ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ
ಯುವಕರಿಗೆ ಅವಕಾಶ ಒದಗಿಸುವುದ ಪ್ರಗತಿಗೆ ಪ್ರಮುಖವಾಗಿದೆ. ಈ ಪ್ರಗತಿಗೆ ಪೂರಕವಾಗಿರಲು ಮತ್ತು ಸಮಾಜಕ್ಕೆ ಕೊಡುಗೆ ನೀಡಲು, ಕೆಲವು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಉಪಕ್ರಮಗಳನ್ನು ನಾವು ಪರಿಚಯಿಸುತ್ತಿದ್ದೇವೆ. ಇವುಗಳ ಬಗ್ಗೆ ಇನ್ನಷ್ಟು ತಿಳಿಯಲು ಕೆಳಕ್ಕೆ ಸ್ಕ್ರೋಲ್ ಮಾಡಿ!

Loading

ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ
ಯುವಕರಿಗೆ ಅವಕಾಶ ಒದಗಿಸುವುದ ಪ್ರಗತಿಗೆ ಪ್ರಮುಖವಾಗಿದೆ. ಈ ಪ್ರಗತಿಗೆ ಪೂರಕವಾಗಿರಲು ಮತ್ತು ಸಮಾಜಕ್ಕೆ ಕೊಡುಗೆ ನೀಡಲು, ಕೆಲವು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಉಪಕ್ರಮಗಳನ್ನು ನಾವು ಪರಿಚಯಿಸುತ್ತಿದ್ದೇವೆ. ಇವುಗಳ ಬಗ್ಗೆ ಇನ್ನಷ್ಟು ತಿಳಿಯಲು ಕೆಳಕ್ಕೆ ಸ್ಕ್ರೋಲ್ ಮಾಡಿ!
ಮುನ್ನೋಟ
ವಿಶ್ವದಲ್ಲಿ ಪ್ರಮುಖ 10 ವೈಟ್ ಸಿಮೆಂಟ್ ಕಂಪನಿಗಳ ಪೈಕಿ ಬಿರ್ಲಾ ವೈಟ್ ಪ್ರಮುಖ ಸ್ಥಾನದಲ್ಲಿದೆ. ಹಲವು ವರ್ಷಗಳಿಂದಲೂ, ಹಲವು ಮೌಲ್ಯವರ್ಧಿತ ಉತ್ಪನ್ನಗಳನ್ನು ನಾವು ಪರಿಚಯಿಸಿದ್ದೇವೆ ಮತ್ತು ಪ್ರೀಮಿಯಂ ವೈಟ್ ಸಿಮೆಂಟ್ ಕಂಪನಿಗಳ ಪೈಕಿ ನಮ್ಮ ಸ್ಥಾನವನ್ನು ಕಾಯ್ದುಕೊಂಡಿದ್ದೇವೆ.

ನಮ್ಮ ವಿಸ್ತರಣೆಯ ಪಯಣ ನಮಗೆ ಹಲವು ಮೆಚ್ಚುಗೆಯನ್ನು ಒದಗಿಸಿಕೊಟ್ಟಿದೆ. ಹೀಗಾಗಿ, ನಾವು ನಮ್ಮ ಸಿಎಸ್‌ಆರ್ ಪ್ರೋಗ್ರಾಮ್‌ಗಳನ್ನು ವಿಸ್ತರಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಲು ನಿರ್ಧರಿಸಿದ್ದೇವೆ. ನಾವು ಹಲವು ಪ್ರದೇಶಗಳಲ್ಲಿ ಗ್ರಾಮೀಣಾಭಿವೃದ್ಧಿ ಯೋಜನೆಗಳು ಮತ್ತು ಸೇವೆಗಳನ್ನು ಆರಂಭಿಸಿದ್ದೇವೆ. ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯ, ಮಹಿಳಾ ಸಬಲೀಕರಣ, ಸೂಕ್ಷ್ಮ ಹಣಕಾಸು, ಸುಸ್ಥಿರ ಜೀವನಾವಶ್ಯಕತೆ, ಜಾನುವಾರು ಮತ್ತು ಮೂಲಸೌಕರ್ಯ ಅಭಿವೃದ್ಧಿಯೂ ಇದರಲ್ಲಿ ಒಳಗೊಂಡಿದೆ.
ಧ್ಯೇಯ
"ನಾವು ಕಾರ್ಯನಿರ್ವಹಿಸುತ್ತಿರುವ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಸಕ್ರಿಯವಾಗಿ ಕೊಡುಗೆ ನೀಡುವುದಕ್ಕಾಗಿ. ಈ ಮೂಲಕ, ಸಮಾಜದ ಹಿಂದುಳಿದ ವಲಯದ ಜೀವನಮಟ್ಟವನ್ನು ಉತ್ತಮಗೊಳಿಸುವ ಮತ್ತು ಸುಸ್ಥಿರಗೊಳಿಸುವ ಹಾಗೂ ಈ ಮೂಲಕ ದೇಶದ ಮಾನವ ಸೂಚ್ಯಂಕವನ್ನು ಉನ್ನತೀಕರಿಸುವ ಆಕಾಂಕ್ಷೆಯನ್ನು ನಾವು ಹೊಂದಿದ್ದೇವೆ."
- ಶ್ರೀ ರಾಜಶ್ರೀ ಬಿರ್ಲಾ, ಮುಖ್ಯಸ್ಥರು - ಆದಿತ್ಯ ಬಿರ್ಲಾ ಸೆಂಟರ್ ಸಮುದಾಯ ಉಪಕ್ರಮಗಳು ಮತ್ತು ಗ್ರಾಮೀಣಾಭಿವೃದ್ಧಿ
ಪ್ರಮುಖ ಕೇಂದ್ರೀಕೃತ ಗುರಿ
Health care

ಆರೋಗ್ಯ ಸೇವೆ

ಶಿಕ್ಷಣ

ಶಿಕ್ಷಣ

ಸುಸ್ಥಿರ ಜೀವನಮಟ್ಟ

ಸುಸ್ಥಿರ ಜೀವನಮಟ್ಟ

ಮೂಲಸೌಕರ್ಯ ಅಭಿವೃದ್ಧಿ

ಮೂಲಸೌಕರ್ಯ ಅಭಿವೃದ್ಧಿ

ಸಮಾಜ ಕಲ್ಯಾಣ

ಸಮಾಜ ಕಲ್ಯಾಣ

Health care

ಆರೋಗ್ಯ ಸೇವೆ

ಯಾವುದೇ ದೇಶದ ಎಚ್‌ಡಿಐ (ಮಾನವ ಅಭಿವೃದ್ಧಿ ಸೂಚ್ಯಂಕ) ಪ್ರಗತಿಯ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶಗಳಲ್ಲಿ ಆರೋಗ್ಯ ಒಂದಾಗಿದೆ. ಈವರೆಗೆ, ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ. 68 ರಷ್ಟು ಜನರು ಗ್ರಾಮೀಣ ಭಾರತದಲ್ಲಿದ್ದಾರೆ. ಈ ಪೈಕಿ ಅರ್ಧದಷ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ಈ ವ್ಯಕ್ತಿಗಳು ಉತ್ತಮ ಮತ್ತು ಸುಲಭವಾಗಿ ಆರೋಗ್ಯ ಸೇವೆ ಸೌಲಭ್ಯವನ್ನು ಪಡೆಯಲು ಹೆಣಗಾಡುತ್ತಿದ್ದಾರೆ.

ಸಾಂಕ್ರಾಮಿಕ ರೋಗಗಳಿಂದ ಆರಂಭಿಸಿ ಸಾಂಕ್ರಾಮಿಕವಲ್ಲದ ರೋಗಗಳವರೆಗೂ ಈ ಸಮುದಾಯಗಳು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತವೆ. ಈ ಪೈಕಿ ಕೆಲವು ಮಲೇರಿಯಾ, ಡಯಾಬಿಟೀಸ್, ಫ್ಲೂ ಮತ್ತು ಇತರೆ ಕೂಡ ಸೇರಿವೆ. ಗರ್ಭಿಣಿಯರಲ್ಲಿ ಮಾನಸಿಕ ಅನಾರೋಗ್ಯವು ಗ್ರಾಮೀಣ ಭಾರತದಲ್ಲಿ ಕಂಡುಬರುವ ಇನ್ನೊಂದು ಅತ್ಯಂತ ಗಂಭೀರ ಸಮಸ್ಯೆಯಾಗಿದೆ. ಇದು ತಾಯಿ ಮರಣಕ್ಕೂ ಕಾರಣವಾಗುತ್ತದೆ.

ಈ ಪೈಕಿ ಬಹುತೇಕ ಸಮಸ್ಯೆಗಳು ಶಿಕ್ಷಣ ಮತ್ತು ಸಂಪನ್ಮೂಗಳ ಕೊರತೆಯಿಂದ ಉಂಟಾಗುತ್ತದೆ. ಹೀಗಾಗಿ, ಈ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ, ಗ್ರಾಮೀಣ ಸಮುದಾಯಕ್ಕಾಗಿ ನಾವು ಹಲವು ಆರೋಗ್ಯ ಸೇವೆಗಳನ್ನು ಆರಂಭಿಸಿದ್ದೇವೆ. ಇದರ ಜೊತೆಗೆ ನಾವು ಮಕ್ಕಳ ಮರಣ ಪ್ರಮಾಣ ಕಡಿಮೆ ಮಾಡುವುದು, ತಾಯಿ ಆರೋಗ್ಯ ಸುಧಾರಣೆ ಮತ್ತು ಮಲೇರಿಯಾ, ಡಯಾಬಿಟೀಸ್ ಎಚ್‌ಐವಿ/ಏಡ್ಸ್‌ನಂತಹ ರೋಗಗಳ ವಿರುದ್ಧ ಹೋರಾಟ ಮತ್ತು ಇತರೆಯಂತಹ ಸಮಕಾಲೀನ ಅಭಿವೃದ್ಧಿ ಗುರಿಗಳನ್ನು (ಡಬ್ಲ್ಯೂಎಚ್‌ಒ) ತಲುಪುವ ಉದ್ದೇಶವನ್ನು ಹೊಂದಿದ್ದೇವೆ.
Education

ಶಿಕ್ಷಣ

ಭಾರತದಲ್ಲಿ ಅತಿದೊಡ್ಡ ಯುವ ಸಮೂಹವಿದೆ. ನಮ್ಮ ದೇಶದ ಭವಿಷ್ಯವು ಯುವಕರ ಹೆಗಲ ಮೇಲಿದೆ. ಇದೇ ಕಾರಣಕ್ಕೆ ಅವರಿಗೆ ನಾವು ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಅಗತ್ಯವಿದೆ. ಭಾರತದ ಬಹುತೇಕ ಜನರು ಗ್ರಾಮೀಣ ಭಾಗದವರಾಗಿದ್ದು, ಇವರಿಗೆ ಶಿಕ್ಷಣ ಪಡೆಯುವುದೇ ಸವಾಲಾಗಿದೆ.

ನಮ್ಮ ಸಿಎಸ್‌ಆರ್‌ ಚಟುವಟಿಕೆಗಳ ಮೂಲಕ, ಭಾರತದಾದ್ಯಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಮತ್ತು ಸಬಲಗೊಳಿಸುವ ಪ್ರಯತ್ನ ನಡೆಸಿದ್ದೇವೆ. ನಾವು ಸಕ್ರಿಯವಾಗಿ ಸ್ಕಾಲರ್‌ಶಿಪ್‌ಗಳನ್ನು ಒದಗಿಸುತ್ತಿದ್ದೇವೆ, ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಮನ್ನಿಸುತ್ತಿದ್ದೇವೆ, ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಿದ್ದೇವೆ, ಚಟುವಟಿಕೆಗಳು ಮತ್ತು ಕಾರ್ಯಾಗಾರಗಳನ್ನು ನಡೆಸುತ್ತಿದ್ದೇವೆ. ವಿದ್ಯಾರ್ಥಿಗಳು ಯಾವುದೇ ರೀತಿಯ ಅಡ್ಡಿಯನ್ನು ಎದುರಿಸಿದರೂ ಅವರ ಶೈಕ್ಷಣಿಕ ಪರಿಣಿತಿಯನ್ನು ಸಾಧಿಸಲು ಅವರಿಗೆ ನಾವು ಪ್ರೋತ್ಸಾಹಿಸುತ್ತಿದ್ದೇವೆ.
Sustainable Livelihood

ಸುಸ್ಥಿರ ಜೀವನಮಟ್ಟ

ಉತ್ತಮ ಜೀವನ ನಡೆಸಲು ಜೀವನ ಮಟ್ಟ ಸುಸ್ಥಿರವಾಗಬೇಕು ಎಂಬುದರ ಪ್ರಾಮುಖ್ಯತೆಯನ್ನು ನಾವು ಅರಿತಿದ್ದೇವೆ. ನಮ್ಮ ಸಿಎಸ್‌ಆರ್‌ ಚಟುವಟಿಕೆಗಳ ಮೂಲಕ, ಜನರು ಹೊಂದಿರಬಹುದಾದ ವಿಭಿನ್ನ ಸಾಮರ್ಥ್ಯಗಳನ್ನು ಅಭಿವೃದ್ಧಿಗೊಳಿಸಲು ಮತ್ತು ಅದನ್ನು ಪ್ರೋತ್ಸಾಹಿಸಲು ಪ್ರಯತ್ನಿಸುತ್ತೇವೆ. ಈ ಮೂಲಕ ಸ್ವಾವಲಂಬನೆಯನ್ನು ಅವರು ಸಾಧಿಸಬಹುದಾಗಿದೆ.

ಮಹಿಳೆಯರ ಸ್ವಸಹಾಯ ಗುಂಪುಗಳು, ಕಂಪ್ಯೂಟರ್ ತರಬೇತಿ, ಬ್ಯೂಟಿ ಕೋರ್ಸ್‌ಗಳು, ಮೋಟಾರ್ ರಿವೈಂಡಿಂಗ್ ಪ್ರೋಗ್ರಾಮ್‌ಗಳು ಮತ್ತು ಟೇಲರಿಂಗ್ ಸೆಂಟರ್‌ಗಳು ಸೇರಿದಂತೆ ಹಲವು ಉಪಕ್ರಮಗಳ ಮೂಲಕ ಹಲವು ವ್ಯಕ್ತಿಗಳು ತಮ್ಮ ಗುರಿಗಳನ್ನು ಕಂಡುಕೊಳ್ಳುವುದು, ಸಾಧಿಸುವುದು ಮತ್ತು ಜೀವನಕ್ಕೆ ಅಗತ್ಯ ಸಂಪನ್ಮೂಲ ಗಳಿಕೆಗೆ ಅವಕಾಶ ಮಾಡಿಕೊಡುವ ಪ್ರಕ್ರಿಯೆಯಲ್ಲಿದ್ದೇವೆ.
Infrastructure Development

ಮೂಲಸೌಕರ್ಯ ಅಭಿವೃದ್ಧಿ

ಹಲವು ವಲಯಗಳಲ್ಲಿ ನಮ್ಮ ಘಟಕಗಳ ಬಳಿ ಸಿಎಸ್‌ಆರ್‌ ಉಪಕ್ರಮಗಳನ್ನು ನಾವು ಆರಂಭಿಸಿದ್ದೇವೆ. ಇದರಿಂದಾಗಿ ಉತ್ತಮ ಮತ್ತು ಹೆಚ್ಚು ಸುಸ್ಥಿರ ಮೂಲಸೌಕರ್ಯ ನಿರ್ಮಾಣಕ್ಕೆ ಕಾರಣವಾಗಿದೆ. ಇದರ ಜೊತೆಗೆ, ಈ ಸ್ಥಳಗಳಲ್ಲಿ ಜೀವನ ಮಟ್ಟವನ್ನು ಸುಧಾರಿಸಲು ಇದು ಸಹಾಯ ಮಾಡಿದೆ.

ಇದರ ಬಗ್ಗೆ ಕೆಲವು ಉದಾಹರಣೆಗಳನ್ನು ನೀಡುವುದಾದರೆ, ಖಾರಿಯಾ ಖಂಗರ್‌ನಲ್ಲಿ ರಸ್ತೆಗಳ ನಿರ್ಮಾಣ, ಧಾನಪ್ಪದಲ್ಲಿ ಸಮುದಾಯ ಕೇಂದ್ರದ ನವೀಕರಣ, ಮೆರಾಸಿಯಾದಲ್ಲಿ ಚರಂಡಿ ವ್ಯವಸ್ಥೆಯ ನಿರ್ಮಾಣ ಇತ್ಯಾದಿ. ನಮ್ಮ ಪ್ರಯತ್ನಗಳ ಮೂಲಕ, ಇನ್ನಷ್ಟು ಮೂಲಸೌಕರ್ಯ ಪ್ರಾಜೆಕ್ಟ್‌ಗಳನ್ನು ನಡೆಸುವ ಮತ್ತು ಇನ್ನಷ್ಟು ಜನರಿಗೆ ಸಹಾಯ ಮಾಡುವ ಉದ್ದೇಶವನ್ನು ಹೊಂದಿದ್ದೇವೆ.
Social Welfare

ಸಮಾಜ ಕಲ್ಯಾಣ

ಸಮಾಜ ನಮ್ಮ ಮೇಲೆ ವಿಶ್ವಾಸ ಇಟ್ಟಿರುವುದಕ್ಕೇ ಬಿರ್ಲಾ ವೈಟ್‌ ಇಂದು ಅತ್ಯಂತ ಜನಪ್ರಿಯ ಹೆಸರಾಗಿದೆ. ಹೀಗಾಗಿ, ಸಮಾಜಕ್ಕೆ ನಾವು ಒಂದಷ್ಟು ಕೊಡುಗೆ ನೀಡಿ ಜನರ ಜೀವನವನ್ನು ಸುಧಾರಿಸುವುದಕ್ಕೆ ಸಹಾಯ ಮಾಡುವ ಉದ್ದೇಶ ಹೊಂದಿದ್ದೇವೆ.

ನಮ್ಮ ಹಲವು ಕಲ್ಯಾಣ ಕಾರ್ಯಕ್ರಮಗಳ ಮೂಲಕ ನಾವು, ಆರೋಗ್ಯ ಸಮಸ್ಯೆಗಳು, ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಿದ್ದೇವೆ ಮತ್ತು ನಮ್ಮ ಸುತ್ತಲೂ ವಾಸಿಸುತ್ತಿರುವವರ ಒಟ್ಟಾರೆ ಜೀವನ ಮಟ್ಟ ಸುಧಾರಿಸುವುದರ ಮೇಲೆ ಗಮನ ಹರಿಸಿದ್ದೇವೆ. ನಾವು ಸಾಮಾಜಿಕ ಸಂಪರ್ಕ ಸಭೆಗಳನ್ನು ನಡೆಸಿ, ಅಗತ್ಯವಿದ್ದವರಿಗೆ ಅಗತ್ಯ ಸಾಮಗ್ರಿ ವಿತರಿಸಿದ್ದೇವೆ, ಆಧಾರ್ ಕಾರ್ಡ್ ಕ್ಯಾಂಪ್‌ಗಳನ್ನು ನಡೆಸಿದ್ದೇವೆ ಮತ್ತು ಸಸಿ ನೆಡುವ ಕಾರ್ಯಕ್ರಮಗಳನ್ನೂ ನಡೆಸಿದ್ದೇವೆ. ನಮ್ಮ ಪ್ರಯತ್ನಗಳ ಮೂಲಕ, ಸಮಾಜದ ಉನ್ನತೀಕರಣಕ್ಕೆ ನಾವು ಕೊಡುಗೆ ನೀಡುತ್ತಿದ್ದೇವೆ.
ವ್ಯಾಪಿಸಿದ ಭೌಗೋಳಿಕ ಪ್ರದೇಶ
ವ್ಯಾಪ್ತ ಪ್ರದೇಶ : ರಾಜಸ್ಥಾನ ರಾಜ್ಯದ ಜೋಧ್‌ಪುರ ಮತ್ತು ನಾಗೌರ್ ಜಿಲ್ಲೆಗಳ ಭೋಪಾಲ್‌ಗಢ ಮತ್ತು ಮೆರ್ತಾ ಬ್ಲಾಕ್‌ಗಳು
ವ್ಯಾಪಿಸಿದ ಭೌಗೋಳಿಕ ಪ್ರದೇಶ