಳಂತಹ) ಯಾವುದೇ ಸಾರ್ವಜನಿಕ ಕಡೆಗಳಲ್ಲಿ ಅಥವಾ ಇಮೇಲ್ ಮೂಲಕ birlawhite.com ಗೆ ಎಲ್ಲ ರೀತಿಯಲ್ಲಿ ಮತ್ತು ಯಾವುದೇ ಮಾಧ್ಯಮದಲ್ಲಿ ಅರಿತ ಅಥವಾ ಇನ್ನು ಮುಂದೆ ಅಭಿವೃದ್ಧಿಪಡಿಸಿದ ಯಾವುದೇ ಸಾಮಗ್ರಿಗಳು ಮತ್ತು ಇತರ ಮಾಹಿತಿಯನ್ನು (ಹೊಸ ಅಥವಾ ಸುಧಾರಿತ ಉತ್ಪನ್ನಗಳು ಮತ್ತು ಸೇವೆಗಳಿಗೆ ಇಲ್ಲಿ ಒಳಗೊಂಡ ಕಲ್ಪನೆಗಳೂ ಒಳಗೊಂಡಂತೆ, ಆದರೆ ಅದಕ್ಕೆ ಮಿತಿಗೊಳ್ಳದಂತೆ) ಉಪ ಲೈಸೆನ್ಸ್‌ಗೆ, ಮರು ಉತ್ಪಾದನೆಗೆ, ವಿತರಣೆ, ವರ್ಗಾವಣೆ, ಡಿರೈವೇಟಿವ್ ಕೆಲಸಗಳ ರಚನೆಗೆ, ಸಾರ್ವಜನಿಕವಾಗಿ ಪ್ರದರ್ಶಿಸಲು ಮತ್ತು ಸಾರ್ವಜನಿಕವಾಗಿ ಅಭಿನಯಿಸಲು birlawhite.com ಗೆ ವಿಶೇಷವಲ್ಲದ, ರಾಯಲ್ಟಿಯಿಂದ ಮುಕ್ತವಾದ, ವಿಶ್ವಾದ್ಯಂತದ, ಶಾಶ್ವತವಾದ ಲೈಸೆನ್ಸ್‌ ಅನ್ನು ನೀವು ಮಂಜೂರು ಮಾಡುತ್ತೀರಿ. ಸಲ್ಲಿಸಿದ ಸಾಮಗ್ರಿಗಳಿಗೆ ಮತ್ತು ಇತರ ಮಾಹಿತಿಗೆ ಸಂಬಂಧಿಸಿದಂತೆ ಎಲ್ಲ ಜಾಹೀರಾತುಗಳು, ಮಾರ್ಕೆಟಿಂಗ್ ಮತ್ತು ಪ್ರಚಾರ ಸಾಮಗ್ರಿಗೆ ಸಂಬಂಧಿಸಿದಂತೆ ನಿಮ್ಮ ಹೆಸರನ್ನು ಬಳಸಲೂ ನೀವು birlawhite.com ಗೆ ಅನುಮತಿ ನೀಡುತ್ತೀರಿ. birlawhite.com ಜೊತೆಗೆ ಸಂವಹನದಲ್ಲಿ ಯಾವುದೇ ಸ್ವತ್ತು ಹಕ್ಕಿನ ಆರೋಪಿತ ಅಥವಾ ವಾಸ್ತವ ಉಲ್ಲಂಘನೆ ಅಥವಾ ಅಸಮರ್ಪಕತೆಯನ್ನು birlawhite.com ವಿರುದ್ಧ ಹೊಂದಿರುವುದಿಲ್ಲ ಎಂದು ನೀವು ಒಪ್ಪುತ್ತೀರಿ.

ಇಲ್ಲಿನ

ಅಥವಾ ಸೈಟ್‌ನಲ್ಲಿನ ಟ್ರೇಡ್‌ಮಾರ್ಕ್‌ಗಳು ಪ್ರಕಟಣರಗಳು, ಉತ್ಪನ್ನಗಳು, ಕಂಟೆಂಟ್ ಅಥವಾ ಸೇವೆಗಳ ಉಲ್ಲೇಖವು birlawhite.com ನ ವಿಶೇಷ ಟ್ರೇಡ್‌ಮಾರ್ಕ್‌ಗಳು ಅಥವಾ ಸೇವೆ ಮಾರ್ಕ್‌ಗ‌ಳಾಗಿವೆ. ಸೈಟ್‌ನಲ್ಲಿ ನಮೂದಿಸಿದ ಇತರ ಉತ್ಪನ್ನ ಮತ್ತು ಕಂಪನಿ ಹೆಸರುಗಳು ಅವುಗಳಿಗೆ ಸಂಬಂಧಿಸಿದ ಮಾಲೀಕರ ಟ್ರೇಡ್‌ಮಾರ್ಕ್‌ಗಳಾಗಿರಬಹುದು.

2. ಸೈಟ್‌ನ ಬಳಕೆ.

birlawhite.com ಸ್ಪಷ್ಟವಾಗಿ ಒದಗಿಸಿದ ಮಾಹಿತಿ, ಉತ್ಪನ್ನಗಳು ಅಥವಾ ಸೇವೆಯ ಹೊರತಾಗಿ ಯಾವುದೇ ಮಾಹಿತಿ, ಉತ್ಪನ್ನಗಳು ಅಥವಾ ಸೇವೆಗಳನ್ನು ಇಂಟರ್ನೆಟ್‌ನಲ್ಲಿ ಯಾವುದೇ ರೀತಿಯಲ್ಲೂ ಕಾರ್ಯನಿರ್ವಹಣೆ, ನಿಯಂತ್ರಣ ಅಥವಾ ಶಿಫಾರಸನ್ನು birlawhite.com ಮಾಡುವುದಿಲ್ಲ. birlawhite.com ಗುರುತಿಸಿದ ಮಾಹಿತಿ, ಉತ್ಪನ್ನಗಳು ಅಥವಾ ಸೇವೆಗಳನ್ನು ಹೊರತುಪಡಿಸಿ ಸೈಟ್‌ನಲ್ಲಿ ಅಥವಾ ಸಾಮಾನ್ಯವಾಗಿ ಇಂಟರ್ನೆಟ್ ಮೂಲಕ ಒದಗಿಸಿದ ಎಲ್ಲ ಮಾಹಿತಿ, ಉತ್ಪನ್ನಗಳು ಮತ್ತು ಸೇವೆಗಳನ್ನು ತೃತೀಯ ಪಕ್ಷಗಳು ಒದಗಿಸಿರುತ್ತವೆ ಮತ್ತು ಇವು birlawhite.com ಗೆ ಸಂಬಂಧ ಹೊಂದಿರುವುದಿಲ್ಲ. birlawhite.com ಮೂಲಕ ಡೌನ್‌ಲೋಡ್‌ಗೆ ಲಭ್ಯವಿರುವ ಫೈಲ್‌ಗಳು ಸೋಂಕುಗಳು, ವೈರಸ್‌ಗಳು, ವಾರ್ಮ್‌ಗಳು, ಟ್ರೋಜನ್‌ ಹೋರ್ಸ್‌ಗಳು ಅಥವಾ ಸ್ವತ್ತುಗಳನ್ನು ಮಲಿನ ಅಥವಾ ನಾಶಗೊಳಿಸಬಹುದಾದ ಇತರ ಕೋಡ್‌ಗಳಿಂದ ಮುಕ್ತವಾಗಿರುತ್ತವೆ ಎಂದು ಗ್ಯಾರಂಟಿ ಅಥವಾ ವಾರಂಟಿಯನ್ನು ನೀಡುವುದಿಲ್ಲ ಎಂದು ನೀವು ಅರ್ಥ ಮಾಡಿಕೊಂಡಿದ್ದೀರಿ. ಡೇಟಾ ಇನ್‌ಪುಟ್ ಮತ್ತು ಔಟ್‌ಪುಟ್‌ನ ನಿಖರತೆಗಾಗಿ ನಿಮ್ಮ ನಿರ್ದಿಷ್ಟ ಅಗತ್ಯಗಳನ್ನು ಪೂರೈಸಲು ಸೂಕ್ತ ಕ್ರಮಗಳು ಮತ್ತು ಚೆಕ್‌ಪಾಯಿಂಟ್‌ಗಳನ್ನು ಅನುಷ್ಠಾನಗೊಳಿಸಲು ಮತ್ತು ಯಾವುದೇ ನಷ್ಟವಾದ ಡೇಟಾವನ್ನು ಮರುರೂಪಿಸಿಕೊಳ್ಳುವ ಸೈಟ್‌ನಿಂದ ಹೊರಗೆ ವಿಧಾನಗಳನ್ನು ನಿರ್ವಹಿಸಲು ನೀವು ಜವಾಬ್ದಾರರಾಗಿರುತ್ತೀರಿ.

ಸೈಟ್ ಮತ್ತು ಇಂಟರ್ನೆಟ್ ಅನ್ನು ನೀವು ಬಳಸುವುದರ ಒಟ್ಟು ಜವಾಬ್ದಾರಿ ಮತ್ತು ರಿಸ್ಕ್‌ ಅನ್ನು ನೀವು ಊಹಿಸುತ್ತೀರಿ. ಸೈಟ್‌ ಮತ್ತು ಸಂಬಂಧಿತ ಮಾಹಿತಿಯನ್ನು birlawhite.com ಹೇಗಿದೆಯೋ ಹಾಗೆ ಆಧಾರದಲ್ಲಿ ಒದಗಿಸುತ್ತದೆ ಮತ್ತು ಸೇವೆ, ಯಾವುದೇ ಸಾಮಗ್ರಿ ಮಾಹಿತಿ ಅಥವಾ ಸೇವೆ ಅಥವಾ ಸಾಮಾನ್ಯವಾಗಿ ಇಂಟರ್ನೆಟ್‌ನಲ್ಲಿ ಒದಗಿಸಿದ ಸೇವೆಗೆ ಅಭಿವ್ಯಕ್ತಿಪೂರ್ವಕ ಮತ್ತು ಭಾವಿಸಲ್ಪಟ್ಟ ವಾರಂಟಿಗಳು, ಪ್ರತಿನಿಧಿತ್ವಗಳು ಅಥವಾ ಶಿಫಾರಸುಗಳನ್ನು (ಶೀರ್ಷಿಕೆಯ ವಾರಂಟಿಗಳ ಮಿತಿ ಇಲ್ಲದಂತೆ ಅಥವಾ ಉಲ್ಲಂಘನೆ ಇಲ್ಲದಂತೆ ಅಥವಾ ಮರ್ಚಂಟಬಿಲಿಟಿಯ ಭಾವಿಸಿದ ವಾರಂಟಿಗಳು ಅಥವಾ ನಿರ್ದಿಷ್ಟ ಉದ್ದೇಶಕ್ಕೆ ಭಾವಿಸಿದ ವಾರಂಟಿಗಳನ್ನು ಒಳಗೊಂಡಂತೆ) ಒಳಗೊಂಡಿರುತ್ತದೆ ಮತ್ತು ಯಾವುದೇ ಇಂತಹ ವಹಿವಾಟಿನಿಂದ ಅಥವಾ ನೇರವಾಗಿ ಉಂಟಾದ ವೆಚ್ಚ ಅಥವಾ ಹಾನಿಗೆ birlawhite.com ಜವಾಬ್ದಾರನಲ್ಲ. ಸೇವೆಯಲ್ಲಿ ಅಥವಾ ಸಾಮಾನ್ಯವಾಗಿ ಇಂಟರ್ನೆಟ್‌ನಲ್ಲಿ ಒದಗಿಸಿದ ಎಲ್ಲ ಅಭಿಪ್ರಾಯಗಳು, ಸಲಹೆ, ಸೇವೆಗಳು, ಸಾಮಗ್ರಿಗಳು ಮತ್ತು ಇತರ ಮಾಹಿತಿಯ ನಿಖರತೆ, ಪರಿಪೂರ್ಣತೆ ಮತ್ತು ಉಪಯುಕ್ತತೆಯನ್ನು ಮೌಲೀಕರಿಸುವುದು ನಿಮ್ಮ ಜವಾಬ್ದಾರಿಯಾಗಿದೆ. ಸೇವೆಯಲ್ಲಿ ಅಡ್ಡಿ ಇರುವುದಿಲ್ಲ ಅಥವಾ ದೋಷಮುಕ್ತವಾಗಿರುತ್ತೆದ ಅಥವಾ ಸೇವೆಯಲ್ಲಿನ ದೋಷವನ್ನು ಸರಿಪಡಿಸಲಾಗುತ್ತದೆ ಎಂದು birlawhite.com ವಾರಂಟಿ ನೀಡುವುದಿಲ್ಲ.

ಸಂಭಾವ್ಯ ಹಾನಿಯ ಬಗ್ಗ birlawhite.com ಅಥವಾ ಅದರ ಪ್ರತಿನಿಧಿಗಳಿಗೆ ಸಲಹೆ ಮಾಡಿದ್ದರೂ ಸಹ ಸೇವೆಯ ಬಳಕೆ ಅಥವಾ ಬಳಕೆ ಮಾಡಲಾಗದಿರುವಿಕೆಯಿಂದ ಉಂಟಾದ ಅಥವಾ ಸೇವೆಯ ಮೇಲೆ ಒದಗಿಸಿದ ಯಾವುದೇ ಮಾಹಿತಿ ಅಥವಾ ವಹಿವಾಟು ಅಥವಾ ಸೇವೆಯಿಂದ ಡೌನ್‌ಲೋಡ್ ಮಾಡಿದ ಅಥವಾ ಯಾವುದೆ ಇಂತಹ ಮಾಹಿತಿ ಅಥವಾ ಸೇವೆಯಲ್ಲಿನ ವಿಳಂಬಕ್ಕೆ ಯಾವುದೇ ಸನ್ನಿವೇಶದಲ್ಲೂ ಯಾವುದೇ ಘಟನಾತ್ಮಕ, ಸನ್ನಿವೇಶಾತ್ಮಕ ಅಥವಾ ಪರೋಕ್ಷ ಹಾನಿಗೆ; ಅಥವಾ ಸೇವೆಯ ಮೂಲಕ ಡೌನ್‌ಲೋಡ್‌ ಮಾಡಿದ ಯಾವುದೇ ಸಾಮಗ್ರಿಗಳು ಅಥವಾ ಮಾಹಿತಿ ಮತ್ತು/ಅಥವಾ ಸೇವೆಯಲ್ಲಿನ ಯಾವುದೇ ದೋಷಗಳು, ಹೊರಗಿಡುವಿಕೆಗಳು ಅಥವಾ ಇತರ ನಿಖರತೆಗಳಲ್ಲದವುಗಳಿಗೆ ಕ್ಲೇಮ್‌ಗೆ birlawhite.com ಬಾಧ್ಯನಾಗಿರುವುದಿಲ್ಲ. ಯಾಕೆಂದರೆ ಕೆಲವು ರಾಜ್ಯಗಳು ಸನ್ನಿವೇಶಾತ್ಮಕ ಅಥವಾ ಘಟನಾತ್ಮಕ ಹಾನಿಗಳಿಗೆ ಹೊಣೆಗಾರಿಕೆಯ ಹೊರಗಿಡುವಿಕೆ ಅಥವಾ ಮಿತಿಯನ್ನು ಅನುಮತಿಸುವುದರಿಂದ, ಈ ಮೇಲಿನ ಮಿತಿಗಳು ನಿಮಗೆ ಅನ್ವಯಿಸದೇ ಇರಬಹುದು. ಇಂತಹ ರಾಜ್ಯಗಳಲ್ಲಿ, ಕಾನೂನು ಅನುಮತಿಸಿದ ಅತಿ ಹೆಚ್ಚಿನದಕ್ಕೆ birlawhite.com ನ ಬಾಧ್ಯತೆ ಒಳಗೊಂಡಿರುತ್ತದೆ.

ಇದರ ಮೂಲಕ ನೀವು ಆಕ್ಸೆಸ್ ಮಾಡಬಹುದಾದ ಅಥವಾ ಈ ಸೈಟ್‌ಗೆ ನಿಮ್ಮನ್ನು ಲಿಂಕ್ ಮಾಡುವ ಯಾವುದೇ ಇತರ ವೆಬ್‌ಸೈಟ್‌ಗೆ birlawhite.com ಯಾವುದೇ ಪ್ರತಿನಿಧಿತ್ವ ಹೊಂದಿರುವುದಿಲ್ಲ. birlawhite.com ನದ್ದಲ್ಲದ ವೆಬ್‌ಸೈಟ್‌ ಅನ್ನು ಆಕ್ಸೆಸ್ ಮಾಡಿದಾಗ, ಇದು birlawhite.com ನಿಂದ ಇದು ಸ್ವತಂತ್ರವಾಗಿದೆ ಮತ್ತು ಆ ವೆಬ್‌ಸೈಟ್‌ನಲ್ಲಿನ ಕಂಟೆಂಟ್‌ ಮೇಲೆ birlawhite.com ಯಾವುದೇ ನಿಯಂತ್ರಣ ಹೊಂದಿಲ್ಲ ಎಂದು ಅರ್ಥ ಮಾಡಿಕೊಳ್ಳಿ. ಇದರ ಜೊತೆಗೆ, birlawhite.com ವೆಬ್‌ಸೈಟ್‌ಗೆ ಒಂದು ಲಿಂಕ್‌ನ ಅರ್ಥವು ಕಂಟೆಂಟ್‌ಗೆ ಯಾವುದೇ ಜವಾಬ್ದಾರಿಯನ್ನು ಅಥವಾ ಅಂತಹ ವೆಬ್‌ಸೈಟ್‌ನ ಬಳಕೆಯನ್ನು birlawhite.com ಶಿಫಾರಸು ಮಾಡುತ್ತದೆ ಅಥವಾ ಸಮ್ಮತಿಸುತ್ತದೆ ಎಂದಲ್ಲ.

3. ಹಕ್ಕುರಕ್ಷಣೆ

ನಿಮ್ಮಿಂದ ಅಥವಾ ಸೇವೆಯನ್ನು ಆಕ್ಸೆಸ್ ಮಾಡುವ ಯಾರಿಂದಲಾದರೂ ಈ ಕರಾರಿನ ಯಾವುದೇ ಉಲ್ಲಂಘನೆಯಿಂದ ಉಂಟಾಗುವ ಎಲ್ಲ ನಷ್ಟಗಳು, ವೆಚ್ಚಗಳು, ಹಾನಿಗಳು ಮತ್ತು ಖರ್ಚುಗಳು, ಅಟಾರ್ನಿ ಫೀಗಳಿಂದ birlawhite.com, ಅದರ ಅಧಿಕಾರಿಗಳು, ನಿರ್ದೇಶಕರು, ಉದ್ಯೋಗಿಗಳು, ಏಜೆಂಟರು, ಲೈಸೆನ್ಸರುಗಳು, ಪೂರೈಕೆದಾರರು ಮತ್ತು ಯಾವುದೇ ತೃತೀಯ ಪಕ್ಷದ ಮಾಹಿತಿ ಪೂರೈಕೆದಾರರನ್ನು ಹಕ್ಕುರಕ್ಷಣೆ, ಸಮರ್ಥನೆ ಮತ್ತು ಅಪಾಯ ರಹಿತರನ್ನಾಗಿಸಲು ನೀವು ಸಮ್ಮತಿಸುತ್ತೀರಿ.

4. ತೃತೀಯ ಪಕ್ಷಗಳ ಹಕ್ಕುಗಳು

ಪ್ಯಾರಾ 2(ಸೇವೆಯ ಬಳಕೆ) ಮತ್ತು 3(ಹಕ್ಕುರಕ್ಷಣೆ) ಅನುಬಂಧಗಳು birlawhite.com ಮತ್ತು ಅದರ ಅಧಿಕಾರಿಗಳು, ನಿರ್ದೇಶಕರು, ಉದ್ಯೋಗಿಗಳು, ಏಜೆಂಟರುಗಳು, ಲೈಸೆನ್ಸರುಗಳು, ಪೂರೈಕೆದಾರರು ಮತ್ತು ಯಾವುದೇ ತೃತೀಯ ಪಕ್ಷದ ಮಾಹಿತಿ ಪೂರೈಕೆದಾರರ ಸೇವೆಗೆ ಅನುಕೂಲಕ್ಕಾಗಿದೆ. ಈ ಪ್ರತಿ ವ್ಯಕ್ತಿಗಳು ಅಥವಾ ಸಂಸ್ಥೆಗಳು ತಮ್ಮ ಪರವಾಗಿ ನಿಮ್ಮ ವಿರುದ್ಧ ಅನುಬಂಧಗಳನ್ನು ಜಾರಿಗೊಳಿಸಲು ಮತ್ತು ಹೊರಡಿಸಲು ಹಕ್ಕು ಹೊಂದಿರುತ್ತವೆ.

5. ನಿಯಮ; ವಜಾ

ಯಾವುದೇ ಕಾರಣಕ್ಕೆ ಯಾವುದೇ ಸಮಯದಲ್ಲಿ ಪೂರ್ವಸೂಚನೆ ನೀಡದೇ ಯಾವುದೇ ಪಕ್ಷವು ಈ ಕರಾರನ್ನು ವಜಾಗೊಳಿಸಬಹುದು. ಪ್ಯಾರಾ 1(ಹಕ್ಕುಸ್ವಾಮ್ಯ, ಲೈಸೆನ್ಸ್‌ಗಳು ಮತ್ತು ಕಲ್ಪನೆಯ ಸಲ್ಲಿಕೆಗಳು), 2 (ಸೇವೆಯ ಬಳಕೆ), 3 (ಹಕ್ಕು ರಕ್ಷಣೆ), 4 (ತೃತೀಯ ಪಕ್ಷಗಳ ಹಕ್ಕುಗಳು) ಮತ್ತು 6 (ಇತ್ಯಾದಿ) ಅಡಿಯಲ್ಲಿನ ಅನುಬಂಧಗಳು ಈ ಕರಾರಿನ ಯಾವುದೇ ಜವಾಗೊಳಿಸುವಿಕೆಯಿಂದ ರಕ್ಷಿಸಲ್ಪಡುತ್ತವೆ.

6. ಇತರೆ

ಮಾಡಿಕೊಂಡ ಮತ್ತು ಭಾರತದಲ್ಲಿ ಜಾರಿಗೊಳಿಸಬೇಕಿರುವ ಕರಾರುಗಳಿಗೆ ಅನ್ವಯಿಸುವಂತೆ ಭಾರತೀಯ ಕಾನೂನುಗಳ ಪ್ರಕಾರ ಈ ಕರಾರನ್ನು ನಿರ್ದೇಶಿಸಬೇಕು ಮತ್ತು ಪರಿಭಾವಿಸಬೇಕು. ಈ ಕರಾರಿಗೆ ಸಂಬಂಧಿಸಿದ ಅಥವಾ ಇದರ ಅಡಿಯಲ್ಲಿನ ಪಕ್ಷಗಳಿಗೆ ಸಂಬಂಧಿಸಿದ ಯಾವುದೇ ಉದ್ದೇಶಕ್ಕೆ birlawhite.com ಮತ್ತು ನಿಮ್ಮ ಮಧ್ಯದ ಯಾವುದೇ ಕಾನೂನು ಕ್ರಮ ಅಥವಾ ಕಾರ್ಯಾಚಣೆಯನ್ನು ಭಾರತದಲ್ಲಿನ ಕೇಂದ್ರೀಯ ಅಥವಾ ರಾಜ್ಯದ ವ್ಯಾಪ್ತಿಯೊಳಗಿನ ನ್ಯಾಯಾಲಯಕ್ಕೆ ವಿಶೇಷವಾಗಿ ಒಳಪಡಿಸಲಾಗುತ್ತದೆ. ಸೇವೆಗೆ ಸಂಬಂಧಿಸಿದಂತೆ ನೀವು ಹೊಂದಿರಬಹುದಾದ ಯಾವುದೇ ಕ್ರಮ ಅಥವಾ ಕ್ಲೇಮ್‌ನ ಕಾರಣವನ್ನು ಕ್ಲೇಮ್‌ ಅಥವಾ ಕ್ರಮದ ಕಾರಣ ಉಂಟಾಗುವುದಕ್ಕೂ ಒಂದು (1) ವರ್ಷ ಮೊದಲು ಅಥವಾ ಅಂತಹ ಕ್ಲೇಮ್ ಅಥವಾ ಕ್ರಿಯೆಯ ಕಾರಣ ನಿಷೇಧಗೊಳ್ಳುವುದಕ್ಕೂ ಮೊದಲು ಆರಂಭಿಸಬೇಕು. ಈ ಕರಾರಿನ ಯಾವುದೇ ಅನುಬಂಧದ ಕಟ್ಟುನಿಟ್ಟಿನ ಜಾರಿ ಅಥವಾ ಜಾರಿಗೆ ಸೂಚನೆ ನೀಡಲು birlawhite.com ವೈಫಲ್ಯವನ್ನು ಯಾವುದೇ ಅನುಬಂಧ ಅಥವಾ ಹಕ್ಕುಗಳ ವಿನಾಯಿತಿ ಎಂದು ಪರಿಭಾವಿಸುವಂತಿಲ್ಲ. ಪಕ್ಷಗಳ ಮಧ್ಯದ ಕಾರ್ಯಾಚರಣೆಯ ವೇಳೆಯಲ್ಲಾಗಲೀ ಅಥವಾ ವ್ಯಾಪಾರ ಅಭ್ಯಾಸಗಳಲ್ಲಾಗಲೀ ಈ ಕರಾರಿನ ಯಾವುದೇ ಅನುಬಂಧವನ್ನು ತಿದ್ದುಪಡಿ ಮಾಡಲಾಗುವುದಿಲ್ಲ. ನಿಮಗೆ ನೋಟಿಸ್ ನೀಡದೇ ಯಾವುದೇ ಸಮಯದಲ್ಲಿ ಯಾವುದೇ ಪಕ್ಷಕ್ಕೆ ಈ ಕರಾರು ಅಡಿಯಲ್ಲಿ ಹಕ್ಕುಗಳು ಮತ್ತು ಕರ್ತವ್ಯಗಳನ್ನು birlawhite.com ನಿಯೋಜಿಸಬಹುದು.

ಇಲ್ಲಿ ಅಭಿವ್ಯಕ್ತಿಪೂರ್ವಕವಾಗಿ ಮಂಜೂರು ಮಾಡದ ಯಾವುದೇ ಹಕ್ಕುಗಳನ್ನು ಮೀಸಲಿಡಲಾಗಿದೆ.