ವೈಟ್ ಸಿಮೆಂಟ್‌

ನಿಮ್ಮ ಗೋಡೆಗಳಿಗೆ ಅತ್ಯಂತ ಬಿಳಿಯಾದ ಮೇಲ್ಮೈ ಫಿನಿಶ್ ನೀಡಲು ಬಯಸಿದ್ದೀರಾ? ಬಿರ್ಲಾ ವೈಟ್ ಸಿಮೆಂಟ್‌ ಸರಿಯಾದ ಆಯ್ಕೆ!

Loading

ವೈಟ್ ಸಿಮೆಂಟ್‌

ನಿಮ್ಮ ಗೋಡೆಗಳಿಗೆ ಅತ್ಯಂತ ಬಿಳಿಯಾದ ಮೇಲ್ಮೈ ಫಿನಿಶ್ ನೀಡಲು ಬಯಸಿದ್ದೀರಾ? ಬಿರ್ಲಾ ವೈಟ್ ಸಿಮೆಂಟ್‌ ಸರಿಯಾದ ಆಯ್ಕೆ!
ಅವಲೋಕನ
ಬಿರ್ಲಾ ವೈಟ್‌ ಸಿಮೆಂಟ್‌ ಪ್ರಾಥಮಿಕವಾಗಿ ವೈಟ್‌ ಪೋರ್ಟ್‌ಲ್ಯಾಂಡ್ ಸಿಮೆಂಟ್ ಆಗಿದ್ದು, ಇದನ್ನು ನಮ್ಮ ಯೂನಿಟ್‌ಗಳಲ್ಲಿ ಉತ್ಪಾದಿಸಲಾಗಿರುತ್ತದೆ. ಇದನ್ನು ಸುಧಾರಿತ ತಂತ್ರಜ್ಞಾನವನ್ನು ಮತ್ತು ಅತ್ಯಾಧುನಿಕ ಉತ್ಪಾದನೆ ಪ್ರಕ್ರಿಯೆಯನ್ನು ಬಳಸಿ ಉತ್ಪಾದಿಸಲಾಗಿರುತ್ತದೆ. ಇದು ಉತ್ತಮ ಫೈನ್‌ನೆಸ್‌ ಮತ್ತು ವೈಟ್‌ನೆಸ್ ಅನ್ನು ನೀಡುತ್ತದೆ. ಇದು ಅತ್ಯಂತ ರಿಫ್ರಾಕ್ಟಿವ್ ಇಂಡೆಕ್ಸ್‌ ಮತ್ತು ಅಧಿಕ ಒಪಾಸಿಟಿಯನ್ನು ಹೊಂದಿದೆ ಮತ್ತು ಪಿಗ್ಮೆಂಟ್‌ಗಳ ಜೊತೆಗೆ ಬ್ಲೆಂಡ್ ಮಾಡಿದಾಗಲೂ ನಿಮಗೆ ಸ್ಮೂತ್ ಫಿನಿಶ್ ನೀಡುತ್ತದೆ. ಇದು ನಿಮಗೆ ವಿವಿಧ ರೀತಿಯ ಬಣ್ಣಗಳು, ಟೆಕ್ಸಚರ್‌ಗಳು, ಶೇಪ್‌ಗಳು ಮತ್ತು ಗಾತ್ರಗಳೊಂದಿಗೆ ಆಟವಾಡುವ ಸ್ವಾತಂತ್ರ್ಯ ನೀಡುತ್ತದೆ ಮತ್ತು ಅಲಂಕಾರಿಕ ಪೇಂಟ್‌ಗಳು, ಪ್ಲಾಸ್ಟರ್‌ಗಳು, ಮೊಸಾಯಿಕ್ ಟೈಲ್‌ಗಳು, ಟೆರಾಜೋ ಫ್ಲೋರಿಂಗ್ ಮತ್ತು ವೈಟ್ ಸಿಮೆಂಟ್ ಆಧರಿತ ವ್ಯಾಲ್ಯೂ ಆಡೆಡ್‌ ಪ್ರಾಡಕ್ಟ್‌ಗಳ ವಿಚಾರದಲ್ಲಿ ಹೆಚ್ಚು ಆದ್ಯತೆಯದ್ದಾಗಿದೆ.
ಗ್ಯಾಲರಿ
ಉತ್ಪನ್ನ ಮುಖ್ಯಾಂಶಗಳು
ನಯವಾದ ಫಿನಿಷಿಂಗ್
ಅತ್ಯುತ್ತಮ ತಂತ್ರಜ್ಞಾನ
ಉನ್ನತ ಗುಣಮಟ್ಟ
ವಿಶ್ವದರ್ಜೆಯ ಘಟಕ
ಲಕ್ಷಣಗಳು
  • ಹಂಟರ್‌ ವೈಟ್‌ನೆಸ್ ಸ್ಕೇಲ್‌ನಲ್ಲಿ +89%
  • ಅಧಿಕ ರಿಫ್ರಾಕ್ಟಿವ್ ಇಂಡೆಕ್ಸ್‌
  • 60 MPa ಯಷ್ಟು ಅಧಿಕ ಕಂಪ್ರೆಸಿವ್ ಸಾಮರ್ಥ್ಯ
  • 370-400 ಬ್ಲೇನೆ ಉನ್ನತ ಫೈನ್‌ನೆಸ್‌
  • ಅಧಿಕ ಒಪಾಸಿಟಿ
ಲಾಭಗಳು
  • ಬಣ್ಣದ ನಿಜವಾದ ಟೋನ್ ಅನ್ನು ಪ್ರದರ್ಶಿಸುತ್ತದೆ
  • ಕಡಿಮೆ ಬಳಕೆ & ಪಿಗ್ಮೆಂಟ್‌ನ ಉತ್ತಮ ವಿಚ್ಛೇದನ
  • ಉತ್ತಮ ಕವರೇಜ್‌
  • ಉತ್ತಮ ಲಶ್ಚರ್ ಅನ್ನು ಒದಗಿಸುತ್ತದೆ
  • ವಿನ್ಯಾಸಗಳನ್ನು ರಚಿಸಲು ಸ್ವಾತಂತ್ರ್ಯ ಒದಗಿಸುತ್ತದೆ
ಅಪ್ಲಿಕೇಶನ್‌ಗಳು
  • ಪ್ಲೋರ್
  • ವಾಲ್‌ಗಳು
  • ಇತರೆ

The technology used to manufacture this product is ‘Patent Pending’.

ಅಪ್ಲಿಕೇಶನ್

ಫ್ಲೋರ್‌ಗಳು

ಡಿಸೈನರ್ ಫ್ಲೋರಿಂಗ್
ಡಿಸೈನರ್ ಫ್ಲೋರಿಂಗ್ ಫ್ಲೋರ್‌ಗಳು
ಬಿರ್ಲಾ ವೈಟ್‌ ಸಿಮೆಂಟ್‌ ಎಂಬುದು ಒಂದು ಉತ್ಪನ್ನವಾಗಿದ್ದು, ಇದು ನಿಮ್ಮ ಫ್ಲೋರ್‌ಗಳನ್ನು ಕಲಾತ್ಮಕವಾಗಿಸಬಲ್ಲದು ಮತ್ತು ಡಿಸೈನರ್ ಫ್ಲೋರಿಂಗ್ ಅನ್ನು ನಿಮಗೆ ಒದಗಿಸುತ್ತದೆ. ನೀವು ಮಾರ್ಬಲ್ ಪೌಡರ್‌, ಕೋರ್ಸ್‌ ಅಗ್ರಗೇಟರ್‌ಗಳು ಮತ್ತು ಬಿರ್ಲಾ ವೈಟ್ ಸಿಮೆಂಟ್‌ ಮಿಶ್ರಣವನ್ನು ಹೊಂದಿದರೆ, ಯೂನಿಕ್ ಪ್ಯಾಟರ್ನ್‌ನಿಂದ ನಿಜವಾದ ಪೇಂಟಿಂಗ್‌ವರೆಗೆ ಏನನ್ನಾದರೂ ನಿರ್ಮಿಸಬಹುದು. ಕಲ್ಲು ಅಥವಾ ಪ್ಲಾಸ್ಟಿಕ್, ಮಾರ್ಟರ್ ಮಿಕ್ಷ್ಚರುಗಳು, ಕಲರ್‌ಫುಲ್‌ ಪಿಗ್ಮೆಂಟ್‌ಗಳಿಂದ ಮಾಡಿದ ಗ್ಲಾಸ್, ಮೆಟಲ್‌, ಡಿವೈಡಿಂಗ್ ಸ್ಟ್ರಿಪ್‌ಗಳನ್ನು ಬಳಸಬಹುದು ಮತ್ತು ಮಿಕ್ಸ್ ಮಾಡಬಹುದು. ನೀವು ಇದೆಲ್ಲವನ್ನೂ ಹಾಕಿದ ನಂತರ, ನೀವು ಮಿರರ್‌ ಪಾಲಿಶ್ ಮಾಡಿ ನಿಮ್ಮ ಫ್ಲೋರ್‌ಗೆ ಸೂಕ್ತವಾದ ಗ್ಲಾಸ್ ಫಿನಿಶ್ ಕೊಡಬಹುದು. ಇದು ನಿಮ್ಮ ಫ್ಲೋರ್‌ನ ಸೌಂದರ್ಯ ಹೆಚ್ಚಿಸುವುದಷ್ಟೇ ಅಲ್ಲ, ನಿಮ್ಮ ಮನೆಯ ವಾತಾವರಣವನ್ನೂ ಉತ್ತಮವಾಗಿಸುತ್ತದೆ.
ಮೊಸೈಯಿಕ್ ಟೈಲ್ಸ್ ಫ್ಲೋರ್‌ಗಳು
ಮೊಸೈಯಿಕ್ ಟೈಲ್ಸ್ ನಿಮ್ಮ ನೆಲಕ್ಕೆ ಒಂದು ಶ್ರೀಮಂತ ವಸ್ತ್ರವಿನ್ಯಾಸದಂತಹ ರಚನೆಯನ್ನು ಒದಗಿಸುತ್ತದೆ. ಸಿಮೆಂಟಿನಲ್ಲಿ ಹುದುಗಿಸಲಾದ ಬಣ್ಣದಿಂದ ಮಾಡಿರುವ ಚಿಕ್ಕ ಚಿಕ್ಕ ಎನಾಮೆಲ್ ಗಾಜಿನ ಚೂರುಗಳು ಅಥವಾ ಮಾರ್ಬೆಲ್ ಚೂರುಗಳು‌ ನಿಮ್ಮ ನೆಲಕ್ಕೆ ಆ ಒಂದು ಸಡಗರದಂತಹ ಸೌಂದರ್ಯವನ್ನು ನೀಡುತ್ತವೆ. ಇವುಗಳನ್ನು ಒಂದು ನಿಯಂತ್ರಿತ ಹೈಡ್ರಾಲಿಕ್ ಪರಿಸ್ಥಿತಿಯಲ್ಲಿ ಅಚ್ಚಿನಲ್ಲಿ ತಯಾರಿಸಲಾಗಿರುತ್ತವೆ. ಇದರಿಂದಾಗಿ ಇವುಗಳು ದೀರ್ಘ ಬಾಳಿಕೆ ಬರುತ್ತವೆ, ಗಾಢವಾಗಿರುತ್ತವೆ ಮತ್ತು ಹಾರ್ಡ್‌ ಟು ವಿಯರ್‌ ಮೇಲ್ಮೈಯಿಂದಾಗಿ ನೀರು ಕೆಳಕ್ಕೆ ಇಳಿಯುವುದಿಲ್ಲ. ಮೊಸಾಯಿಕ್ ಟೈಲ್ಸ್‌ಗಳನ್ನು ಮಾಡಲು ಬಿರ್ಲಾ ವೈಟ್ ಸಿಮೆಂಟ್ ಒಂದು ಸೂಕ್ತವಾದ ಬೇಸ್‌ ಆಗಿರುತ್ತದೆ. ಏಕೆಂದರೆ, ಇದು ಬಣ್ಣಗಳನ್ನು ಪ್ರಕಾಶಮಾನವಾಗಿಸುತ್ತದೆ ಮತ್ತು ಅಡಗಿರುವ ಶಕ್ತಿಯನ್ನು ಹೊರಹಾಕುತ್ತದೆ. ಈ ಟೈಲ್ಸ್ ಗಳು ಮನೆ, ಹೋಟೆಲ್, ಈಜುಕೊಳ ಹಾಗೂ ಯಾವುದೇ ಇತರೆ ಶೈಲಿ ಇರುವ ಸ್ಥಳಗಳಿಗೆ ಸೂಕ್ತವಾಗಿರುತ್ತವೆ.
ಮೊಸೈಯಿಕ್ ಟೈಲ್ಸ್
ಪೇವರ್ ಟೈಲ್ಸ್
ಪೇವರ್ ಟೈಲ್ಸ್ ಫ್ಲೋರ್‌ಗಳು
ಹೊರಭಾಗದ ಫ್ಲೋರ್‌ಗಳೂ ಕೂಡ ಒಳಭಾಗದ ಫ್ಲೋರ್‌ಗಳಷ್ಟೇ ಉತ್ತಮ ವಾತಾವರಣ ನಿರ್ಮಾಣ ಮಾಡುವಲ್ಲಿ ಪಾತ್ರ ವಹಿಸುತ್ತವೆ. ಈ ಸಮಯದಲ್ಲಿ ಪೇವರ್ ಟೈಲ್ಸ್ ಪ್ರಮುಖ ಪಾತ್ರ ವಹಿಸುತ್ತವೆ. ಇವು ಗಟ್ಟಿಮುಟ್ಟಾಗಿವೆ ಮತ್ತು ಬಾಳಿಕೆ ಬರುವುದಷ್ಟೇ ಅಲ್ಲ, ಅವು ಹೆಚ್ಚು ಸವಕಳಿ ಉಂಟಾಗುವ ಪ್ರದೇಶಕ್ಕೆ ಸೂಕ್ತವೂ ಆಗಿವೆ. ಬಿರ್ಲಾ ವೈಟ್ ಸಿಮೆಂಟ್‌ ಇಂತಹ ಅಪ್ಲಿಕೇಶನ್‌ಗಳಿಗೆ ಸೂಕ್ತವಾಗಿದ್ದು, ಇದು ವಿವಿಧ ರೀತಿಯ ಬಣ್ಣಗಳನ್ನು ಮತ್ತು ಟೈಲ್ಸ್‌ ವಿನ್ಯಾಸವನ್ನು ಒದಗಿಸುತ್ತವೆ. ಈ ಟೈಲ್‌ಗಳ ಅತ್ಯಂತ ಗಮನಾರ್ಹ ಅನುಕೂಲವೆಂದರೆ, ಕಾಂಕ್ರೀಟ್ ಫ್ಲೋರ್‌ಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ವೆಚ್ಚದಲ್ಲಿ ರಿಪೇರಿ ಅಥವಾ ಬದಲಾವಣೆ ಮಾಡಬಹುದಾಗಿದೆ.
ಮಾರ್ಬಲ್ ಫ್ಲೋರಿಂಗ್ ಫ್ಲೋರ್‌ಗಳು
ಮಾರ್ಬಲ್ ಸ್ಟೋನ್‌ ನೈಸರ್ಗಿಕವಾಗಿ ಬಿಳಿ ಮತ್ತು ಸುಂದರವಾಗಿವೆ. ಇದು ಪಾರದರ್ಶಕ ಮತ್ತು ಕುಳಿಯನ್ನೂ ಹೊಂದಿರುತ್ತವೆ. ಗ್ರೇ ಸಿಮೆಂಟ್ ಬೇಸ್‌ನಲ್ಲಿ ಮಾರ್ಬಲ್‌ ಹಾಕಿದರೆ, ಇದು ಡಲ್ ಆಗಿ ಮತ್ತು ಕಂದು ಬಣ್ಣದಲ್ಲಿ ಕಾಣಿಸುತ್ತದೆ. ಹೀಗಾಗಿ ಇದರ ಸೌಂದರ್ಯ ಕಳೆದುಹೋಗುತ್ತದೆ. ಬಿರ್ಲಾ ವೈಟ್ ಸಿಮೆಂಟ್‌ ಸ್ಲರಿಯ ತೆಳ್ಳನೆಯ ಲೇಯರ್‌ ಮೇಲೆ ಮಾರ್ಬಲ್‌ ಅನ್ನು ಹಾಕುವುದು ಹೆಚ್ಚು ಸೂಕ್ತ. ವೈಟ್‌ ಸಪರೇಟರ್‌ ಆಗಿ ಬಿರ್ಲಾ ವೈಟ್‌ ಕೆಲಸ ಮಾಡುತ್ತದೆ ಮತ್ತು 100% ಬೆಳಕನ್ನು ಪ್ರತಿಫಲಿಸುತ್ತದೆ. ನಿಮ್ಮ ಮಾರ್ಬಲ್‌ನ ಲುಕ್‌ ಅನ್ನು ಗ್ರೇ ಸಿಮೆಂಟ್ ಹಾಲು ಮಾಡುವುದನ್ನು ತಡೆಯುತ್ತದೆ.
ಮಾರ್ಬಲ್ ಫ್ಲೋರಿಂಗ್

ಗೋಡೆಗಳು

ಸ್ಟೋನ್‌ಕ್ರೀಟ್
ಸ್ಟೋನ್‌ಕ್ರೀಟ್ ಗೋಡೆಗಳು
ನಿಮ್ಮ ಮನೆಯ ಹೊರ ಗೋಡೆಗಳಿಗೆ ಸುಂದರ ಸ್ಟೋನ್‌ಕ್ರೀಟ್‌ ಫಿನಿಶ್ ಅನ್ನು ಬಿರ್ಲಾ ವೈಟ್ ಸಿಮೆಂಟ್‌ನಿಂದ ನೀಡಿ. ಇದು ಹವಾಮಾನ ಪ್ರತಿರೋಧಕವಷ್ಟೇ ಅಲ್ಲ, ದೀರ್ಘ ಬಾಳಿಕೆ ಮತ್ತು ಕಡಿಮೆ ಮೇಂಟೆನೆನ್ಸ್‌ ಹೊಂದಿದೆ. ಆದರೆ, ಇದು ವಿಭಿನ್ನ ಬಣ್ಣಗಳು ಮತ್ತು ಟೆಕ್ಷ್ಚರ್‌ಗಳನ್ನು ಒದಗಿಸುತ್ತದೆ. ಸಮಾನ ಪ್ರಮಾಣದ ಬಿರ್ಲಾ ವೈಟ್ ಸಿಮೆಂಟ್‌ ಮತ್ತು ಡೊಲೊಮೈಟ್‌ ಪೌಡರ್‌/ ಕ್ವಾರ್ಟ್ಸ್‌ ಸ್ಯಾಂಡ್‌ ಮಿಶ್ರಣ ಮಾಡುವ ಮೂಲಕ ಸ್ಟೋನ್‌ಕ್ರೀಟ್ ಫಿನಿಶ್ ಅನ್ನು ಮಾಡಬಹುದು. ಇದಕ್ಕಾಗಿ, ನಿಮ್ಮ ನಿರೀಕ್ಷಿತ ಶೇಡ್ ಅನ್ನು ಪಡೆಯಲು ನೀವು ಪಿಗ್ಮೆಂಟ್‌ಗಳನ್ನು ಸೇರಿಸಬಹುದು. ಅಪ್ಲೈ ಮಾಡಿದ ನಂತರ, ಸರ್ಫೇಸ್ ಅನ್ನು ಲೆವೆಲ್ ಮಾಡಿರಬೇಕು ಮತ್ತು ಎರಡು ದಿನಗಳವರೆಗೆ ಕ್ಯೂರ್ ಮಾಡಬೇಕು. ಅಂತಿಮವಾಗಿ, ನಿಮ್ಮ ಸ್ಟೋನ್‌ಕ್ರೀಟ್ ಫಿನಿಶ್ ಅನ್ನು ಕಂಪ್ಲೀಟ್ ಮಾಡಲು ಸುಂದರ ಅಶ್ಲರ್ ಸ್ಟೋನ್ ಫಿನಿಶ್‌ ಒದಗಿಸಲು ಚಿಸೆಲ್‌ ಮಾಡಬೇಕು.
ಗ್ರಿಟ್ ವಾಶ್ ಗೋಡೆಗಳು
ನಿಮಗೆ ಗಟ್ಟಿಮುಟ್ಟಾದ ಫಿನಿಶ್ ಬೇಕು ಎಂದಾದರೆ, ಗ್ರಿಟ್‌ ವಾಶ್ ನಿಮಗೆ ಸೂಕ್ತವಾದ ಆಯ್ಕೆಯಾಗಿದೆ. ಎಕ್ಸ್‌ಪೋಸ್ಡ್ ಅಗ್ರಗೇಟ್ ಪ್ಲಾಸ್ಟರ್ ಎಂದು ಕರೆಯಲಾದ ಈ ಅಲಂಕಾರಿಕ ಫಿನಿಶ್‌ ವಿಪರೀತ ವಾತಾವರಣವನ್ನು ತಾಳಿಕೊಳ್ಳುತ್ತದೆ ಮತ್ತು ಇದು ನಿಮಗೆ ಬಾಳಿಕೆ ಬರುತ್ತದೆ. ಬಿರ್ಲಾ ವೈಟ್ ಸಿಮೆಂಟ್‌ನ ಮಾರ್ಟರ್‌, ಡೊಲೊಮೈಟ್ ಪೌಡರ್‌ ಮತ್ತು 2.5:1:6 ಅನುಪಾತದಲ್ಲಿ ಚಿಪ್ಸ್‌ ಹಾಕಿದರೆ ಗ್ರಿಟ್ ವಾಶ್‌ಗೆ ಸೂಕ್ತವಾಗಿರುತ್ತದೆ. ಅಪ್ಲೈ ಮಾಡುವುದಕ್ಕೂ ಮೊದಲು, ಮೇಲ್ಮೈ ಸಮತಟ್ಟಾಗಿರಬೇಕು. ಆರಂಭದಲ್ಲಿ 1-2 ಗಂಟೆಗಳವರೆಗೆ ಸೆಟ್ ಮಾಡಿದ ನಂತರ, ಗ್ರಿಟ್ ವಾಶ್‌ ಸರ್ಫೇಸ್ ಅನ್ನು ನಿಧಾನವಾಗಿ ನೈಲಾನ್ ಬ್ರಶ್‌ ಮತ್ತು ನೀರಿನಿಂದ ಸ್ಕ್ರಬ್‌ ಮಾಡಿ ಚಿಪ್ಸ್‌ನ ಮೇಲೆ ಸಿಮೆಂಟನ್ನು ತೆಗದುಹಾಕಿ ಅಗ್ರಗೇಟ್‌ ಅನ್ನು ಕಾಣಿಸುವಂತೆ ಮಾಡಬಹುದು.
ಗ್ರಿಟ್ ವಾಶ್
ಟೈರೋಲಿಯನ್
ಟೈರೋಲಿಯನ್ ಗೋಡೆಗಳು
ಟೈರೋಲಿಯನ್ ಎಂಬುದು ಅಲಂಕಾರಿಕ ಫಿನಿಶ್ ಆಗಿದ್ದು, ಇದು ಹೊರ ಮತ್ತು ಒಳ ಗೋಡೆಗಳಿಗೆ ಸೂಕ್ತವಾಗಿದೆ. ವಿವಿಧ ಬಣ್ಣಗಳಲ್ಲಿ ಲಭ್ಯವಿರುವ ಇದರ ಟೆಕ್ಷರ್‌ ಸ್ಯಾಂಡ್ ಫೇಸ್‌ ಫಿನಿಶ್‌ ಗೋಡೆಗೆ ಆಕರ್ಷಕ ಲುಕ್ ನೀಡುತ್ತದೆ. ಹಾಗೆಯೇ, ಇದು ಎಕನಾಮಿಕಲ್‌, ದೀರ್ಘ ಬಾಳಿಕೆ ಬರುವ ಮತ್ತು ಮೇಂಟೆನೆನ್ಸ್‌ ಫ್ರೀ ಪ್ಲಾಸ್ಟರ್ ಆಗಿದೆ. ಟೈರೋಲಿಯನ್ ಪ್ಲಾಸ್ಟರಿಂಗ್‌ಗೆ, ಒಂದು ಭಾಗ ಮಾರ್ಬಲ್ ಪೌಡರ್‌ ಮತ್ತು ಒಂದು ಭಾಗ ಕೋರ್ಸ್ ವೈಟ್ ಸ್ಯಾಂಡ್ ಅಥವಾ ಮಾರ್ಬಲ್ ಚಿಪ್‌ಗಳ ಫೈನ್‌ ಗ್ರೇನ್ಸ್ ಜೊತೆಗೆ ಬಿರ್ಲಾ ವೈಟ್ ಸಿಮೆಂಟ್‌ನ ಮೂರು ಭಾಗವನ್ನು ಮಿಕ್ಸ್ ಮಾಡಿ. ಅಗತ್ಯ ಶೇಡ್ ಪಡೆಯಲು ಕಲರ್ ಸೇರಿಸಿ ಮತ್ತು ಎರಡು ಕೋಟ್ ಹಾಕಿ. ಸರ್ಫೇಸ್‌ ಸಂಪೂರ್ಣ ಡ್ರೈ ಆದಾಗ, ಸಿಲಿಕಾನ್ ಕೋಟ್ ಅನ್ನು ಅಪ್ಲೈ ಮಾಡಬೇಕು. ಇದರಿಂದ ಧೂಳಿನಿಂದ ಮುಕ್ತವಾಗಿರುತ್ತದೆ.
ಸಿಮೆಂಟ್‌ ವಾಶ್ ಗೋಡೆಗಳು
ಬಿರ್ಲಾ ವೈಟ್‌ ಸಿಮೆಂಟ್‌ ವಾಶ್‌ ಬಾಳಿಕೆ ಬರುವ, ಆಕರ್ಷಕ ಮ್ಯಾಟ್‌ ಫಿನಿಶ್ ಅನ್ನು ಗೋಡೆಗಳಿಗೆ ನೀಡುತ್ತದೆ. ಇದು ಅಲಂಕಾರಿಕ ಪೇಂಟ್‌ಗಳಿಗೆ ಪ್ರೈಮರ್ ಕೋಟ್‌ ಆಗಿ, ಸಣ್ಣ ಕ್ರ್ಯಾಕ್‌ಗಳು ಮತ್ತು ಕ್ರೆವೈಸ್‌ಗಳನ್ನು ಭರ್ತಿ ಮಾಡಲು ಬಳಕೆಯಾಗುತ್ತದೆ. ಹೊರ ಮತ್ತು ಒಳ ಗೋಡೆಗಳಿಗೆ ಸೂಕ್ತವಾಗಿರವು ಇದನ್ನು ಬ್ರಶ್ ಅಥವಾ ಸ್ಪ್ರೇ ಬಳಸಿ ಅಪ್ಲೈ ಮಾಡಬಹುದು. ಇದನ್ನು ಅಪ್ಲೈ ಮಾಡುವುದರಲ್ಲಿನ ಸರಳತೆಯಿಂದಾಗಿ, ಪೇಂಟರುಗಳು ಮತ್ತು ಮಸಾನ್‌ಗಳ ಮಧ್ಯೆ ಹೆಚ್ಚಿನ ಆದ್ಯತೆಯನ್ನಾಗಿಸುತ್ತದೆ. ಬಿರ್ಲಾ ವೈಟ್ ಸಿಮೆಂಟ್‌ ವಾಶ್ ಇತರ ಆಯ್ಕೆಗಳಿಗೆ ಹೋಲಿಸಿದರೆ ಆರ್ಥಿಕವಾಗಿ ಅನುಕೂಲಕರವಾಗಿದೆ. ಹೀಗಾಗಿ ಇದು ವಾಣಿಜ್ಯ ಸಂಕೀರ್ಣಗಳು, ಸರ್ಕಾರಿ ಕಚೇರಿಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಬಜೆಟ್ ಪ್ರಮುಖವಾಗಿರುವ ಇತರ ಸ್ಥಳಗಳಿಗೆ ಸೂಕ್ತವಾಗಿದೆ.
ಸಿಮೆಂಟ್‌ ವಾಶ್
ಸಿಮೆಂಟ್‌ ಪೇಂಟ್
ಸಿಮೆಂಟ್‌ ಪೇಂಟ್ ಗೋಡೆಗಳು
ಸಿಮೆಂಟ್‌ ಪೇಂಟ್‌ ಹೊರ ಗೋಡೆಗಳನ್ನು ಸುಂದರಗೊಳಿಸುತ್ತದೆ ಮತ್ತು ಗಡುಸಾದ ವಾತಾವರಣದಿಂದ ರಕ್ಷಣೆ ಒದಗಿಸುತ್ತದೆ. ಇದು ಬಾಳಿಕೆ ಬರುತ್ತದೆ, ಆರ್ಥಿಕವಾಗಿ ಕೈಗೆಟಕುವಂತಿದೆ ಮತ್ತು ಇದನ್ನು ವಿವಿಧ ಪಿಗ್ಮೆಂಟ್‌ಗಳಲ್ಲಿ ವಿವಿಧ ಶೇಡ್‌ಗಳಿಗೆ ಬಳಸಬಹುದಾಗಿದೆ. ಸಿಮೆಂಟ್‌ ಪೇಂಟ್ ಮಾಡಲು ಬಿರ್ಲಾ ವೈಟ್‌ ಉತ್ತಮ ಆಯ್ಕೆಯಾಗಿದೆ. ಯಾಕೆಂದರೆ ಇದು ಪಿಗ್ಮೆಂಟ್‌ನ ನಿಜವಾದ ಬಣ್ಣವನ್ನು ಅನಾವರಣಗೊಳಿಸುತ್ತದೆ. ಜೊತೆಗೆ, ಇದು ಕಡಿಮೆ ಅಲ್ಕಾಲೈನ್‌ ಕಂಟೆಂಟ್‌ ಅನ್ನೂ ಹೊಂದಿದೆ. ಈ ಮೂಲಕ ಇದು ಪೇಂಟ್‌ ಕಳೆಗುಂದುವುದರಿಂದ ತಡೆಯುತ್ತದೆ. ಪರಿಪೂರ್ಣವಾದ ಕಾಂಪೊಸಿಶನ್‌ಗಾಗಿ, ಎರಡು ಪಾರ್ಟ್‌ ಸಿಮೆಂಟ್‌ ಪೇಂಟ್‌ಗೆ ಒಂದು ಭಾಗ ನೀರು ಸೇರಿಸಿ ಮತ್ತು ಸ್ಥಿರವಾದ ಪೇಸ್ಟ್ ಅನ್ನು ಪಡೆಯಲು ಚೆನ್ನಾಗಿ ತಿರುಗಿಸಿ. ಇದಕ್ಕೆ ಒಂದು ಭಾಗ ನೀರನ್ನು ಸೇರಿಸಿ, ತಿರುಗಿಸಿ ಮತ್ತು ಸಿದ್ಧಪಡಿಸಿದ ಸರ್ಫೇಸ್‌ಗೆ ಅದನ್ನು ಅಪ್ಲೈ ಮಾಡಿ. ಸರಿಯಾದ ಫಿನಿಶ್ ಅನ್ನು ಪಡೆಯಲು 2-3 ದಿನಗಳವರೆಗೆ ನೀರಿನಿಂದ ಸರ್ಫೇಸ್ ಅನ್ನು ಕ್ಯೂರ್ ಮಾಡಿ.

ಇತರೆ

ಸಿಮೆಂಟ್ ಅನ್ನು ನಿರ್ಮಾಣ ಮತ್ತು ರಿಪೇರಿ ಕೆಲಸಕ್ಕೆ ಸೂಕ್ತವಾಗಿರುವಂತೆ ತೆಗೆದುಕೊಳ್ಳಲಾಗಿದೆ. ಆದರೆ ಬಿರ್ಲಾ ವೈಟ್‌ ಹೊಸ ಬೆಂಚ್‌ಮಾರ್ಕ್‌ ಅನ್ನು ನಿಗದಿಸಿದೆ. ಇದು ತನ್ನ ಬಾಳಿಕೆಯನ್ನು ಸಾಮಾನ್ಯಕ್ಕಿಂತ ಹೆಚ್ಚು ವಿಸ್ತರಿಸಿದೆ ಮತ್ತು ಇದು ಈಗ ವಿವಿಧ ಕ್ರಿಯಾಶೀಲ ಆಯ್ಕೆಗಳನ್ನು ಒದಗಿಸುತ್ತದೆ.
ORNAMENTAL | CEILINGS | VERSATILE USAGE
ಆಭರಣ ಸಂಬಂಧಿ ಇತರೆ
ಒಳ ಮತ್ತು ಹೊರ ಸೌಂದರ್ಯ, ಅಲಂಕಾರ ಮತ್ತು ವಿನ್ಯಾಸಕ್ಕೆ ನಿಮ್ಮ ಕಲ್ಪನೆಯ ಕಲಾತ್ಮಕತೆಯನ್ನು ಒದಗಿಸಲು ಬಿರ್ಲಾ ವೈಟ್‌ ಸಿಮೆಂಟ್‌ ಬಳಸಿ. ಇದು ನಿಮಗೆ ಮೂರ್ತಿಗಳು, ಕಲಾತ್ಮಕತೆಗಳು, ಬ್ಯಾಲಸ್ಟ್ರೇಡ್‌ಗಳು, ಹೂವಿನ ಕುಂಡಗಳು, ಅಲಂಕಾರಿಕ ಗ್ರಿಲ್‌ಗಳು, ಕಾರಂಜಿ ಮತ್ತು ಹಲವು ಇತರ ರೀತಿಯ ಅಲಂಕಾರ ಸಂಬಂಧಿ ಸಾಮಗ್ರಿಗಳನ್ನು ರೂಪಿಸಲು ಸ್ವಾತಂತ್ರ್ಯವನ್ನು ನೀಡುತ್ತದೆ.
ಛಾವಣಿ ಇತರೆ
ಗೋಡೆ ಮತ್ತು ಫ್ಲೋರ್‌ಗಳ ವಿಚಾರದಲ್ಲಿ ಇದು ಅತ್ಯಂತ ಉಪಯುಕ್ತವಾಗಿದ್ದು, ಸೀಲಿಂಗ್‌ಗೆ ಉತ್ತಮ ಫಿನಿಶ್ ನೀಡಲು ಸಹಾಯ ಮಾಡುವುದರಿಂದ ಬಿರ್ಲಾ ವೈಟ್ ಸಿಮೆಂಟ್‌ ಸೀಲಿಂಗ್‌ಗೂ ಸೂಕ್ತವಾಗಿದೆ.
ವೈವಿಧ್ಯಮಯ ಬಳಕೆ ಇತರೆ
ಸೆರಾಮಿಕ್ ಟೈಲ್‌ಗಳು, ವಿಟ್ರಿಫೈಡ್‌ ಟೈಲ್ಸ್, ಸ್ಟೋನ್ ಟೈಲ್ಸ್ ಮತ್ತು ಸ್ಟೋನ್ ಸ್ಲಾಬ್‌ಗಳ (ಟೈಲ್ ಗ್ರೋಟ್) ಗಂಟುಗಳನ್ನು ಜೋಡಿಸಲು ಬಿರ್ಲಾ ವೈಟ್ ಸಿಮೆಂಟ್‌ ಅತ್ಯಂತ ಸೂಕ್ತವಾಗಿದೆ.
ಟೆಕ್ನಿಕಲ್ ವಿಶೇಷಣಗಳು
ಗುಣಲಕ್ಷಣಗಳು IS: 8042. 2015 ಅವಶ್ಯಕತೆ ವಿಶೇಷಣಗಳು ವಿಶಿಷ್ಟ‌ ಶ್ರೇಣಿ
CHEMICAL
a. Insoluble Residue % Max. 4.0 Max. 2.0 1.0 - 1.6
b. Iron Oxide % Max. 1.0 Max. 0.34 0.28 - 0.34
c. Magnesium Oxide % Max. 6.0 Max. 5.0 3.5 - 5.0
d. Sulphur Trioxide % Max. 3.5 Max. 3.5 2.7 - 3.3
e. Lime Saturation Factor 0.66 - 1.02 Min. 0.86 0.86 - 0.92
f. Loss on Ignition % Max. 7.0 Max. 5.5 3.5 - 5.5
PHYSICAL
a. Degree of Whiteness%
ISI Scale Min. 70 Min. 82 82 - 85
Hunters Scale - Min. 90 90 - 92
b. Fineness, (Blaine) m2/kg (Specific Surface) Min. 225 330 330 - 360
c. Setting Time (Minutes)
1. Initial Min. 30 Min. 80 80 - 100
2. Final Max. 600 Max. 150 120 - 150
d. Soundness
1. Le-Chateliers Method (mm) Max. 10 Max. 2.0 1.0 - 2.0
2. Autoclave Expansion % Max. 0.8 Max. 0.2 0.08 - 0.2
e. Compressive Strength (Mpa)
(Cement and Std. Sand Mortar 1:3)
3 days 72 ± 1hr Min. 16.0 Min. 35 35 - 40
7 days 168 ± 2hr Min. 22.0 Min. 45 45 - 50
28 days 672 ± 4hr Min. 33.0 Min. 55 55 - 60
f. Retention on 63 micron sieve % - Max. 3.0 0.6 - 3.00
ಪದೇ ಪದೇ ಕೇಳಲಾದ ಪ್ರಶ್ನೆಗಳು
Show All

ಬಿರ್ಲಾ ವೈಟ್ ಸಿಮೆಂಟ್‌ ವಾಶ್‌ ಒಂದು ಬಾಳಿಕೆ ಬರಬಲ್ಲವೈಟ್‌ ಸಿಮೆಂಟ್‌ನ ಅಪ್ಲಿಕೇಶನ್‌ ಆಗಿದ್ದು, ಹೊಸದಾಗಿ ಪ್ಲಾಸ್ಟರ್ ಮಾಡಿದ ಹೊರ ಮತ್ತು ಒಳ ಮೇಲ್ಮೈಗೆ ಕೋಟ್ ಮಾಡಬಹುದಾಗಿದೆ.

ಬಿರ್ಲಾ ವೈಟ್‌ ಸಿಮೆಂಟ್‌ ವಾಶ್ ಸಣ್ಣ ಬಿರುಕುಗಳನ್ನು ತುಂಬುತ್ತದೆ. ಇದು ಸಾಮಾನ್ಯವಾಗಿ ಸಿಮೆಂಟ್‌ ಮತ್ತು ಪ್ಲಾಸ್ಟರ್ ಸರ್ಫೇಸ್‌ ಮೇಲೆ ಕಂಡುಬರುವ ಬಿರುಕು ತುಂಬಲು ಸೂಕ್ತವಾಗಿದೆ. ಇದು ಸ್ಟ್ರಕ್ಚರ್‌ಗೆ ನೀರು ಸೇರಿಕೊಳ್ಳುವುದನ್ನು ತಡೆಯುತ್ತದೆ ಮತ್ತು ಇದರ ಮೇಲೆ ಅಪ್ಲೈ ಮಾಡುವ ಪೇಂಟ್ ಮತ್ತು ಪ್ರೈಮರ್ ಕೋಟ್‌ಗಳಿಗೆ ಅಂಡರ್‌ಕೋಟ್ ಆಗಿ ಕೆಲಸ ಮಾಡುತ್ತದೆ. ಉತ್ತಮ ವೈಟ್‌ ಸಿಮೆಂಟ್ ಬಳಕೆಯೇನೆಂದರೆ, ಅಡಿಪಾಯದಿಂದ ಪೇಂಟ್ ಹೀರಿಕೊಳ್ಳುವುದನ್ನು ತಡೆಯುತ್ತದೆ ಮತ್ತು ಕವರೇಜ್ ಕೂಡ ಹೆಚ್ಚಾಗಿರುತ್ತದೆ. ಬಿರ್ಲಾ ವೈಟ್ ಸಿಮೆಂಟ್‌ ವಾಶ್‌ ಬೇಸ್‌ನಲ್ಲಿ ಒಂದು ಪರದೆಯಾಗಿ ಕೆಲಸ ಮಾಡುತ್ತದೆ. ಇದರಿಂದಾಗಿ ನಿಮಗೆ ಬಾಳಿಕೆ ಹೆಚ್ಚುತ್ತದೆ ಮತ್ತು ಪೇಂಟ್ ನಂತರದಲ್ಲಿ ಫ್ಲಾಕ್ ಆಗದಂತೆ ಅಥವಾ ಉದುರಿ ಬೀಳದಂತೆ ತಡೆಯುತ್ತದೆ. ಹೀಗಾಗಿ ಇದು ಗೋಡೆಗೆ ಉತ್ತಮ ಹೊಳಪು ನೀಡುತ್ತದೆ.

ಹೌದು, ಬಿರ್ಲಾ ವೈಟ್ ಸಿಮೆಂಟ್‌ ವಾಶ್‌ಗೆ ಅಪ್ಲೈ ಮಾಡಿದ ನಂತರ 2 ರಿಂದ 3 ದಿನಗಳವರೆಗೆ ಕ್ಯೂರಿಂಗ್ ಮಾಡಬೇಕಾಗುತ್ತದೆ.

ಸ್ಮೂತ್ ಫಿನಿಶ್ ಪಡೆಯಲು 2 ರಿಂದ 3 ಕೋಟ್ ಬಿರ್ಲಾ ವೈಟ್ ಸಿಮೆಂಟ್‌ ವಾಶ್‌ ಸಾಕಾಗುತ್ತದೆ. ಆದರೆ, ಇದನ್ನು ಅಂಡರ್‌ಕೋಟ್‌ ಆಗಿ ಬಳಸಿದರೆ, ಒಂದು ಕೋಟ್ ಸಾಕಾಗುತ್ತದೆ.

ಧೂಳು, ಗ್ರೀಸ್, ಲೇಟೆನ್ಸ್‌ ಇತ್ಯಾದಿಯಿಂದ ಬೇಸ್‌ ಸರ್ಫೇಸ್‌ ಮುಕ್ತವಾಗಿರಬೇಕು. ಬಿರ್ಲಾ ವೈಟ್ ಸಿಮೆಂಟ್‌ ವಾಶ್ ಅನ್ನು ಅಪ್ಲೈ ಮಾಡುವುದಕ್ಕೂ ಮೊದಲು, ಸರ್ಫೇಸ್‌ ಅನ್ನು ಮೊದಲೇ ಒದ್ದೆ ಮಾಡಬೇಕು. ಅಧೆಶನ್‌ ನಷ್ಟವನ್ನು ತಡೆಯಲು ಮತ್ತು ಸಿಮೆಂಟ್‌ ವಾಶ್‌ನ ಧೂಳು ಹೊಡೆಯಲು ಈ ಹಂತ ಅತ್ಯಂತ ಪ್ರಮುಖವಾಗಿದೆ.

ಸಾಮಾನ್ಯವಾಗಿ, ಇದನ್ನು ನಾವು ಶಿಫಾರಸು ಮಾಡುವುದಿಲ್ಲ. ಆದರೆ, ಪೇಂಟ್ ಮಾಡಿದ ಮೇಲ್ಮೈ ಮೇಲೆ ನೀವು ಅಪ್ಲೈ ಮಾಡಲು ಬಯಸಿದರೆ, ನಿಮ್ಮ ಸರ್ಫೇಸ್ ಅನ್ನು ಸರಿಯಾಗಿ ಸಿದ್ಧ ಮಾಡಿಕೊಂಡಿರುವುದನ್ನು ಖಚಿತಪಡಿಸಿ. ಬೇಸ್ ಸಬ್‌ಸ್ಟ್ರೇಟ್‌ ಜೊತೆಗೆ ಉತ್ತಮ ಬಾಂಡ್‌ಅನ್ನು ಸಿಮೆಂಟ್ ಕೋಟ್ ಒದಗಿಸುತ್ತದೆ.

ಟಾಪ್‌ಕೋಟ್ ಪೇಂಟ್ ಅನ್ನು ಅಪ್ಲೈ ಮಾಡದಿದ್ದರೆ ಬಿರ್ಲಾ ವೈಟ್ ಸಿಮೆಂಟ್‌ ವಾಶ್‌ ಸಾಮಾನ್ಯವಾಗಿ 2 ರಿಂದ 3 ವರ್ಷಗಳವರೆಗೆ ಇರುತ್ತದೆ. ಟಾಪ್‌ಕೋಟ್ ಅನ್ನು ಅಪ್ಲೈ ಮಾಡಿದರೆ ಇನ್ನೂ ಹೆಚ್ಚು ಕಾಲ ಬಾಳಿಕೆ ಬರುತ್ತದೆ.

ಸಬ್‌ಸ್ಟ್ರೇಟ್‌ನ ರೀತಿಯನ್ನು ಕವರೇಜ್ ಅವಲಂಬಿಸಿರುತ್ತದೆ. ಸಬ್‌ಸ್ಟ್ರೇಟ್‌ ಕುಳಿಯನ್ನು ಹೊಂದಿದ್ದರೆ, ಕಡಿಮೆ ಕವರೇಜ್ ನೀಡುತ್ತದೆ ಮತ್ತು ಕುಳಿ ಇಲ್ಲದಿದ್ದರೆ ಹೆಚ್ಚು ಕೊಡುತ್ತದೆ. ಸಾಮಾನ್ಯವಾಗಿ, 1 ಕಿಲೋ ಬಿರ್ಲಾ ವೈಟ್ ಸಿಮೆಂಟ್‌ 2.32 ಚದರ ಮೀಟರ್‌ ಇಂದ 2.79 ಚದರ ಮೀಟರ್‌ ಅನ್ನು ಪ್ರತಿ ಎರಡು ಕೋಟ್‌ಗಳಿಗೆ ಸಾಮಾನ್ಯ ಸಬ್‌ಸ್ಟ್ರೇಟ್‌ನಲ್ಲಿ ಒದಗಿಸುತ್ತದೆ.

ಅಗತ್ಯ ಶೇಡ್‌ ಪಡೆಯಲು ವೈಟ್‌ ಸಿಮೆಂಟ್‌, ಫಿಲ್ಲರ್‌ಗಳು, ಅಡಿಟಿವ್‌ಗಳು, ಎಕ್ಸ್‌ಟೆಂಡರ್‌ಗಳು ಮತ್ತು ಪಿಗ್ಮೆಂಟ್‌ಗಳನ್ನು ಮಿಶ್ರಣ ಮಾಡಿ ಸಿಮೆಂಟ್‌ ಪೇಂಟ್‌ಮಾಡಲಾಗುತ್ತದೆ. ಇನ್ನೊಂದೆಡೆ ಸಿಮೆಂಟ್‌ ವಾಶ್‌ ಅನ್ನು ಯಾವುದೇ ಅಡಿಟಿವ್‌ಗಳಿಲ್ಲದೇ ಶುದ್ಧ ವೈಟ್ ಸಿಮೆಂಟ್ ಸ್ಲರಿಯನ್ನು ಬಳಸಿ ಕೋಟಿಂಗ್ ಮಾಡಲಾಗಿರುತ್ತದೆ; ಇದು ಬಿಳಿ ಬಣ್ಣದಲ್ಲಿ ಮಾತ್ರ ಲಭ್ಯವಿದೆ.

ಹೌದು, ಬಿರ್ಲಾ ವೈಟ್‌ ಸಿಮೆಂಟ್‌ ಗ್ರೀನ್‌ಪ್ರೋ ಮಾನದಂಡಗಳನ್ನು ಪೂರೈಸುತ್ತದೆ ಮತ್ತು ಗ್ರೀನ್‌ಪ್ರೋ ಪ್ರಮಾಣೀಕರಣಕ್ಕೆ ಅರ್ಹವಾಗಿದೆ.

ಪ್ರಸ್ತುತ ಆನ್‌ಲೈನ್ ಪಾವತಿಯ ಆಯ್ಕೆ ಇಲ್ಲ. ಹಾಗೂ, ನಾವು ನಮ್ಮ ಯಾವುದೇ ಉತ್ಪನ್ನಗಳನ್ನು ಸದ್ಯಕ್ಕೆ ಮನೆಗೆ ನೇರವಾಗಿ ತಲುಪಿಸುವುದಿಲ್ಲ. ಅವುಗಳನ್ನು ನಮ್ಮ ಸ್ಟಾಕಿಸ್ಟ್ ನೆಟ್‌ವರ್ಕ್ ಮೂಲಕ ಮಾರಾಟ ಮಾಡಲಾಗುತ್ತದೆ. ಆದರೆ, ಬಿರ್ಲಾ ವೈಟ್‌ ಸಿಮೆಂಟ್‌ ಅಪ್ಲೈ ಮಾಡಲು ತರಬೇತಿ ಹೊಂದಿದ ಕಾಂಟ್ರಾಕ್ಟರ್ ಬೇಕಾಗುತ್ತದೆ. ಹೀಗಾಗಿ ನಾವು ನಮ್ಮ ಅಧಿಕೃತ ರಿಟೇಲರ್/ಸ್ಟಾಕಿಸ್ಟ್ ಮೂಲಕ ಖರೀದಿ ಮಾಡುವಂತೆ ಶಿಫಾರಸು ಮಾಡುತ್ತೇವೆ. ಅವರು ತರಬೇತಿ ಹೊಂದಿರುವ ಕುಶಲ ಗುತ್ತಿಗೆದಾರರೊಂದಿಗೆ ಸಂಪರ್ಕ ಸಾಧಿಸಲು ನಿಮಗೆ ಸಹಾಯ ಮಾಡುತ್ತಾರೆ.

ತರಬೇತಿ ಹೊಂದಿರುವ ಮತ್ತು ಬದ್ಧ ಸಿವಿಲ್ ಇಂಜಿನಿಯರುಗಳ ತಂಡವನ್ನು ಭಾರತದಾದ್ಯಂತ ಸಿಎಎಸ್‌ಸಿ ಬೆಂಬಲಕ್ಕೆ (ಗ್ರಾಹಕ ಅಪ್ಲಿಕೇಶನ್ ಬೆಂಬಲ ಕೋಶ) ಬಿರ್ಲಾ ವೈಟ್‌ ಹೊಂದಿದೆ. ಈ ಸಿವಿಲ್ ಇಂಜಿನಿಯರುಗಳು ಆನ್‌ ಸೈಟ್ ತಾಂತ್ರಿಕ ಬೆಂಬಲವನ್ನು ಒದಗಿಸುತ್ತಾರೆ ಮತ್ತು ಆನ್‌ ಸೈಟ್ ಸ್ಯಾಂಪ್ಲಿಂಗ್ ಒದಗಿಸುತ್ತಾರೆ. ವಿಶೇಷ ತರಬೇತಿ ಮತ್ತು ಆಧುನಿಕ ಪರಿಕರಗಳನ್ನು ಬಳಸಿ ಮೇಲ್ಮೈ ಫಿನಿಶಿಂಗ್‌ ಅಪ್ಲಿಕೇಟರ್‌ಗಳಿಗೆ ತರಬೇತಿ ನೀಡುತ್ತಾರೆ. ಅವರಿಗೆ ಇದು ಪರಿಣಿತಿ ಒದಗಿಸಲು ಮತ್ತು ವಿಶೇಷ ಬಿರ್ಲಾ ವೈಟ್ ಅಪ್ಲಿಕೇಟರ್‌ಗಳಾಗಲು ನೆರವಾಗುತ್ತದೆ.
ಲಭ್ಯವಿರುವ ಪ್ಯಾಕ್ ಸೈಜ್ ಗಳು
ವೀಡಿಯೋಗಳು