ಮುನ್ನೋಟ
ಬಿರ್ಲಾ ವೈಟ್ ಜಿಆರ್ಸಿಯು ಗ್ಲಾಸ್ ಫೈಬರ್ ಅಳವಡಿಸಿದ ಕಾಂಕ್ರೀಟ್ ಆಗಿದ್ದು, ವೈವಿಧ್ಯಮಯ ಮತ್ತು ಅತಿ ಹಗುರ ಮೌಲ್ಡಿಂಗ್ ಸಾಮಗ್ರಿಯಾಗಿದೆ. ಸಂಕೀರ್ಣವಾದ ಹಾಗೂ ಗಟ್ಟಿಮುಟ್ಟಾದ ಗೋಡೆಗಳನ್ನು ನಿರ್ಮಿಸಲು ಅನುವು ಮಾಡುವಂತೆ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಪೂರಕ ಆರ್ಕಿಟೆಕ್ಚರ್ ಐಡಿಯಾಗಳ ಜೊತೆಗೆ, ಸುಂದರ ವಿನ್ಯಾಸಕ್ಕೂ ಇದು ಸಹಾಯ ಮಾಡುತ್ತದೆ. ಇದು ವಿನ್ಯಾಸಗಾರರಿಗೂ ಉತ್ತಮ ಆಯ್ಕೆಯಾಗಿದೆ. ಪುನಶ್ಚೇತನ, ನವೀಕರಣ ಮತ್ತು ಹೊಸ ನಿರ್ಮಾಣಕ್ಕೆ ಸೂಕ್ತವಾಗಿದ್ದು, ಆಕಾರ, ರೂಪ ಮತ್ತು ಟೆಕ್ಷ್ಚರ್ಗಳಲ್ಲಿ ವಿವಿಧ ಸಾಧ್ಯತೆಗಳನ್ನು ಒದಗಿಸುತ್ತದೆ.