ಮೇಲ್ಮೈ ಸಿದ್ಧಪಡಿಸುವಿಕೆ
“ಬಿರ್ಲಾ ವೈಟ್ ಜಿಪ್ಕೋಟ್” ಲೇಪಿಸುವ ಮೊದಲು ಗೋಡೆಯ ಮೇಲ್ಮೈ ಮೇಲೆ ಸಡಿಲವಾಗಿ ಅಂಟಿ ಕೊಂಡಿರುವ ಎಲ್ಲಾ ವಸ್ತುಗಳನ್ನು ಸ್ಯಾಂಡ್ ಪೇಪರ್, ಪುಟ್ಟಿ ಬ್ಲೇಡ್ ಅಥವಾ ವೈರ್ ಬ್ರೆಷ್ ಸಹಾಯದಿಂದ ತೆಗೆಯಿರಿ. ಮೇಲ್ಮೈ ಸ್ವಚ್ಚವಾಗಿರಬೇಕು, ಧೂಳು, ಗ್ರೀಸ್, ಸಡಿಲ ವಸ್ತುಗಳಿಂದ ಮುಕ್ತವಾಗಿರಬೇಕು ಗೋಡೆಯನ್ನು ಸಾಕಷ್ಟು ಸ್ವಚ್ಚ ನೀರಿನಿಂದ ತೇವಗೊಳಿಸಿ.
ಮೇಲ್ಮೈ ಪೂರ್ವ ತೇವಗೊಳಿಸುವಿಕೆ - ಲೇಪಿಸುವ ಮೊದಲು ಸರ್ಫೆಸ್ ತೇವಗೊಂಡಿರಬೇಕು. ಇದರಿಂದಾಗಿ ಕೆಲಸವು ಸುಲಭವಾಗುತ್ತದೆ ಮತ್ತು ಹೆಚ್ಚಿನ ಕವರೇಜ್ ದೊರೆಯುತ್ತದೆ ಹಾಗೂ ಮೇಲ್ಮೈಯೊಂದಿಗೆ ಉತ್ತಮ ಅಂಟಿಕೊಳ್ಳುತ್ತದೆ.
ಮಿಶ್ರಣಗೊಳಿಸುವ ವಿಧಾನ: - ಬಿರ್ಲಾ ವೈಟ್ ಜಿಪ್ಕೋಟ್ನ ಗಂಟು ರಹಿತ ಪೇಸ್ಟ್ ತಯಾರಿಸಲು 60-65% ಸ್ವಚ್ಚ ನೀರನ್ನು ನಿಧಾನವಾಗಿ ಸೇರಿಸಿ. ಹದವಾದ ಪೇಸ್ಟ್ ಆಗುವರೆಗೂ 2-3 ನಿಮಿಷ ಮಿಶ್ರಣಗೊಳಿಸುವುದನ್ನು ಮುಂದುವರೆಸಿ. “ಬಿರ್ಲಾ ವೈಟ್ ಜಿಪ್ಕೋಟ್” ಚೆನ್ನಾಗಿ ಮಿಶ್ರಣ ಮಾಡುವುದು ತುಂಬಾ ಮುಖ್ಯವಾಗಿರುತ್ತದೆ. ಇದರಿಂದ ಹಚ್ಚುವಿಕೆ ಸುಲಭವಾಗುತ್ತದೆ ಹಾಗೂ ಹೆಚ್ಚಿನ ಹರಡುವಿಕೆಯನ್ನು ನೀಡುತ್ತದೆ. ನೀರಿನೊಂದಿಗೆ ಮಿಶ್ರಣ ಮಾಡಿ ಕೇವಲ 15 ನಿಮಿಷದ ಒಳಗೆ ಉಪಯೋಗಿಸಬಹುದಾದಷ್ಟು ಪ್ರಮಾಣವನ್ನು ಮಾತ್ರ ಸಿದ್ದಪಡಿಸಿಕೊಳ್ಳಿ.