ರೀ-ಪೇಂಟ್‌ ಪುಟ್ಟಿ
ನಿಮ್ಮ ಗೋಡೆಗಳಿಗೆ ಧೂಳಿನಿಂದ ಮುಕ್ತವಾಗಿ 38% ವೇಗವಾಗಿ ಪುನಃ ಪೇಂಟ್ ಮಾಡಿ ಮತ್ತು ಅವುಗಳಿಗೆ ಬಿರ್ಲಾ ವೈಟ್‌ಆರ್‌ ರಿಪೇಂಟ್‌ ಪುಟ್ಟಿಯಿಂದ ಹೊಳಪಿನ ಫಿನಿಶ್ ನೀಡಿ.
ರೀ-ಪೇಂಟ್‌ ಪುಟ್ಟಿ
ನಿಮ್ಮ ಗೋಡೆಗಳಿಗೆ ಧೂಳಿನಿಂದ ಮುಕ್ತವಾಗಿ 38% ವೇಗವಾಗಿ ಪುನಃ ಪೇಂಟ್ ಮಾಡಿ ಮತ್ತು ಅವುಗಳಿಗೆ ಬಿರ್ಲಾ ವೈಟ್‌ಆರ್‌ ರಿಪೇಂಟ್‌ ಪುಟ್ಟಿಯಿಂದ ಹೊಳಪಿನ ಫಿನಿಶ್ ನೀಡಿ.
ಮುನ್ನೋಟ
ಬಿರ್ಲಾ ವೈಟ್‌ ರೀಪೇಂಟ್‌ ಪುಟ್ಟಿಯು ನಿಮ್ಮ ರಿಪೇಂಟಿಂಗ್‌ ಅಗತ್ಯಗಳಿಗೆ ಸಿದ್ಧಪಡಿಸಿದ್ದಾಗಿದೆ! ಇದು 38%* ಸಮಯವನ್ನು ರೀಪೇಂಟಿಂಗ್ ಪ್ರಕ್ರಿಯೆಯಲ್ಲಿ ಉಳಿಸುತ್ತದೆ ಮತ್ತು ಧೂಳಿನಿಂದ ಮುಕ್ತವಾದ ಅನುಭವವನ್ನು ನೀಡುತ್ತದೆ!
ಗ್ಯಾಲರಿ
ಉತ್ಪನ್ನ ಮುಖ್ಯಾಂಶಗಳು
62% ಹೆಚ್ಚು ಅಂಟಿಕೊಳ್ಳುವಿಕೆ*
ಬಹುತೇಕ ಧೂಳು ಮುಕ್ತ*
38% ವರೆಗೆ ಸಮಯ ಉಳಿಸುತ್ತದೆ*
ವೈಶಿಷ್ಟ್ಯಗಳು
 • ಸಾಮಾನ್ಯ ಪುಟ್ಟಿಗಿಂತ ಟಾಪ್‌ಕೋಟ್‌ಗೆ 62% ಹೆಚ್ಚು ಅಧೆಶನ್
 • ಸಾಮಾನ್ಯ ಪುಟ್ಟಿಗಿಂತ 2 ಪಟ್ಟು ಹೆಚ್ಚು ವಾಟರ್ ರೆಸಿಸ್ಟೆಂಟ್‌
 • ಅಧಿಕ ಬಾಳಿಕೆ
 • ಶೂನ್ಯ ವಿಒಸಿಗಳು
ಪ್ರಯೋಜನಗಳು
 • ರಿಪೇಂಟಿಂಗ್‌ ಪ್ರಕ್ರಿಯೆಯಲ್ಲಿ 38%* ಸಮಯವನ್ನು ಉಳಿಸುತ್ತದೆ
 • ಧೂಳಿನಿಂದ ಮುಕ್ತ* ರಿಪೇಂಟಿಂಗ್‌ ಅನುಭವವನ್ನು ನೀಡುತ್ತದೆ
 • ಎಲ್ಲ ರೀತಿಯ ಪೇಂಟ್‌ಗಳನ್ನು ರಕ್ಷಿಸುತ್ತದೆ
 • ಪ್ರೈಮರ್ ಅಗತ್ಯವಿಲ್ಲ
ಅಪ್ಲಿಕೇಶನ್‌ಗಳು
 • ಒಳ ಗೋಡೆಗಳು
 • ಹೊರ ಗೋಡೆಗಳು
ತಾಂತ್ರಿಕ ವಿವರಗಳು
Sr. No ತಾಂತ್ರಿಕ ಮಾನದಂಡ ವಿಶೇಷ ವಿವರಗಳು ಪರೀಕ್ಷಿಸುವ ವಿಧಾನ
1 *Coverage (square metre / kg/ Two Coat) [On Ideal smooth surface] 1.48-1.76 In House
2 Pot life (Hours) 3.0-3.5 In House
3 Tensile Adhesion strength @28 days (N/m2) >=1.0 EN 1348
4 Water Capillary Absorption (ml), 30 min @28 days <=0.80 Karsten Tube
5 Compressive strength @28 days (N/m2) 3.5-7.5 EN 1015-11
6 Bulk Density (g/cm3) 0.85-1.05 In House
*This value is on smooth surface; however this may change according to surface texture.
ಪದೇ ಪದೇ ಕೇಳಲಾದ ಪ್ರಶ್ನೆಗಳು
ಗೋಡೆಗಳಿಗೆ ಹೊಸದಾಗಿ ಪೇಂಟ್‌ ಮಾಡಲು ಫ್ರೆಶ್ ಪೇಂಟ್‌ ಬಳಸಲಾಗುತ್ತದೆ, ಈಗಾಗಲೇ ಪೇಂಟ್ ಮಾಡಿದ ಗೋಡೆಗಳಿಗೆ ಸ್ವಲ್ಪ ದಿನದ ನಂತರ ಪುನಃ ಪೇಂಟ್ ಮಾಡಲು ಬಳಸಲಾಗುತ್ತದೆ. ಸಾಮಾನ್ಯವಾಗಿ, 3-4 ವರ್ಷಗಳ ಅಂತರದ ನಂತರ ಜನರು ರಿಪೇಂಟ್ ಮಾಡುತ್ತಾರೆ. ಕಾಲ ಸರಿದಂತೆ ಪೇಂಟ್‌ ಕಳೆಗುಂದುತ್ತದೆ, ಹೊಪ್ಪಳಿಕೆಗಳು, ಫ್ಲೇಕಿಂಗ್ ಮತ್ತು ಇತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ರಿಪೇಂಟಿಂಗ್‌ ಪ್ರಕ್ರಿಯೆಯಲ್ಲಿ ಕೆಲವು ವರ್ಷಗಳ ಹಿಂದೆ ಪೇಂಟ್ ಮಾಡಲ್ಪಟ್ಟ ಗೋಡೆಗಳಿಗೆ ಪುಟ್ಟಿ ಕೋಟ್‌ ಅಪ್ಲೈ ಮಾಡುವ ಪ್ರಕ್ರಿಯೆಯೂ ಒಳಗೊಂಡಿರುತ್ತದೆ. ಫ್ರೆಶ್ ಪೇಂಟಿಂಗ್‌ಗಿಂತ ಈ ಪ್ರಕ್ರಿಯೆ ಅಷ್ಟೇನೂ ಸಂಕೀರ್ಣವಾದದ್ದಲ್ಲ. ಯಾಕೆಂದರೆ ಬೇಸ್ ಅನ್ನು ಪುನಃ ಸಿದ್ಧಪಡಿಸುವ ಅಗತ್ಯ ಇರುವುದಿಲ್ಲ. ಸಾಮಾನ್ಯವಾಗಿ, ಗೋಡೆಯ ಮೇಲಿನ ಅಸಮಾನತೆಗಳನ್ನು ಹೊಸ ಪೇಂಟ್ ಅನ್ನು ಗೋಡೆಯ ಮೇಲೆ ಕೋಟ್ ಮಾಡುವುದಕ್ಕೂ ಮೊದಲು ಸರಿಪಡಿಸಲಾಗುತ್ತದೆ.
ಬಿರ್ಲಾ ವೈಟ್ ರಿಪೇಂಟ್‌ ಪುಟ್ಟಿಯು ವೈಟ್‌ ಸಿಮೆಂಟ್ ಆಧರಿತ, ಪ್ರೀಮಿಯಂ ಗುಣಮಟ್ಟದ ಪುಟ್ಟಿಯಾಗಿದ್ದು, ಅಧಿಕ ಅಧೆಶನ್ ಪ್ರಾಪರ್ಟಿ ಹೊಂದಿದೆ. ಇದರ ಉತ್ತಮ ಸಾರ್ಥ್ಯ ಮತ್ತು ಉತ್ತಮ ಬಾಂಡಿಂಗ್‌ನಿಂದಾಗಿ ಹಳೆಯ, ಸವಕಳಿಯಾದ, ಪೇಂಟ್ ಮಾಡಿದ ಗೋಡೆಗಳ ಮೇಲೆ ಸರಿಯಾದ ಸಿದ್ಧತೆ ಮಾಡಿಕೊಂಡ ನಂತರ ಅಪ್ಲೈ ಮಾಡುವುದು ಅನುಕೂಲಕರವಾಗಿದೆ. ಅದಕ್ಕಿಂತ ಹೆಚ್ಚಾಗಿ, ಇದು ಉತ್ತಮ ವೈಟ್‌ನೆಸ್‌, ವಾಟರ್‌ ರೆಸಿಸ್ಟೆಂಟ್ ಹೊಂದಿದೆ ಮತ್ತು ಇದಕ್ಕೆ ಪ್ರೈಮರ್ ಕೋಟ್‌ಗಳು ಬೇಕಾಗುವುದಿಲ್ಲ. ಬಿರ್ಲಾ ವೈಟ್ ರಿಪೇಂಟ್ ಪುಟ್ಟಿಯು 38%* ಸಮಯವನ್ನು ರಿಪೇಂಟಿಂಗ್ ಪ್ರಕ್ರಿಯೆಯಲ್ಲಿ ಉಳಿಸುತ್ತದೆ ಮತ್ತು ಇದು ಧೂಳು ಮುಕ್ತವಾಗಿದೆ*
"ಸಾಮಾನ್ಯ ಪುಟ್ಟಿಯಲ್ಲಿ ಕೆಲಸ ಮಾಡುವಾಗ, ನೀವು ಪುಟ್ಟು ಕೋಟ್‌ಗೂ ಮೊದಲು ಮತ್ತು ಪುಟ್ಟಿ ಕೋಟ್‌ ನಂತರ ಪ್ರೈಮರ್ ಕೋಟ್ ಅನ್ನು ನೀವು ಅಪ್ಲೈ ಮಾಡಬೇಕಾಗುತ್ತದೆ. ಬಿರ್ಲಾ ವೈಟ್‌ ರೀಪೇಂಟ್‌ ಪುಟ್ಟಿಯಲ್ಲಿ, ನೀವು ಈ ಹಂತವನ್ನು ಸಂಪೂರ್ಣ ಬಿಟ್ಟುಬಿಡಬಹುದು. ಇದರಿಂದಾಗಿ ಸಮಯ ಮತ್ತು ಒಟ್ಟಾರೆ ವೆಚ್ಚ ಉಳಿತಾಯವಾಗುತ್ತದೆ.

ಅ.ಸಂ. ಸಾಂಪ್ರದಾಯಿಕ ರಿಪೇಂಟಿಂಗ್‌ ಪ್ರಕ್ರಿಯೆ ಬಿರ್ಲಾ ವೈಟ್‌ ರಿಪೇಂಟ್‌ ಪುಟ್ಟಿ ಪ್ರಕ್ರಿಯೆ
1 ಹಳೆಯ ಪೇಂಟ್‌ ತೆಗೆಯಿರಿ ಸಡಿಲ ಭಾಗಗಳನ್ನು ತೆಗೆಯಿರಿ
2 ಸಡಿಲ ಭಾಗಗಳನ್ನು ತೆಗೆಯಿರಿ ಗೋಡೆಯನ್ನು ಪ್ರೀ ವೆಟ್‌ ಮಾಡುವುದು
3 ಒಂದು ಕೋಟ್‌ ಪ್ರೈಮರ್ ಅಪ್ಲೈ ಮಾಡಿ ಇಡೀ ಗೋಡೆಗೆ 1 ಕೋಟ್ ಬಿರ್ಲಾ ವೈಟ್‌ ರಿಪೇಂಟ್ ಪುಟ್ಟಿಯನ್ನು ಅಪ್ಲೈ ಮಾಡಿ
4 ಅಗತ್ಯವಿದ್ದಲ್ಲಿ ಸಾಧಾರಣ ಪುಟ್ಟಿಯನ್ನು ಬಳಸಿ ಪ್ಯಾಚ್‌ ವರ್ಕ್‌ ಮಾಡಿ ಪುಟ್ಟಿ ಬ್ಲೇಡ್ ಬಳಸಿ ಗೀರು ತೆಗೆದುಹಾಕಿ
5 ಪ್ಯಾಚ್ ವರ್ಕ್‌ ಅನ್ನು ಸಮತಟ್ಟಾಗಿಸಲು ಗೋಡೆಯನ್ನು ಸ್ಯಾಂಡ್ ಮಾಡಿ ಬಿರ್ಲಾ ವೈಟ್‌ ರಿಪೇಂಟ್‌ ಪುಟ್ಟಿಯ ಎರಡನೇ ಕೋಟ್ ಅಪ್ಲೈ ಮಾಡಿ
6 ಸಾಧಾರಣ ಪುಟ್ಟಿಯ 2ನೇ ಕೋಟ್‌ ಅಪ್ಲೈ ಮಾಡಿ ಪೇಂಟ್‌
7 ಗೋಡೆಯನ್ನು ಪುನಃ ಸ್ಯಾಂಡ್‌ ಮಾಡಿ  
8 ಎರಡನೇ ಕೋಟ್‌ ಪ್ರೈಮರ್ ಅಪ್ಲೈ ಮಾಡಿ  
9 ಪೇಂಟ್‌  
ಅಕ್ರಿಲಿಕ್‌ ಪುಟ್ಟಿಗಿಂತ ಬಿರ್ಲಾ ವೈಟ್‌ ರಿಪೇಂಟ್‌ ಪುಟ್ಟಿಯು ಹೆಚ್ಚು ಅಧೆಶನ್‌ ಮತ್ತು ಟೆನ್ಸೈಲ್ ಸಾಮರ್ಥ್ಯವನ್ನು ಹೊಂದಿದೆ. ಇದರಿಂದಾಗಿ ಹೊಳಪಿನ ಫಿನಿಶ್ ಅನ್ನು ಇದು ನೀಡುತ್ತದೆ.
ಬಿರ್ಲಾ ವೈಟ್‌ ರಿಪೇಂಟ್‌ ಪುಟ್ಟಿ ಅಪ್ಲೈ ಮಾಡುವುದಕ್ಕೂ ಮೊದಲು ಪ್ರಿ ವೆಟ್ಟಿಂಗ್‌ ಮಾಡುವುದು ಅಗತ್ಯವಿದೆ. ಯಾಕೆಂದರೆ, ಇದು ಉತ್ತಮ ಕಾರ್ಯಸಾಧ್ಯತೆ ಮತ್ತು ಅಧಿಕ ಬಾಂಡಿಂಗ್ ಅನ್ನು ಸಬ್‌ಸ್ಟ್ರೇಟ್‌ ಸರ್ಫೇಸ್‌ನೊಂದಿಗೆ ಒದಗಿಸುತ್ತದೆ.
ಮಿಕ್ಸಿಂಗ್ ಅನುಪಾತವು ಪುಟ್ಟಿ ಪೌಡರ್‌ಗೆ 45% ಶುದ್ಧ ನೀರು ಆಗಿರುತ್ತದೆ. ಹೀಗಾಗಿ, 1 ಲಕಿಲೋ ಬಿರ್ಲಾ ವೈಟ್‌ ರಿಪೇಂಟ್‌ ಪುಟ್ಟಿಗೆ 450 ಮಿ.ಲೀ ನೀರು ಬೇಕಾಗುತ್ತದೆ.
ಈ ಉತ್ಪನ್ನವನ್ನು 3-5 ನಿಮಿಷಗಳವರೆಗೆ ಮೆಕಾನಿಕ್ ಸ್ಟಿರರ್‌ ಬಳಸಿ ಮಿಕ್ಸ್ ಮಾಡಬೇಕು. ಇದರ ಜೊತೆಗೆ, 10-15 ನಿಮಿಷಗಳವರೆಗೆ ಮ್ಯಾನ್ಯುಅಲ್ ಆಗಿಯೂ ಮಿಕ್ಸ್ ಮಾಡಬಹುದು. ಅಂತಿಮ ಉತ್ಪನ್ನವು ಕ್ರೀಮ್‌ ರೂಪದಲ್ಲಿರಬೇಕು. ಉತ್ತಮ ಫಲಿತಾಂಶಕ್ಕಾಗಿ, ಮಿಕ್ಸ್ ಮಾಡಿದ ನಮತರ 5 ನಿಮಿಷಗಳವರೆ ಸ್ಲರಿಯನ್ನು ಹಾಗೆಯೇ ಬಿಡಬೇಕು ಎಂದು ಸಲಹೆ ಮಾಡುತ್ತೇವೆ. ಮಿಕ್ಸ್ ಮಾಡಿದ 3-3.5 ಗಂಟೆಗಳವರೆಗೆ ಸ್ಲರಿಯನ್ನು ಬಳಸಬೇಕು. ಅದರ ನಂತರ ಸ್ಲರಿ ಗಟ್ಟಿಯಾಗಲು ಆರಂಭವಾಗುತ್ತದೆ.
 • ಈ ಉತ್ಪನ್ನವನ್ನು ಅಪ್ಲೈ ಮಾಡಲು ಪುಟ್ಟಿ ಬ್ಲೇಡ್ ಬಳಸಬೇಕಾಗುತ್ತದೆ. ಬಳಕೆಗೂ ಮುನ್ನ ಚೆನ್ನಾಗಿ ಸ್ಲರಿಯನ್ನು ತಿರುಗಿಸಬೇಕಾಗುತ್ತದೆ. ಅಪ್ಲೈ ಮಾಡುವಾಗ ಸಬ್‌ಸ್ಟ್ರೇಟ್‌ನ ತಾಪಮಾನವು 40 ಡಿಗ್ರಿಗಿಂತ ಹೆಚ್ಚಳ ಇಲ್ಲ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು.
 • ಮೊದಲ ಕೋಟ್ ಅನ್ನು ಅಪ್ಲೈ ಮಾಡಿದ 3 ಗಂಟೆಗಳವರೆಗೆ ಗೋಡೆ ಒಣಗಲು ಬಿಡಿ. ಒಣಗಿದ ನಂತರ, ಗೋಡೆಯ ಮೇಲೆ ಇರುವ ಸಡಿಲ ಸಾಮಗ್ರಿಗಳನ್ನು ತೆಗೆದುಹಾಕಿ. ಇದಕ್ಕಾಗಿ, ಒದ್ದೆ ಸ್ಪಾಂಜ್‌ ಅಥವಾ ಪುಟ್ಟಿ ಬ್ಲೇಡ್‌ನಿಂದಲೇ ಮೇಲ್ಮೈಯನ್ನು ಮೆತ್ತಗೆ ಒರೆಸುವಂತೆ ನಾವು ಶಿಫಾರಸು ಮಾಡುತ್ತೇವೆ.
 • ಮೊದಲ ಕೋಟ್ ಸಂಪೂರ್ಣ ಒಣಗಿದ ನಂತರ ಮತ್ತು ಸಡಿಲ ಭಾಗಗಳನ್ನು ತೆಗದ ನಂತರ, ಎರಡನೇ ಕೋಟ್ ಅಪ್ಲೈ ಮಾಡಿ ಮತ್ತು ಇಡೀ ಪ್ರಕ್ರಿಯೆಯನ್ನು ಪುನರಾವರ್ತಿಸಿ. ಎರಡೂ ಕೋಟ್‌ಗಳ ಒಟ್ಟು ದಪ್ಪವು ಗರಿಷ್ಠ 0.0015 ಮೀಟರ್ ಆಗಿರುತ್ತದೆ ಎಂದು ಖಚಿತಪಡಿಸಿ.
 • ಇದರ ನಂತರ, ಪೇಂಟ್ ಅಪ್ಲೈ ಮಾಡುವುದಕ್ಕೂ 10-12 ಗಂಟೆಗಳವರೆಗೆ ಮೇಲ್ಮೈಯನ್ನು ಒಣಗಿಸಿಡಿ.
 • ಯಾವುದೇ ರೀತಿಯ ಪೇಂಟ್ ಅನ್ನು ಅಪ್ಲೈ ಮಾಡುವುದಕ್ಕೂ ಮೊದಲು ಅಸಮಾನತೆಯನ್ನು ತೆಗೆದುಹಾಕಬೇಕಾಗಿದ್ದರೆ, ಹೊಳಪಿನ ವೈಟ್‌ ಸರ್ಫೇಸ್‌ ಫಿನಿಶ್‌ ಪಡೆಯಲು 500 ನಂಬರ್‌ಗಿಂತ ಕಡಿಮೆಯ ವಾಟರ್‌ಪ್ರೂಫಿಂಗ್‌ ಎಮೆರಿ ಪೇಪರ್ ಬಳಸಿ ಸರ್ಫೇಸ್‌ ಅನ್ನು ಮೃದುವಾಗಿ ಲೆವೆಲ್‌ ಮಾಡಿ.
ಬಿರ್ಲಾ ವೈಟ್‌ ರಿಪೇಂಟ್‌ ಪುಟ್ಟಿ ಅನ್ನು ಅಪ್ಲೈ ಮಾಡುವಾಗ, ವಾಲ್ ಸರ್ಫೇಸ್ ಅನ್ನು ಪ್ರೀ ವೆಟ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಕ್ರೀಮ್‌ನಷ್ಟು ದಪ್ಪವಾಗಿಟ್ಟುಕೊಳ್ಳಿ ಮತ್ತು ನಮೂದಿಸಿದ ಅನುಪಾತಕ್ಕೆ ಅನುಗುಣವಾಗಿ ಇದು ಇರಬೇಕು. 3-3.5 ಗಂಟೆಗಳ ಕಾಲಾವಧಿಯೊಳಗೆ ಬಳಸಬೇಕಾಗಿರುವ ಪ್ರಮಾಣವನ್ನು ಸಿದ್ಧಪಡಿಸುವುದು ಉತ್ತಮ. ಯಾಕೆಂದರೆ ಅದರ ನಂತರ ಸ್ಲರಿ ಗಟ್ಟಿಯಾಗಲು ಆರಂಭವಾಗುತ್ತದೆ. ಯಾವುದೇ ರೀತಿಯಲ್ಲಿ ಸ್ಲರಿ ನುಂಗಿದರೆ ಅಥವಾ ದೇಹದ ಒಳಗೆ ಹೋದರೆ ತಕ್ಷಣ ವೈದ್ಯಕೀಯ ನೆರವು ಪಡೆಯಿರಿ. ಅಂತಿಮವಾಗಿ, ಈ ಉತ್ಪನ್ನವನ್ನು ತಂಪಾದ, ಒಣ ಸ್ಥಳದಲ್ಲಿ ಸಂಗ್ರಹಿಸಿಡಬೇಕು ಮತ್ತು ಮಕ್ಕಳ ಕೈಗೆ ಸಿಗದಂತೆ ದೂರದಲ್ಲಿಡಬೇಕು.
ಹೌದು, ಬಿರ್ಲಾ ವೈಟ್‌ ರಿಪೇಂಟ್‌ ಪುಟ್ಟಿಯು ಗ್ರೀನ್‌ಪ್ರೋ ಮಾನದಂಡಗಳನ್ನು ಪೂರೈಸುತ್ತದೆ ಮತ್ತು ಗ್ರೀನ್‌ಪ್ರೋ ಪ್ರಮಾಣೀಕರಣಕ್ಕೆ ಅರ್ಹವಾಗಿದೆ.
ಪ್ರಸ್ತುತ ಆನ್‌ಲೈನ್ ಪಾವತಿಯ ಆಯ್ಕೆ ಇಲ್ಲ. ಹಾಗೂ, ನಾವು ನಮ್ಮ ಯಾವುದೇ ಉತ್ಪನ್ನಗಳನ್ನು ಸದ್ಯಕ್ಕೆ ಮನೆಗೆ ನೇರವಾಗಿ ತಲುಪಿಸುವುದಿಲ್ಲ. ಅವುಗಳನ್ನು ನಮ್ಮ ಸ್ಟಾಕಿಸ್ಟ್ ನೆಟ್‌ವರ್ಕ್ ಮೂಲಕ ಮಾರಾಟ ಮಾಡಲಾಗುತ್ತದೆ. ಆದರೆ, ಬಿರ್ಲಾ ವೈಟ್‌ ರಿಪೇಂಟ್‌ ಪುಟ್ಟಿ ಅಪ್ಲೈ ಮಾಡಲು ತರಬೇತಿ ಹೊಂದಿದ ಕಾಂಟ್ರಾಕ್ಟರ್ ಬೇಕಾಗುತ್ತದೆ. ಹೀಗಾಗಿ ನಾವು ನಮ್ಮ ಅಧಿಕೃತ ರಿಟೇಲರ್/ಸ್ಟಾಕಿಸ್ಟ್ ಮೂಲಕ ಖರೀದಿ ಮಾಡುವಂತೆ ಶಿಫಾರಸು ಮಾಡುತ್ತೇವೆ. ಅವರು ತರಬೇತಿ ಹೊಂದಿರುವ ಕುಶಲ ಗುತ್ತಿಗೆದಾರರೊಂದಿಗೆ ಸಂಪರ್ಕ ಸಾಧಿಸಲು ನಿಮಗೆ ಸಹಾಯ ಮಾಡುತ್ತಾರೆ. ಇಂಡಿಯಾ ಮಾರ್ಟ್‌ನಲ್ಲಿ ನಮ್ಮ ಉತ್ಪನ್ನ ಕ್ಯಾಟಲಾಗ್ ಅನ್ನು ನೀವು ನೋಡಬಹುದು.
ತರಬೇತಿ ಹೊಂದಿರುವ ಮತ್ತು ಬದ್ಧ ಸಿವಿಲ್ ಇಂಜಿನಿಯರುಗಳ ತಂಡವನ್ನು ಭಾರತದಾದ್ಯಂತ ಸಿಎಎಸ್‌ಸಿ ಬೆಂಬಲಕ್ಕೆ (ಗ್ರಾಹಕ ಅಪ್ಲಿಕೇಶನ್ ಬೆಂಬಲ ಕೋಶ) ಬಿರ್ಲಾ ವೈಟ್‌ ಹೊಂದಿದೆ. ಈ ಸಿವಿಲ್ ಇಂಜಿನಿಯರುಗಳು ಆನ್‌ ಸೈಟ್ ತಾಂತ್ರಿಕ ಬೆಂಬಲವನ್ನು ಒದಗಿಸುತ್ತಾರೆ ಮತ್ತು ಆನ್‌ ಸೈಟ್ ಸ್ಯಾಂಪ್ಲಿಂಗ್ ಒದಗಿಸುತ್ತಾರೆ. ವಿಶೇಷ ತರಬೇತಿ ಮತ್ತು ಆಧುನಿಕ ಪರಿಕರಗಳನ್ನು ಬಳಸಿ ಮೇಲ್ಮೈ ಫಿನಿಶಿಂಗ್‌ ಅಪ್ಲಿಕೇಟರ್‌ಗಳಿಗೆ ತರಬೇತಿ ನೀಡುತ್ತಾರೆ. ಅವರಿಗೆ ಇದು ಪರಿಣಿತಿ ಒದಗಿಸಲು ಮತ್ತು ವಿಶೇಷ ಬಿರ್ಲಾ ವೈಟ್ ಅಪ್ಲಿಕೇಟರ್‌ಗಳಾಗಲು ನೆರವಾಗುತ್ತದೆ.
ಲಭ್ಯ ಪ್ಯಾಕ್ ಸೈಜ್‌ಗಳು